Urfi Javed ವಸ್ತುಗಳೆಲ್ಲಾ ಡ್ರೈವರ್ ಕೈಯಲ್ಲಿ! ನೋವು ತೋಡಿಕೊಂಡ ನಟಿ...
ಉರ್ಫಿ ಜಾವೇದ್ ಸಾಮಗ್ರಿಗಳನ್ನು ಕ್ಯಾಬ್ ಡ್ರೈವರ್ ಎತ್ತಿಕೊಂಡು ಎಸ್ಕೇಪ್ ಆಗಿದ್ದರ ಕುರಿತು ನಟಿ ನೋವು ತೋಡಿಕೊಂಡಿದ್ದಾರೆ. ನಿಜವಾಗಿಯೂ ಆಗಿದ್ದೇನು?
ಮುಂಬೈ: ಇಂಟರ್ನೆಟ್ ಸೆನ್ಸೇಷನ್ ಉರ್ಫಿ ಜಾವೇದ್ (Urfi Javed) ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ಇವರ ಕನಿಷ್ಠ ಉಡುಪುಗಳುಳ್ಳ ದೇಹ. ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಉಡುಪು ಧರಿಸುವುದರಿಂದಲೇ ಕೆಲ ತಿಂಗಳಿನಿಂದ ಟ್ರೋಲ್ ಆಗುತ್ತಲೇ (ಕು)ಖ್ಯಾತಿ ಗಳಿಸಿದ್ದಾರೆ ಉರ್ಫಿ. ಟ್ರೋಲ್ (Troll) ಮೂಲಕವೇ ಖುಷಿ ಪಡುತ್ತಾ, ಇನ್ನಷ್ಟು ಕಡಿಮೆ ಉಡುಪುಗಳ ಜೊತೆಗೆ ಚಿತ್ರ ವಿಚಿತ್ರ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಉರ್ಫಿ. ತನ್ನ ಈ ಉಡುಪುಗಳಿಂದಲೇ ಮುಂಬೈನಲ್ಲಿ ಎಲ್ಲಿಯೂ ಮನೆ ಸಿಗುತ್ತಿಲ್ಲ ಎಂದು ಮೊನ್ನೆಯಷ್ಟೇ ಗೋಳು ತೋಡಿಕೊಂಡಿದ್ದರು ನಟಿ. ಮುಂಬೈಯಂತಹ ದೊಡ್ಡ ನಗರದಲ್ಲಿಯೂ ಅವರಿಗೆ ಬಾಡಿಗೆಗೆ ಮನೆ ನೀಡಲು ಯಾವುದೇ ಮಾಲೀಕರು ಸಿದ್ಧರಿಲ್ಲ. ಈ ನೋವನ್ನು ಉರ್ಫಿ ಜಾವೇದ್ ಟ್ವೀಟ್ (Tweet) ಮೂಲಕ ಹಂಚಿಕೊಂಡಿದ್ದರು. ಮುಂಬೈನಲ್ಲಿ ಬಾಡಿಗೆಗೆ ಮನೆ ಸಿಗದ ಕಾರಣ ತಮಗೆ ವಾಸಿಸಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದರು ಈಕೆ. ಆದರೂ ಈಕೆ ತುಂಡು ಬಟ್ಟೆ ಹಾಕೋದು ಬಿಟ್ಟಿಲ್ಲ ಬಿಡಿ.
ಹೀಗೆ ಉಡುಪುಗಳಿಂದ ಭಾರಿ ಫೇಮಸ್ ಆಗಿರೋ ಉರ್ಫಿಗೆ ಈಗ ಹೊಸ ಸಮಸ್ಯೆ ಎದುರಾಗಿದ್ದು, ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅದೇನೆಂದರೆ ಈಕೆಯ ಎಲ್ಲಾ ಸಾಮಗ್ರಿಗಳನ್ನು ಹೊತ್ತುಕೊಂಡು ದೆಹಲಿಯ ಕ್ಯಾಬ್ ಡ್ರೈವರ್ ತನ್ನ ಲಗೇಜ್‌ನೊಂದಿಗೆ ನಾಪತ್ತೆಯಾಗಿದ್ದಾನಂತೆ! ಈ ಕುರಿತು ಉರ್ಫಿ ಇನ್ಸ್ಟಾಗ್ರಾಮ್ನಲ್ಲಿಬರೆದುಕೊಂಡಿದ್ದಾರೆ. ನಾನು ದೆಹಲಿಗೆ ಹೋಗಿದ್ದಾಗ ಉಬರ್ ಕ್ಯಾಬ್ ಬುಕ್ (Cab book) ಮಾಡಿದ್ದೆ. ಅದರ ಡ್ರೈವರ್ ನನ್ನ ಎಲ್ಲಾ ಸಾಮಗ್ರಿಗಳನ್ನುಹೊತ್ತು ಪರಾರಿಯಾಗಿದ್ದ. ಆಮೇಲೆ ಅವನು ಹಿಂದಿರುಗಿದಾಗ ಅವನು ಕುಡಿದ ಸ್ಥಿತಿಯಲ್ಲಿದ್ದ ಎಂದು ಹೇಳಿದ್ದಾರೆ. ಉರ್ಫಿ ಅವರು ಸುಮಾರು 6 ಗಂಟೆಗಳ ಕಾಲ ಉಬರ್ ಕ್ಯಾಬ್ ಅನ್ನು ಬಾಡಿಗೆಗೆ ಪಡೆದಿದ್ದರಂತೆ. ಇದರಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೆ. ಊಟಕ್ಕೆ ನಿಂತಾಗ ಕ್ಯಾಬ್ ಡ್ರೈವರ್ (Driver) ಲಗೇಜ್ ಸಮೇತ ನಾಪತ್ತೆಯಾಗಿದ್ದ ಎಂದು ಉರ್ಫಿ ಶೇರ್ ಮಾಡಿದ್ದಾರೆ.
Pathaan: ಸುಳ್ಳು ಹೇಳ್ತೀರಾ? ಕೇಸ್ ದಾಖಲಿಸ್ತೇನೆ ಎಂದು ಶಾರುಖ್ ಖಾನ್ಗೆ ಬೆದರಿಕೆ!
ನಂತರ ಸ್ನೇಹಿತರೊಬ್ಬರ ಸಹಾಯ ಪಡೆದು ಕ್ಯಾಬ್ ಚಾಲಕನನ್ನು ಪತ್ತೆ ಮಾಡಿದರಂತೆ. ಆತ ಬರಲು ನಿರಾಕರಿಸಿದ್ದನಂತೆ. ಹಾಗೂ ಹೀಗೂ ಮಾಡಿ ವಾಪಸ್ (Return) ಬಂದಾಗ ಸಂಪೂರ್ಣ ಪಾನಮತ್ತನಾಗಿದ್ದ ಎಂದು ಉರ್ಫಿ ಹೇಳಿಕೊಂಡಿದ್ದಾರೆ. ಮಹಿಳೆಯರಿಗೆ ಭಾರತದಲ್ಲಿ ರಕ್ಷಣೆ ಇಲ್ಲ ಎಂದು ಹೇಳಿಕೊಂಡಿರೋ ಉರ್ಫಿ, 'ಭಾರತ ದಯವಿಟ್ಟು ಹುಡುಗಿಯರ ಸುರಕ್ಷತೆಗಾಗಿ ಏನಾದರೂ ಮಾಡಿ. ಇಂದು ಕೆಟ್ಟ ಅನುಭವವಾಗಿದೆ. ಕ್ಯಾಬ್ ಡ್ರೈವರ್ ನನ್ನ ಲಗೇಜ್‌ನೊಂದಿಗೆ ಕಣ್ಮರೆಯಾದ ಮತ್ತು ಒಂದು ಗಂಟೆಯ ನಂತರ ಹಿಂತಿರುಗಿದ. ಹೀಗಾದರೆ ಹೆಣ್ಣು ಮಕ್ಕಳ ರಕ್ಷಣೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಉಬರ್ ಸಂಸ್ಥೆಗೆ ದೂರು ದಾಖಲಿಸಿದ ಬಳಿಕ ಅದು ನನ್ನ ಬಳಿ ಕ್ಷಮೆಯಾಚಿಸಿದೆ ಎಂದೂ ಉರ್ಫಿ ಹೇಳಿಕೊಂಡಿದ್ದಾರೆ. 'ನಿಮ್ಮ ಅನುಭವಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಕ್ಯಾಬ್ (Cab) ಚಾಲನೆ ಮಾಡುವಾಗ ಮದ್ಯ ಅಥವಾ ಡ್ರಗ್ಸ್ ಸೇವನೆ ಮಾಡಬಾರದು. ನಿಮಗೆ ಆಗಿರುವ ತೊಂದರೆಗೆ ಕ್ಷಮೆ ಕೋರುತ್ತೇವೆ ಎಂದು ಉಬರ್ ಹೇಳಿದೆ. ಇಂತಹ ಘಟನೆಗಳನ್ನು ಕಡಿಮೆ ಮಾಡಲು ನಮ್ಮ ಸವಾರರ ಸುರಕ್ಷತೆಗೆ ಬದ್ಧರಾಗಿದ್ದೇವೆ. ಯಾವುದೇ ಹೆಚ್ಚಿನ ಸಹಾಯ ನಿಮಗೆ ಬೇಕಾದರೆ ನಮಗೆ ತಿಳಿಸಿ' ಎಂದೂ ಸಂಸ್ಥೆ ಹೇಳಿದೆ.
ಅಂದಹಾಗೆ ಉರ್ಫಿ ಜಾವೇದ್ ಟಿವಿ ಮತ್ತು ಬಾಲಿವುಡ್‌ನ ದಿಟ್ಟ ನಟಿ ಎನಿಸಿಕೊಂಡಿದ್ದಾರೆ. ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟವರೂ ಇವರೇ. ಇದಕ್ಕೆ ಕಾರಣ ಅವರ ಡ್ರೆಸ್ಸಿಂಗ್ ಸೆನ್ಸ್. ಯಾರೂ ಊಹಿಸಲೂ ಸಾಧ್ಯವಾಗದ ಕೆಲಸವನ್ನು ಉರ್ಫಿ ಮಾಡುತ್ತದೆ. ಪ್ಲಾಸ್ಟಿಕ್, ಕಸದ ಚೀಲ, ಕ್ಯಾಸೆಟ್ ರೀಲ್, ಚೈನ್, ಸಿಮ್, ಬಿಯರ್ ಕ್ಯಾನ್ ಮುಚ್ಚಳ ಹೀಗೆ ಹಲವು ವಸ್ತುಗಳನ್ನು ಬಳಸಿ ಡ್ರೆಸ್ ತಯಾರಿಸಿದ್ದಾರೆ. ಅನೇಕ ಜನರು ನಿಂದನೆ ಮತ್ತು ಕೆಲವರು ಎಫ್ಐಆರ್ (FIR) ದಾಖಲಿಸಿದ್ದಾರೆ. ಕಾಶ್ಮೀರಿ ಷಾ ಅವರಿಂದ ಹಿಡಿದು ಬಿಜೆಪಿ ನಾಯಕರವರೆಗೂ ಇವರು ಬಟ್ಟೆಗಾಗಿ ಟೀಕೆಗೆ ಒಳಗಾಗಿದ್ದಾರೆ. ಇತ್ತೀಚೆಗೆ, ಬಿಜೆಪಿ ನಾಯಕಿ ಚಿತ್ರಾ ವಾಘ್ (Chitra Wagh) ಅವರು ರಸ್ತೆಯಲ್ಲಿ ಅಶ್ಲೀಲತೆಯನ್ನು ಹರಡಿದ್ದಕ್ಕಾಗಿ ಉರ್ಫಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದಕ್ಕೆ ಸುಮ್ಮನಿರದ ಉರ್ಫಿ, ತಿರುಗಿ ಅವರಿಗೇ ಅಶ್ಲೀಲತೆಯ ಪಾಠ ಹೇಳಿದ್ದರು.
ಖಾಸಗಿ ವಿಡಿಯೋ ವೈರಲ್: ನೋವು ತೋಡಿಕೊಂಡ ಖ್ಯಾತ ನಟಿ Priyanka