ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಂಟ್ರಾಗಿ ರೇ ಶೂಟಿಂಗ್ ಸೆಟ್‌ನಲ್ಲಿ ಸಾರಾ ಅಲಿ ಖಾನ್ ಜೊತೆ ಸೇರಿದ್ದಾರೆ. ಆನಂದ್ ಎಲ್ ರೈ ನಿರ್ದೇಶನದ ಅಟ್ರಾಂಗಿ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಧನುಷ್ ಅವರೂ ನಟಿಸಲಿದ್ದಾರೆ.

ಈ ಮೂರು ಪದಗಳು ತರುವ ಖುಷಿಗೆ ಬೇರೆ ಸಾಟಿ ಇಲ್ಲ: ಲೈಟ್, ಕ್ಯಾಮೆರಾ, ಆಕ್ಷನ್. ಅಟ್ರಾಂಗಿ ರೇ ಶೂಟಿಂಗ್ ಶುರುವಾಗಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಶುಭಾಶಯ ಇರಲಿ ಎಂದು ಬರೆದಿದ್ದಾರೆ. ಸಾರಾ ಅಲಿ ಖಾನ್ ಅವರೂ ಇದೇ ಫೋಟೋ ಶೇರ್ ಮಾಡಿದ್ದಾರೆ.

ರಣವೀರ್ ಜೊತೆಗಿನ ರಿಲೆಷನ್‌ಶಿಪ್‌ ಮದುವೆಯಾಗಿ ಬದಲಾದ ಬಗ್ಗೆ ದೀಪಿಕಾ ಹೇಳಿದ್ದಿಷ್ಟು!

ನಿಮ್ಮ ಜೊತೆ ಕೆಲಸ ಮಾಡೋಕಾಗ್ತಿರೋದಕ್ಕೆ ನಾನು ಧನ್ಯ ಎಂದು ಸಾರಾ ಅಲಿ ಖಾನ್ ಬರೆದಿದ್ದಾರೆ. ಮದುರೈನಲ್ಲಿ ಸೆಕೆಂಡ್ ಶೂಟಿಂಗ್ ಶೆಡ್ಯೂಲ್ ಆರಂಭವಾಗಿತ್ತು. ಇದೀಗ ನಟಿ ಶೂಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಮೊದಲ ಬಾರಿ ನಟ ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಸಾರಾ.

 
 
 
 
 
 
 
 
 
 
 
 
 
 
 

A post shared by Akshay Kumar (@akshaykumar)