ಜುಲೈ 29ರಂದು ಮೂರನೇ ಮದುವೆಯಾಗುವ ಮೂಲಕ ಮತ್ತೊಮ್ಮೆ ವೈವಾಹಿಕ ಬದುಕಿಗೆ ಕಾಲಿಟ್ಟ ನಟಿ ವನಿತಾ ವಿಜಯ್‌ಕುಮಾರ್‌ ಈಗ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಯ ಟಾಪಿಕ್ ಆಗಿದ್ದಾರೆ.

ನಡು ವಯಸ್ಸು ದಾಟಿದರೂ 3ನೇ ಮದುವೆಗೆ ಸೈ ಎಂದ ನಟಿ; 'ಮಾಜಿ'ಗಳ ಕತೆ ಈಗ ಬೇಕಿಲ್ಲ!

ಹೌದು! ವನಿತಾ ವಿಜಯ್‌ಕುಮಾರ್‌ ಮದುವೆಯಾದ ಪೀಟರ್‌ ಚಿತ್ರರಂಗದಲ್ಲೇ ಕೆಲಸ ಮಾಡುವವರು. ಈಗಾಗಲೇ  ಪೀಟರ್‌ಗೆ ಎಲಿಜಿಬತ್‌ ಎಂಬ ಮಹಿಳೆ ಜೊತೆ ಮದುವೆಯಾಗಿದ್ದು ಡಿವೋರ್ಸ್ ಕೊಡದೇ ವನಿತಾರನ್ನು ಮದುವೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಎಲಿಜಿಬತ್‌ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಬರೆದುಕೊಂಡಿದ್ದರು. ಎಲಿಜಿಬತ್‌ ಪರವಾಗಿ ವಾದ ಮಾಡಲು ನಟಿ ಲಕ್ಷ್ಮೀ ರಾಮಕೃಷ್ಣ ಫೀಲ್ಡ್‌ಗೆ ಎಂಟ್ರಿ ಕೊಟ್ಟಿದ್ದರು. 

ತಮ್ಮ ಅಭಿನಯಕ್ಕಿಂತಲೂ ನೇರ ನುಡಿಯ ಗುಣಕ್ಕೆ ಹೆಸರುವಾಸಿಯಾಗಿರುವ ಲಕ್ಷ್ಮೀ ರಾಮಕೃಷ್ಣ ಮಾತುಗಳನ್ನು ಕೇಳದೆ  ವನಿತಾ ವಿಜಯ್‌ಕುಮಾರ್‌ ಆಕೆಯ ವಿರುದ್ಧ ಟ್ಟೀಟ್‌  ಮಾಡಲು ಪ್ರಾರಂಭಿಸಿದ್ದರು. ಚರ್ಚೆ ದಿನೇ ದಿನೇ ಕೆಟ್ಟ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದ ಕಾರಣ ನಟಿ ಕಸ್ತೂರಿ ಶಂಕರ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.  ಮೂರು ಮಹಿಳೆಯರು ವನಿತಾ ವಿಜಯ್‌ ಕುಮಾರ್ ವಿರುದ್ಧವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ಈ ಜಗಳ ಆನ್‌ಲೈನ್ ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.

ಲಾಕ್‌ಡೌನ್‌ನಲ್ಲಿ ಅದ್ಧೂರಿಯಾಗಿ ಮೂರನೇ ಮದುವೆಯಾದ ನಟಿ; ಫೋಟೋ ವೈರಲ್!

ಕಸ್ತೂರಿ ಹೇಳಿಕೆ:

ನಟಿ ಕಸ್ತೂರಿ ಟ್ಟಿಟರ್‌ನಲ್ಲಿ ಲಕ್ಷ್ಮೀ ಅವರಿಗೆ ಸಲಹೆಯೊಂದನ್ನು ನೀಡಿದ್ದು ಯಾವುದೇ ಕಾರಣಕ್ಕೂ ವನಿತಾಳ ಜೊತೆ ಜಗಳ ಮಾಡಬಾರದು ಎಂದು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ವನಿತಾಗೆ ಕೆಲ ಕಾಲ ಬ್ರೇಕ್‌ ತೆಗೆದುಕೊಳ್ಳಲು ಹೇಳಿದ್ದಾರೆ. 

 

ಕಸ್ತೂರಿ ನನ್ನ ವೈಯಕ್ತಿಕ  ಜೀವನದ ಬಗ್ಗೆ ಮಾತನಾಡಲು ಯಾವುದೇ ಹಕ್ಕು ಪಡೆದುಕೊಂಡಿಲ್ಲ ಎಂದು ವನಿತಾ ಹೇಳಿಕೆ ನೀಡಿದ ನಂತರ ಕಸ್ತೂರಿ ಮಾಡಿದ ಟ್ಟಿಟ್‌ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 'ವನಿತಾ ನೀನಗೆ ಪ್ರೈವೆಟ್‌ ಲೈಫ್‌ ಮತ್ತು ಪ್ರೈವರ್ಸಿ ಬಗ್ಗೆ ಮಾತನಾಡಲು ಯಾವುದೇ ಅಧಿಕಾರವಿಲ್ಲ ಯಾಕೆಂದರೆ ನೀನು ಎಲ್ಲವನ್ನು  ಯೂಟ್ಯೂಬ್‌ನಲ್ಲಿ ತೆರೆದಿಟ್ಟಿರುವೆ.  ಇಡೀ ದೇಶವೇ ನೀನು ಮಾತನಾಡುತ್ತಿರುವುದನ್ನು ನೋಡಿದೆ. ನೀನು ಬಳಸುವ ಕೆಟ್ಟ ಪದಗಳು ಎಲ್ಲರಿಗೂ ತಿಳಿಯುತ್ತಿದೆ. ಇದು ಟಿವಿ ಮಾಧ್ಯಮವಲ್ಲ  ಎಡಿಟ್‌ ಮಾಡಿ ಜನರಿಗೆ ತೋರಿಸುವುದಕ್ಕೆ. ನಿನ್ನ ಜೀವನ ನೀನೇ ಹಾಳು ಮಾಡಿಕೊಳ್ಳುತ್ತಿರುವೆ ಇದರಿಂದ ಯಾರನ್ನೂ ದೂರ ಬೇಡ' ಎಂದು ಹೇಳಿದ್ದಾರೆ.

 

ಹೀಗೆ ಮಾತಿಗೆಮಾತು ಬೆಳೆಯುತ್ತಲೇ ಇದ್ದು  ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹೆಚ್ಚಾಗುತ್ತಿದೆ...