ಸಿಂಗಲ್ ಮದರ್ಸ್ಗೆ ಗುಡ್ ನ್ಯೂಸ್ ಕೊಟ್ಟ ನಟ ರಾಮ್ ಚರಣ್ ಪತ್ನಿ
ಸಿಎಸ್ಆರ್-ಅಪೋಲೋ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ನಟ ರಾಮ್ ಚರಣ್ ಪತ್ನಿ ಉಪಾಸನಾ ಒಂಟಿ ಅಮ್ಮಂದಿರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಏನದು?
ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಮದುವೆಯಾಗಿ 11ನೇ ವರ್ಷಕ್ಕೆ ಮಗಳು ಕ್ಲಿಂಕಾರಳ ಅಪ್ಪ-ಅಮ್ಮ ಆಗಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಮುದ್ದಾದ ಮಗಳಿಗೆ ಜನ್ಮ ನೀಡಿದ್ದಾರೆ ಉಪಾಸನಾ (Upasana) ಗರ್ಭ ಧರಿಸಿದ್ದ ಸಂದರ್ಭದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಉಪಾಸನಾ ಅವರು, ತಾವು ಅಮ್ಮನಾಗುತ್ತಿರುವ ಬಗ್ಗೆ ಅಮ್ಮಂದಿರ ದಿನದಂದು ಖುಷಿ ಹಂಚಿಕೊಂಡಿದ್ದರು. ನಾನು ತಾಯಿ ಆಗುತ್ತಿರುವುದಕ್ಕೆ ಹೆಮ್ಮೆ ಪಡುತ್ತಿದ್ದೇನೆ. ನಾನು ಸಮಾಜದ ನಿರೀಕ್ಷೆಗಳನ್ನು ನೋಡಿ ತಾಯಿಯಾಗಿಲ್ಲ. ನನ್ನ ವೈವಾಹಿಕ ಜೀವನವನ್ನು ಮತ್ತಷ್ಟು ಸದೃಢಪಡಿಸಲು ನಾನು ತಾಯಿಯಾಗಿಲ್ಲ. ನನ್ನ ಮಗುವಿಗೆ ಅರ್ಹಪಡುವ ಎಲ್ಲಾ ಪ್ರೀತಿಯನ್ನು ನೀಡಲು ನಾನು ಭಾವನಾತ್ಮಕವಾಗಿ ಸಿದ್ಧವಾಗಿರುವಾಗ ತಾಯಿಯಾಗಿದ್ದೇನೆ ಎಂದು ಉಪಾಸನಾ ಹೇಳಿದ್ದರು. ಮಗುವಾದ ಬಳಿಕ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಹಲವಾರು ದುಬಾರಿ ಗಿಫ್ಟ್ಗಳಿಂದ ಇವರ ಮನೆ ತುಂಬಿ ಹೋಗಿತ್ತು ಎನ್ನಲಾಗಿದೆ. ಉದ್ಯಮಿ ಮುಖೇಶ್ ಅಂಬಾನಿ ರಾಮ್ ಚರಣ್ ಮತ್ತು ಉಪಾಸನಾ ಮಗುವಿಗೆ 1 ಕೋಟಿ ಬೆಲೆಯ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು. ಜೂನ್ 20ರಂದು ಹುಟ್ಟಿರುವ ಮಗುವಿನ ಲಾಲನೆ ಪಾಲನೆಯಲ್ಲಿ ದಂಪತಿ ತೊಡಗಿದ್ದಾರೆ.
ಇದರ ನಡುವೆಯೇ ಉಪಾಸನಾ ಅವರು ಒಂಟಿ ತಾಯಂದಿರಿಗೆ (Single Mother) ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಸಿಎಸ್ಆರ್-ಅಪೋಲೋ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿರುವ ಉಪಾಸನಾ ಅವರು, ಸಿಂಗಲ್ ಮದರ್ ಇನ್ನು ಮುಂದೆ, ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ಚಿಕಿತ್ಸೆಗಾಗಿ ಅಪೋಲೋ (Apolo) ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಹೇಳಿದ್ದಾರೆ. ಉಪಾಸನಾ ಅವರು ಅಪೋಲೋ ಚಿಲ್ಡ್ರನ್ಸ್ ಬ್ರ್ಯಾಂಡ್ ಅನ್ನು ಅಪೋಲೋ ಆಸ್ಪತ್ರೆಗಳ ಸಹಯೋಗದೊಂದಿಗೆ ಪ್ರಾರಂಭಿಸಿದ್ದು, ಈಗ ಸಿಂಗಲ್ ಮದರ್ ಕುರಿತು ಭಾವುಕರಾಗಿ ಮಾತನಾಡಿದ್ದಾರೆ. ಅಪೋಲೋ ಚಿಲ್ಡ್ರನ್ಸ್ ಲೋಗೋ ಅನಾವರಣಗೊಳಿಸಿದ ಅವರು, ಒಂಟಿ ತಾಯಂದಿರು ಅನುಭವಿಸುತ್ತಿರುವ ನೋವಿನ ಕುರಿತು ಮಾತನಾಡಿದ್ದಾರೆ.
11 ವರ್ಷಗಳ ನಂತ್ರ ಪ್ರೆಗ್ನೆಂಟ್ ಆದ್ರೂ ರಾಮ್ ಚರಣ್ ಖುಷಿ ಪಡಲಿಲ್ವಂತೆ: ಏನಕ್ಕೆ?
ಮದುವೆಯಾಗಿ 11 ವರ್ಷಗಳ ಬಳಿಕ ತಾಯಿಯಾದ ತಮ್ಮ ಬಗ್ಗೆಯೂ ಹೇಳಿಕೊಂಡಿರುವ ಅವರು, ಗರ್ಭಧಾರಣೆಯಿಂದ ಹೆರಿಗೆಯವರೆಗಿನ ಪಯಣ ಅವಿಸ್ಮರಣೀಯ ಎಂದಿದ್ದಾರೆ. ಈ ಸಮಯದಲ್ಲಿ ಸಹಕರಿಸಿದವರ ಉಪಕಾರ ಸ್ಮರಿಸಿದ ಉಪಾಸನಾ, ಅಪೋಲೋ ಮಕ್ಕಳ ಆಸ್ಪತ್ರೆಗಳನ್ನು ಪ್ರಾರಂಭಿಸುತ್ತಿರುವ ಕುರಿತು ಹೇಳಿಕೊಂಡರು. ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಪೋಷಕರಿಗೆ ತುಂಬಾ ತೊಂದರೆಯಾಗುತ್ತದೆ. ಅಂತಹ ಮಕ್ಕಳನ್ನು ಅವರ ತಂದೆ-ತಾಯಿಗೆ ಸಂಪೂರ್ಣ ಆರೋಗ್ಯವಂತರಾಗಿ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಕೆಲವು ತಾಯಂದಿರು ಮಗುವಿಗೆ ಜನ್ಮ ನೀಡಿ ಕಷ್ಟಪಡುವುದನ್ನು ನೋಡಿದ್ದೇನೆ. ಅವರಲ್ಲಿ ಒಂಟಿ ತಾಯಂದಿರಿದ್ದು ಅವರಿಗೆ ಆಸರೆ ಬೇಕು ಹಾಗಾಗಿ ಈ ಸೇವೆ ನೀಡಲು ಮುಂದಾಗಿರುವುದಾಗಿ ಅವರು ತಿಳಿಸಿದರು.
ಸಿಂಗಲ್ ಮದರ್ ಆದವರು ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ (OPD) ಅಪೊಲೊ ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದು ಅವರು ಇದೇ ವೇಳೆ ಘೋಷಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಪತಿ ರಾಮ್ ಚರಣ್ (Ram Charan) ಕುರಿತೂ ಮಾತನಾಡಿದ ಅವರು, ನನಗೆ ಒಳ್ಳೆಯ ಗಂಡ ಸಿಕ್ಕಿದ್ದಾರೆ. ಇದು ನನ್ನ ಅದೃಷ್ಟ. ಮಗುವಿನ ಲಾಲನೆ ಪಾಲನೆಯಲ್ಲಿ ಅವರು ವಿಶೇಷ ಕಾಳಜಿ ತೋರುತ್ತಾರೆ. ಅದರೆ ಎಲ್ಲ ಮಹಿಳೆಯರಿಗೂ ಈ ಅದೃಷ್ಟವಿರುವುದಿಲ್ಲ. ಒಂಟಿ ತಾಯಂದಿರ ಸಮಸ್ಯೆ ನಾನು ಬಲ್ಲೆ. ಗಂಡನ ಸಹಾಯವಿಲ್ಲದೆ ಮಕ್ಕಳನ್ನು ಸಾಕುವ ತಾಯಂದಿರ ನೋವು ಹೇಗಿರುತ್ತೆ ಎನ್ನುವುದನ್ನು ನನಗೆ ಗೊತ್ತು. ಆದ್ದರಿಂದ ಒಂಟಿ ಅಮ್ಮಂದಿರಿಗೆ ನೆರವಾಗುವುದು ತಮ್ಮ ಉದ್ದೇಶ. ಅವರು ತಮ್ಮ ಮಕ್ಕಳನ್ನು ವಾರಾಂತ್ಯದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಅಪೊಲೊ ಮಕ್ಕಳ ಆಸ್ಪತ್ರೆಗಳಿಗೆ ಕರೆದೊಯ್ಯಬಹುದು ಎಂದರು.
ರಾಮ್ ಚರಣ್-ಉಪಾಸನಾ ಮಗುವಿಗೆ ಚಿನ್ನದ ತೊಟ್ಟಿಲು ಗಿಫ್ಟ್ ನೀಡಿದ ಮುಖೇಶ್ ಅಂಬಾನಿ: ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ!