ಸಾರಾ ಅಲಿ ಖಾನ್ ಜೊತೆ ನಟಿಸೋ ಮೊದಲೇ ನಟ ವರುಣ್ ಧವನ್‌ಗೆ ವಾರ್ನ್‌ ಮಾಡಿದ್ಯಾರು..? ನಮಸ್ತೆ ಚೆಲುವೆ ಜೊತೆ ನಟಿಸೋ ಮುನ್ನ ಬಾಲಿವುಡ್ ನಟ ವರುಣ್ ಧವನ್‌ಗೆ ಮೂವರು ಟಾಪ್ ಸೆಲೆಬ್ರಿಟಿಗಳು ವಾರ್ನ್ ಮಾಡಿದ್ದಾರಂತೆ. ಕೂಲಿ ನಂ.1 ಸಿನಿಮಾದಲ್ಲಿ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಜೋಡಿ ತೆರೆಯ ಮೇಲೆ ಸೂಪರ್ ಆಗಿ ಮೂಡಿ ಬಂದಿದೆ. ಆದರೆ ಸೈಫ್ ಅಲಿ ಖಾನ್ ಮಗಳ ಜೊತೆ ನಟಿಸೋ ಮುನ್ನ ವರುಣ್ ಧವನ್‌ಗೆ ವಾರ್ನಿಂಗ್ ಕೊಟ್ಟಿದ್ದು ಯಾರು..? ಅಷ್ಟಕ್ಕೂ ವಾರ್ನಿಂಗ್ ಕೊಟ್ಟಿದ್ದಾದರೂ ಏತಕ್ಕೆ..?

ಅಕ್ಷಯ್ ಕುಮಾರ್ ಜೊತೆ ಸೈಫ್ ಅಲಿ ಖಾನ್ ಮಗಳ ರೊಮ್ಯಾನ್ಸ್..!

ವರುಣ್ ಮತ್ತು ಸಾರಾ ಅಲಿ ಖಾನ್ ದ ಕಪಿಲ್ ಶರ್ಮಾ ಶೋನಲ್ಲಿ ಅವರ ಸಿನಿಮಾ ಪ್ರಮೋಟ್ ಮಾಡಲಿದ್ದಾರೆ. ಎಪಿಸೋಡ್ ಪ್ರೋಮೋ ವೈರಲ್ ಅಗಿದ್ದು, ಸಾರಾ ಜೊತೆ ನಟಿಸೋ ಬಗ್ಗೆ ಟಾಪ್ ನಟರಾದ ವಿಕ್ಕಿ ಕೌಶಲ್, ಆಯುಷ್ಮಾನ್ ಖುರಾನ ಮತ್ತು ಕಾರ್ತಿಕ್ ಆರ್ಯನ್ ವಾರ್ನ್ ಮಾಡಿದ್ದಾರಂತೆ. ಇದನ್ನು ನಟ ವರುಣ್ ಅವರೇ ಹೇಳಿದ್ದಾರೆ.

ಸಾರಾ ಜೊತೆ ನಟಿಸೋ ವಿಚಾರ ತಿಳಿದು ನಟರು ವರುಣ್‌ಗೆ ಮೆಸೇಜ್ ಮಾಡಿದ್ದು, ಆಕೆಯಿಂದ ತಪ್ಪಿಸಿಕೋ ಎಂದಿದ್ದಾರಂತೆ. ಈ ಪ್ರೊಮೋ ವಿಡಿಯೋ ಈಗ ವೈರಲ್ ಆಗಿದೆ. 2018ರಲ್ಲಿ ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟ ಸಾರಾ ಮೊದಲ ಸಿನಿಮಾ ಮಾಡಿದ್ದು ಸುಶಾಂತ್ ಸಿಂಗ್ ರಜಪೂತ್ ಜೊತೆ.