ಕೊನೆಗೂ ಉರ್ಫಿ ಸ್ಟೈಲ್‌  ಬಗ್ಗೆ ಮೌನ ಮುರಿದ ಹಿಂದೂಸ್ತಾನಿ ಭಾವು. ಇಷ್ಟು ದಿನ ಸಮಸ್ಯೆ ಇರಲಿಲ್ಲ ಈಗ ಯಾಕೆಂದು ಪ್ರಶ್ನೆ ಮಾಡಿದ ನಟಿ...

ಹಿಂದಿ ಕಿರುತೆರೆ ನಟಿ ಕಮ್ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್‌ ಯಾರಿಗೆ ಗೊತ್ತಿಲ್ಲ ಹೇಳಿ? ದಿನಕ್ಕೊಂದು ವಿಚಿತ್ರ ಉಡುಪು ಧರಿಸಿ ಹೆಡ್‌ಲೈನ್ಸ್‌ ಬ್ರೇಕ್ ಮಾಡುವ ಸುಂದರಿ. ಸೋಷಿಯಲ್ ಮೀಡಿಯಾದಲ್ಲಿ ಎಷ್ಟೇ ನೆಗೆಟಿವ್ ಕಾಮೆಂಟ್ಸ್‌ ಬಂದರೂ ಕೇರ್ ಮಾಡದೆ ನಾನು ಇರುವುದೇ ಹೀಗೆ ಬೇಕಿದ್ದರೆ ನೋಡಿ ಇಲ್ಲದಿದ್ದರೆ ಬಿಡಿ ಎಂದು ಕೂಲ್ ಆಗಿರುವ ಉರ್ಫಿ ವಿರುದ್ಧ ಹಿಂದೂಸ್ತಾನಿ ಭಾವು ಗರಂ ಆಗಿದ್ದಾರೆ. ಹಿಂದೂಸ್ತಾನಿ ಭಾವು ಅಂದ್ರೆ ಯಾರ್ ಅಂದುಕೊಂಡ್ರೆ? ಅದೇ ರುಕೋ ಝರ....ಸಬರ್ ಕರೊ ಅಂತ ಟ್ರೆಂಡ್ ಆದವರು.....

ಹಿಂದೂಸ್ತಾನಿ ಭಾವು ವಿಡಿಯೋ: 

'ಈ ವಿಡಿಯೋದಲ್ಲಿ ಉರ್ಫಿ ಜಾವೇದ್‌ಗೆ ಒಂದು ಕಿವಿ ಮಾತು ಹೇಳಬೇಕು.ಈಗಿನ ಪ್ರಪಂಚದಲ್ಲಿ ನಾನೇ ದೊಡ್ಡ ಫ್ಯಾಷನ್ ಡಿಸೈನರ್ ಎನ್ನುವ ರೀತಿಯಲ್ಲಿ ವರ್ತಿಸುತ್ತಿರುವ ಉರ್ಫಿ..ಮಗಳೇ ಇದು ನಮ್ಮ ಸಂಪ್ರದಾಯವಲ್ಲ ...ಕೆಟ್ಟದಾಗಿ ಡ್ರೆಸ್‌ ಧರಿಸಿ ರಸ್ತೆಯಲ್ಲಿ ಪೋಸ್ ಕೊಡುತ್ತಿರುವುದು ದೊಡ್ಡ ತಪ್ಪು. ನಮ್ಮ ಸಂಪ್ರದಾಯ ತಿಳಿದುಕೋ. ನಿನ್ನಿಂದ ನಮ್ಮ ಸುತ್ತಲು ಇರುವ ಅಕ್ಕ-ತಂಗಿ, ಹೆಣ್ಣು ಮಕ್ಕಳಿಗೆ ತಪ್ಪು ಸಂದೇಶ ಸಿಗುತ್ತಿದೆ. ಹೀಗಾಗಿ ನೆಟ್ಟಗಿರುವ ಬಟ್ಟೆ ಧರಿಸು...ಎಷ್ಟು ಬೇಕಿದ್ದರೂ ಸ್ಟೈಲ್ ಮಾಡ್ಕೋ ಆದರೆ ಸರಿಯಾದ ರೀತಿಯಲ್ಲಿ ಮಾಡು....ಸರಿ ಮಾಡಿಕೊಂಡಿಲ್ಲ ಅಂದ್ರೆ ನಾನು ಬಂದು ಸರಿ ದಾರಿಗೆ ತರಬೇಕಾಗುತ್ತದೆ' ಎಂದು ಹಿಂದೂಸ್ತಾನಿ ಭಾವು ವಿಡಿಯೋದಲ್ಲಿ ಮಾತನಾಡಿದ್ದಾರೆ.

ಹಿಂದೂಸ್ತಾನಿ ಭಾವು ವಿಡಿಯೋ ವೈರಲ್ ಅಗಿ ಉರ್ಫಿ ಗಮನಕ್ಕೆ ಬಂದಿದೆ. ಅದನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಪ್ಲೋಡ್ ಮಾಡಿಕೊಂಡು ಹಿಂದೂಸ್ತಾನಿ ಭಾವು ಉತ್ತರ ಕೊಟ್ಟಿದ್ದಾರೆ. 'ಇದ್ದಕ್ಕಿದ್ದಂತೆ ನಾನು ಧರಿಸುವ ಬಟ್ಟೆ ಬಗ್ಗೆ ಈತನಿಗೆ ಚಿಂತೆ ಶುರುವಾಗಿದೆ..ಇದಕ್ಕೆ ಕಾರಣ ಮೀಡಿಯಾ attention ಕಡಿಮೆ ಆಗಿರುವುದಕ್ಕೆ. ಈ ಕೇಸ್‌ ಇಲ್ಲಿದೆ ಕ್ಲೋಸ್ ಆಗುತ್ತಿದೆ ಪ್ರಭುಗಳೇ. ವರ್ಡಿಕ್ಟ್‌ ಇದೇ - ಪಬ್ಲಿಸಿಟಿಗೆ ಏನು ಬೇಕಿದ್ದರೂ ಮಾಡಲು ಸರಿ ಇರುವ ಕೀಚರು ನೀವು' ಎಂದು ಉರ್ಫಿ ಬರೆದುಕೊಂಡಿದ್ದಾರೆ. ಮತ್ತೊಂದು ಫೋಟೋ ಹಂಚಿಕೊಂಡ ಉರ್ಫಿ 'ನೋಡಿ ಈ ಸಂದರ್ಶನದಲ್ಲಿ ಹಿಂದೂಸ್ತಾನಿ ಭಾವುಗೆ ನನ್ನ ಡ್ರೆಸ್‌ ಬಗ್ಗೆ ಪ್ರಶ್ನೆ ಮಾಡಲಾಗಿತ್ತು ಆಗ ಏನೂ ಸಮಸ್ಯ ಇಲ್ಲ ಎಂದು ಹೇಳಿಕೊಂಡಿದ್ದರು. ಈಗ ಮಾಧ್ಯಮಗಳು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಹೊಸ ಗಿಮಿಕ್ ಶುರು ಮಾಡಿಕೊಂಡಿದ್ದಾನೆ' ಎಂದಿದ್ದಾರೆ ಉರ್ಫಿ. 

Urfi Javed ಚಿನ್ನದ ಬಳೆ ಅಲ್ಲ ಗುರು ಮಾರ್ಕೆಟ್ನಲ್ಲಿ ಸಿಗೋ 200 ರೂ. ಬಳೆ ಎಂದ ನಟಿ!

'ಪಬ್ಲಿಸಿಟಿಗೆ ಜನರು ಹೇಗೆ ಬದಲಾಗುತ್ತಾರೆ ನೋಡಿ. ಮೊದಲು ನನ್ನ ಸ್ನೇಹಿತರಾಲು ಪ್ರಯತ್ನ ಪಡುತ್ತಾರೆ ನಾನು ನಿರಾಕರಿಸಿದ್ದರೆ ನನ್ನ ವಿರುದ್ಧವೇ ಮಾತನಾಡುತ್ತಾರೆ ಇಲ್ಲದಿದ್ದರೆ ಬೆದರಿಕೆ ಹಾಕುತ್ತಾರೆ. ಅವರ ಪರ್ಸನೆಲ್‌ ಅಜೆಂಡ್‌ಗಾಗಿ ಈ ರೀತಿ ಮಾಡುತ್ತಿದ್ದಾರೆ. ಈ ರೀತಿ ನನ್ನ ವಿರುದ್ಧ ಕಿಡಿ ಕಾರುವ ಬದಲು ರೇಪಿಸ್ಟ್‌ಗಳ ವಿರುದ್ಧ ಪ್ರತಿಭಟನೆ ಮಾಡಿದರೆ ಸಮಾಜಕ್ಕೆ ಸಹಾಯವಾಗುತ್ತದೆ. ಇಷ್ಟು ವರ್ಷವೂ ಏನೇ ಆದರೂ ಮಹಿಳೆಯರೇ ಕಾರಣ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ ಯಾಕೆ ಗಂಡಸರ ತಪ್ಪುಗಳು ಇಲ್ವಾ? ನಾವೆಲ್ಲರೂ ಒಂದು ದಿನ ನರಳುತ್ತೀವಿ ನೋಡಿ' ಎಂದು ಬರೆದುಕೊಂಡಿದ್ದಾರೆ.

ಉರ್ಫಿ ವಿರುದ್ಧ ಕೇಸ್:

ಪಬ್ಲಿಕ್‌ನಲ್ಲಿ ಅತಿ ಹೆಚ್ಚು ಮೈ ಕಾಣುವಂತ ಬಟ್ಟೆ ಧರಿಸಿ ಪ್ರಚೋದನೆಗೆ ಕಾರಣವಾಗುತ್ತಿರುವ ಉರ್ಫಿ ಭಾರತದ ಹೆಣ್ಣು ಮಕ್ಕಗಳ ಮನಸ್ಥಿತಿ ಮೇಲೆ ಪರಿಣಾಮ ಬೀರಲಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 'ನನಗೆ ಪಬ್ಲಿಸಿಟಿ ಬೇಕು ಎಂದು ಜನರು ತಿಳಿದುಕೊಂಡಿದ್ದಾರೆ ಆದರೆ ಯಾರಿಗೂ ಗೊತ್ತಿಲ್ಲ ಹೀಗೆ ಹೇಳುತ್ತಿರುವವರು ನನ್ನನ್ನು ಬಳಸಿಕೊಂಡು ಪಬ್ಲಿಸಿಟಿ ಗಳಿಸುತ್ತಿದ್ದಾರೆ. ಈ ಪ್ರಪಂಚ ಹೇಗಿದೆ ಅಂದ್ರೆ ರೇಪಿಸ್ಟ್‌ಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಲ್ಲ ನನ್ನ ಮೇಲೆ ಎಫ್‌ಐಆರ್‌ ಹಾಕುತ್ತಿದ್ದಾರೆ. ನಾನು ಧರಿಸುವ ಬಟ್ಟೆ ನನ್ನ ಇಷ್ಟ ಬೇರೆ ಅವರಿಗೆ ಯಾಕೆ ಸಮಸ್ಯೆ ಕಾಡುತ್ತಿದೆ.ನನ್ನ ಇಷ್ಟ, ಏನು ಬೇಕಿದ್ದರೂ ಧರಿಸುವೆ, ಇದು ತಾಲಿಬಾನ್ ಅಲ್ಲ ಅಫ್ಘಾನಿಸ್ತಾನ ಅಲ್ಲ. ಒಂದು ಹೆಣ್ಣು ಧರಿಸುವ ಬಟ್ಟೆನ ಕಂಟ್ರೋಲ್ ಮಾಡಬೇಕು ಅಂದ್ರೆ ನೀವು ಅಲ್ಲಿಗೆ ಹೋಗಿ ಬಿಡಿ. ಎಫ್‌ಐಆರ್‌ ಹಾಕಿ ಏನು ಉಪಯೋಗ? ಪೊಲೀಸರ ಬಳಿ ಬೇರೆ ಕೇಸ್‌ಗಳು ಇರುತ್ತದೆ..ರೇಪ್‌, ಕಿರುಕುಳ, ಮರ್ಡರ್, ಕಳ್ಳತನ ಎಷ್ಟೊಂದು ಅದೆಲ್ಲಾ ಬಿಟ್ಟು ನನ್ನ ಬಟ್ಟೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರಾ?' ಎಂದು ಹೇಳಿದ್ದರು.

View post on Instagram