ರಾಮ್ ಚರಣ್-ಉಪಾಸನಾ ಮಗುವಿಗೆ ಮುಖೇಶ್ ಅಂಬಾನಿ ಚಿನ್ನದ ತೊಟ್ಟಿಲು ಗಿಫ್ಟ್ ನೀಡಿದ್ದಾರೆ ಎನ್ನುವ ಸುದ್ದಿ ಲೈರಲ್ ಆಗಿದೆ. ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ.

ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಜೂನ್ 20ರಂದು ಬೆಳಗ್ಗೆ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ರಾಮ್ ಚರಣ್ ಮತ್ತು ಉಪಾಸನಾ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ. ಹೈದರಾಬಾದ್‌ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಜನ್ಮ ನೀಡಿ 3 ದಿನಗಳ ಬಳಿಕ ಉಪಾಸನಾ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಉಪಾಸನಾ ಮತ್ತು ರಾಮ್ ಚರಣ್ ಇಬ್ಬರೂ ಆಸ್ಪತ್ರೆಯಿಂದ ಮನೆಗೆ ಮರಳುತ್ತಿರುವ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ. 

Add Asianetnews Kannada as a Preferred SourcegooglePreferred

ರಾಮ್ ಚರಣ್ ಮತ್ತು ಉಪಾಸನಾ ಮುದ್ದಾದ ಮಗುವಿಗೆ ಒಂದು ಕೋಟಿ ಬೆಲೆಬಾಳುವ ಉಡುಗೊರೆ ಸಿಕ್ಕಿದೆ ಎನ್ನಲಾಗಿದೆ. ಹೌದು ಉದ್ಯಮಿ ಮುಖೇಶ್ ಅಂಬಾನಿ ಟಾಲಿವುಡ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನಾ ಮಗುವಿಗೆ 1 ಕೋಟಿ ಬೆಲೆಯ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚಿಗಷ್ಟೆ ರಾಮ್ ಚರಣ್ ಮತ್ತು ಮತ್ತು ಉಪಾಸನಾ ಮುದ್ದಾದ ಮಗುವಿನ ನಾಮಕರಣ ಮಾಡಿದ್ದು ಸಮಾರಂಭದಲ್ಲಿ ಚಿರಂಜೀವಿ ಕುಟುಂಬದವರು ಮತ್ತು ಆಪ್ತರು ಭಾಗಿಯಾಗಿದ್ದರು. ಸಮಾರಂಭಕ್ಕೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ದಂಪತಿ 1 ಕೋಟಿ ರೂಪಾಯಿಯ ಚಿನ್ನದ ತೊಟ್ಟಿಲ್ಲನ್ನು ಕೊಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ತೊಟ್ಟಿಲಿನ ವಿಡಿಯೋ ಕೂಡ ವೈರಲ್ ಆಗಿದೆ.ಆದರೆ ಇದು ನಿಜನಾ ಅಥವಾ ಫೇಕ್ ಎನ್ನುವ ಬಗ್ಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಅಭಿಮಾನಿಗಳು ಸಹ ಈ ಬಗ್ಗೆ ನಿಜನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

Scroll to load tweet…

ಅಸ್ಪತ್ರೆಯಿಂದ ಮನೆಗೆ ತೆರಳಿದ ಉಪಾಸನಾ: ಮಗು ಮುಚ್ಚಿಕೊಂಡು ಹೊರಬಂದ ರಾಮ್ ಚರಣ್ ದಂಪತಿ

ಉಪಾಸನಾ ಮತ್ತು ರಾಮ್ ಚರಣ್ ಮದುವೆಯಾಗಿ 11 ವರ್ಷಗಳ ಬಳಿಕ ಮಗು ಜನಿಸಿದ್ದು ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ರಾಮ್ ಚರಣ್ ಮತ್ತು ಉಪಾಸನಾ ದಂಪತಿ 2012 ರಲ್ಲಿ ಜೂನ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉಪಾಸನಾ ಗರ್ಭಿಣಯಾಗಿರುವ ವಿಚಾರವನ್ನು ಡಿಸೆಂಬರ್‌ನಲ್ಲಿ ಬಹಿರಂಗ ಪಡಿಸಿದ್ದರು. ಮನೆಗೆ ಮೊಮ್ಮಗಳು ಬಂದ ಖುಷಿಯನ್ನು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂಭ್ರಮಿಸಿದ್ದರು. ಲಿಟ್ಲ್ ಪ್ರಿನ್ಸ್ ಎಂದು ನಟ ಚಿರಂಜೀವಿ ಬಣ್ಣಿಸಿದ್ದರು. 'ಲಿಟಲ್ ಮೆಗಾ ಪ್ರಿನ್ಸೆಸ್‌ಗೆ ಸುಸ್ವಾಗತ. ನಿನ್ನ ಆಗಮನಿಂದ ಲಕ್ಷಾಂತರ ಮೆಗಾ ಕುಟುಂಬದಲ್ಲಿ ಉತ್ಸಾಹ ತುಂಬಿದ್ದಿಯಾ. ನೀನು ಪೋಷಕರಾದ ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಮತ್ತು ನಾವು ಅಜ್ಜ-ಅಜ್ಜಿಯರಿಗೆ ಸಂತೋಷ ಮತ್ತು ಹೆಮ್ಮೆ ಪಡುವಂತೆ ಮಾಡಿದ್ದೀಯಾ' ಎಂದು ಪೋಸ್ಟ್ ಶೇರ್ ಮಾಡಿದ್ದರು.

Scroll to load tweet…