liger; ಅಕ್ರಮ ಹಣ ವರ್ಗಾವಣೆ ಆರೋಪ: ವಿಜಯ್ ದೇವರಕೊಂಡಗೆ ED ಡ್ರಿಲ್
ಲೈಗರ್ ಸಿನಿಮಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನಟ ವಿಜಯ್ ದೇವರಕೊಂಡ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.

ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಲೈಗರ್ ಸಿನಿಮಾ ರಿಲೀಸ್ ಆಗಿ ಫ್ಲಾಪ್ ಆಗಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ಮಿಂಚಿದ್ದರು. ದೊಡ್ಡ ಮಟ್ಟದ ಪ್ರಚಾರಗಳಿಂದ ಭಾರಿ ಸದ್ದು ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಆದರೆ ಲೈಗರ್ ಸಿನಿಮಾಗೆ ಹಣ ಹೂಡಿದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ನಿರ್ದೇಶಕ ಹಾಗೂ ನಿರ್ಮಾಪಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಹಾಗೂ ನಟ ವಿಜಯ್ ದೇವರಕೊಂಡ ಅವರಿಗೆ ವಿಚಾರಣೆಗೆ ಹಾಜರಾಗುಂತೆ ನೋಟಿಸ್ ನೀಡಲಾಗಿತ್ತು. ಇಂದು (ನವೆಂಬರ್ 30) ವಿಜಯ್ ದೇವರಕೊಂಡ ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಹಾಜರಾಗಿದ್ದರು. ಹೈದರಾಬಾದ್‌ನಲ್ಲಿರುವ ಇಡಿ ಕಚೇರಿಗೆ ವಿಜಯ್ ದೇವರಕೊಂಡ ಭೇಟಿ ನೀಡಿ ವಿಚಾರಣೆ ಎದುರಿಸಿದರು.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ಆಪಾದಿತ ಉಲ್ಲಂಘನೆಯ ಕುರಿತು ಕೇಂದ್ರೀಯ ಸಂಸ್ಥೆ ತನಿಖೆ ನಡೆಸುತ್ತಿದೆ. ವಿಲೈಗ್ ಸಿನಿಮಾಗೆ ಹಣದ ಮೂಲ ಹಾಗೂ ಅವರ ಸಂಭಾವನೆ ಮತ್ತು ಅಮೇರಿಕನ್ ಬಾಕ್ಸರ್ ಮೈಕ್ ಟೈಸನ್ ಅವರಿಗೆ ನೀಡಿದ ಸಂಭಾವನೆ ಸೇರಿದಂತೆ ಇತರ ನಟರಿಗೆ ಪಾವತಿಸಿದ ಹಣದ ಬಗ್ಗೆಯೂ ವಿಜಯ್ ದೇವರಕೊಂಡ ಅವರಿಗೆ ಪ್ರಶ್ನೆ ಎದುರಾಗಿದೆ ಎನ್ನಲಾಗಿದೆ. ಇತ್ತೀಚಿಗಷ್ಟೆ ಎಂದರೆ ನವೆಂಬರ್ 17ರಂದು ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಇಬ್ಬರೂ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದರು.
'ಲೈಗರ್' ಬಂಡವಾಳದ ಮೇಲೆ ಅನುಮಾನ; ಇಡಿ ವಿಚಾರಣೆ ಎದುರಿಸಿದ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್
ಲೈಗರ್ ಸಿನಿಮಾಗೆ ವಿದೇಶದಿಂದ ಹಣ ಹರಿದು ಬಂದಿರುವ ಅನುಮಾನ ವ್ಯಕ್ತವಾಗಿದ್ದು ಹಣ ವರ್ಗಾವಣೆ ನಿಯಮ ಉಲ್ಲಂಘನೆಯಾಗಿರುವ ಆರೋಪದ ಮೇರೆಗೆ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಮತ್ತು ವಿಜಯ್ ದೇವರಕೊಂಡ ಸೇರಿದಂತೆ ಅನೇಕರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಗುರುವಾರ (ನವೆಂಬರ್ 17) ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಇಬ್ಬರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಿ ಹಲವು ಗಂಟೆಗಳ ಕಾಲ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.
ಲೈಗರ್ ಸಿನಿಮಾಗೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಲಾಗಿತ್ತು. ಅದರಲ್ಲೂ ಸಿನಿಮಾದಲ್ಲಿ ಅಂತರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಕೂಡ ನಟಿಸಿದ್ದರು. ಟೈಸನ್ ಭಾಗದ ಚಿತ್ರೀಕರಣ ವಿದೇಶದಲ್ಲಿ ನಡೆದಿತ್ತು. ಇಡೀ ತಂಡ ಅಮೆರಿಕಾಗೆ ಹೋಗಿತ್ತು. ಟೈಸನ್ ಶೂಟಿಂಗ್‌ಗೆ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿತ್ತು ಸಿನಿಮಾತಂಡ. ಇಡಿ ವಿಚಾರಣೆ ಬಗ್ಗೆ ಪುರಿಜಗನ್ನಾಥ್ ಅಥವಾ ಚಾರ್ಮಿ ಕೌರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
'ಲೈಗರ್' ಹೀನಾಯ ಸೋಲು; ನಿರ್ದೇಶಕ ಪುರಿ ಜಗನ್ನಾಥ್‌ಗೆ ಬೆದರಿಕೆ, ಆಡಿಯೋ ಕ್ಲಿಪ್ ವೈರಲ್
ಲೈಗರ್ ಸಿನಿಮಾ ಅಗಸ್ಟ್ 25ರಂದು ತೆರೆ ಕಂಡಿತು. ಇದು ವಿಜಯ್ ದೇವರಕೊಂಡ ಅವರ ಮೊದಲ ಹಿಂದಿ ಸಿನಿಮಾ. ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಿದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಡಲಾಗಿತ್ತು. ವಿಜಯ್ ದೇವರಕೊಂಡ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದರು. ಆದರೆ ಆ ನಿರೀಕ್ಷೆಯ ಮಟ್ಟ ತಲುಪುವಲ್ಲಿ ಲೈಗರ್ ವಿಫಲವಾಯಿತು. ಸಿನಿಮಾ ಸೋಲಿನ ಬೇಸರದಲ್ಲಿದ್ದ ಪುರಿಗೆ ಈಗ ಇಡಿ ಶಾಕ್ ನೀಡಿದೆ.