ಇತ್ತೀಚಿಗೆ ಅಮೇಜಾನ್‌ ಪ್ರೈಮ್‌ನಲ್ಲಿ ಲವರ್ ಬಾಯ್ ವರುಣ್ ಧವನ್ ಅಭಿನಯದ ಕೂಲಿ ನಂ.1 ಚಿತ್ರ ಬಿಡುಗಡೆ ಮಾಡಲಾಗಿತ್ತು. ಪಾಸಿಟಿವ್ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರದ ಬಗ್ಗೆ ನಿರ್ದೇಶಕ ಡೇವಿಡ್ ಮಾತನಾಡಿದ್ದಾರೆ. ಡೇವಿಡ್ ಮತ್ಯಾರೂ ಅಲ್ಲ ನಾಯಕ ನಟ ವರುಣ್ ತಂದೆ. ತಂದೆ ಮಗನ ಸಿನಿಮಾ ಡೈರೆಕ್ಟ್‌ ಮಾಡಿದ್ದಾರೆ ಅಂದ್ಮೇಲೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳು ಇದ್ದೇ ಇರುತ್ತವೆ. ಚಿತ್ರದ ಯಶಸ್ವಿ ಪ್ರಯುಕ್ತ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಡೇವಿಡ್‌ ಪುತ್ರನ ಕಿಸ್ಸಿಂಗ್ ದೃಶ್ಯದ ಬಗ್ಗೆಯೂ ಮಾತನಾಡಿದ್ದಾರೆ. 

ಕರಣ್‌ ಜೋಹರ್‌ ಮನೆಯ ಪಾರ್ಟಿಯಲ್ಲಿ ಕಿತ್ತಾಡಿದ ರಣಬೀರ್ ಮತ್ತು ವರುಣ್ ಧವನ್‌? 

ಆಫ್‌ ಸ್ಕ್ರೀನ್ ಸ್ನೇಹಿತರಾಗಿರುವ ಸಾರಾ ಅಲಿ ಖಾನ್ ಹಾಗೂ ವರುಣ್ ಆನ್‌ ಸ್ಕ್ರೀನ್ ಕೆಮಿಸ್ಟ್ರಿ ಹೇಗಿರುತ್ತದೆ ಎಂಬ ಕುತೂಹಲಕ್ಕಾದರೂ ಸಿನಿ ಪ್ರೇಮಿಗಳು ಈ ಸಿನಿಮಾ ನೋಡುತ್ತಿದ್ದಾರೆ ಅಂದ್ರೆ ತಪ್ಪಾಗದು. ಸಕ್ಸಸ್‌ ಮಾತುಕತೆಯಲ್ಲಿ ಪುತ್ರನ ರೊಮ್ಯಾನ್ಸ್‌ ದೃಶ್ಯ ಡೈರೆಕ್ಟ್ ಮಾಡಲು ಹೇಗಿತ್ತು ಎಂದು ಡೇವಿಡ್‌ ಅವರನ್ನು ಪ್ರಶ್ನೆ ಮಾಡಲಾಗಿತ್ತು..

ಡೇವಿಡ್ ಉತ್ತರ:
'ಇಂತಹ ದೃಶ್ಯ ಚಿತ್ರೀಕರಣ ಮಾಡಲು ಸುಲಭವಾಗಿರುತ್ತದೆ. ಏಕೆಂದರೆ ಸೆಟ್‌ನಲ್ಲಿ ಎಲ್ಲರೂ ಪ್ರೊಫೆಷನಲ್ಸ್‌ ಇರುತ್ತಾರೆ. ನಾನು ಶೂಟಿಂಗ್ ಮಾಡುವಾಗ ಈ ದೃಶ್ಯ ಮಾಡಬೇಕಾ, ಬೇಡವಾ ಎಂದು ವರುಣ್‌ನನ್ನು ಎಂದೂ ಕೇಳಿಲ್ಲ. ಚಿತ್ರಕಥೆ ಡಿಮ್ಯಾಂಡ್‌ ಮಾಡಿದ್ದನ್ನು ಅವರು ಮಾಡಲೇ ಬೇಕು,' ಎಂದು ದೇವಿಡ್ ಮಾತನಾಡಿದ್ದಾರೆ.

ಸೈಫ್ ಮಗಳ ಜೊತೆ ನಟಿಸೋ ಮುನ್ನ 3 ಟಾಪ್ ಸೆಲೆಬ್ರಿಟಿಗಳಿಂದ ನಟನಿಗೆ ವಾರ್ನಿಂಗ್ 

'ನಿಜ ಹೇಳಬೇಕೆಂದರೆ ಕಿಸ್ಸಿಂಗ್ ದೃಶ್ಯ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಯಾವ ಚಿತ್ರಕಥೆ ಆಯ್ಕೆ ಮಾಡಿಕೊಂಡರೂ ಕಿಸ್ಸಿಂಗ್ ಮುಖ್ಯವಾದ ದೃಶ್ಯ. ಪ್ರೊಫೆಷನಲ್‌ ಆಗಿ ಕೆಲಸ ಮಾಡಿದರೆ ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಹೆದರಿಕೊಂಡು ಅತ್ತ-ಇತ್ತ ನೋಡಬೇಕಾಗಿಲ್ಲ. ಈಗಿನ ಜನರೇಷನ್‌ನಲ್ಲಿ ಇವೆಲ್ಲಾ ತುಂಬಾ ಕಾಮನ್,' ಎಂದು  ಡೇವಿಡ್‌ ನಕ್ಕಿದ್ದಾರೆ.

ಡೇವಿಡ್ ನಿರ್ದೇಶನ ಮಾಡಿರುವ 45ನೇ ಚಿತ್ರ 'ಕೂಲಿ ನಂ.1'. ಓಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ಸಾರಾ ವರುಣ್‌ ಧವನ್‌ರ ಅಂಡರ್‌ ವಾಟರ್‌ ಲಿಪ್‌ಲಾಕ್‌ ಸೀನ್‌ಗೆ ಸೈಫ್‌ ರಿಯಾಕ್ಷನ್‌ ಹೀಗಿದೆ!