ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀ ಕಾಣಿಸಿಕೊಂಡರು. ಈ ವೇಳೆ ತನ್ನ ದೇಶಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡರು.
ಸಂಗೀತ ಕ್ಷೇತ್ರದ ವಿಶ್ವದ ಅತ್ಯುತ್ತಮ ಪ್ರಶಸ್ತಿಗಳಲ್ಲಿ ಗ್ರ್ಯಾಮಿ ಪ್ರಶಸ್ತಿ ಕೂಡ ಒಂದು. ಪ್ರದಾನ ಸಮಾರಂಭವು ಲಾಸ್ ವೆಗಾಸ್ ನ ಎಂಜಿಎಂ ಗ್ರ್ಯಾಂಡ್ ಗಾರ್ಡನ್ ಅರೆನಾದಲ್ಲಿ ಏಪ್ರಿಲ್ 03 ರಂದು ಅದ್ದೂರಿಯಾಗಿ ನೆರವೇರಿದೆ. ಸಮಾರಂಭ ಅದ್ಧೂರಿಯಾಗಿ ನಡೆಯುವ ಜೊತೆಗೆ ಹಲವು ಅಚ್ಚರಿಗಳಿಗೂ ಸಾಕ್ಷಿಯಾಗಿದೆ. ಸಮಾರಂಭದ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕೀ ಕಾಣಿಸಿಕೊಂಡರು. ಈ ವೇಳೆ ತನ್ನ ದೇಶಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡರು.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮಾಡುತ್ತ ಅನೇಕ ದಿನಗಳಾಗಿದೆ. ಇನ್ನು ದಾಳಿ ನಿಲ್ಲಿಸಿಲ್ಲ. ಉಕ್ರೇನ್ ವಶಪಡಿಸಿಕೊಳ್ಳುವ ವರೆಗೂ ರಷ್ಯಾಗೆ ಸಮಾಧಾನ ಇಲ್ಲದಂತೆ ಆಗಿದೆ. ಯುದ್ಧದಿಂದ ಉಕ್ರೇನ್ ಸರ್ವನಾಶದ ಕಡೆ ಸಾಗುತ್ತಿದೆ. ಉಕ್ರೇನ್ ಸ್ಥಿತಿ ಗಂಭೀರವಾಗಿದ್ದು ಬಹುತೇಕ ನಾಗರಿಕರ ಬದುಕು ಬೀದಿಗೆ ಬಂದಿದೆ. ಈ ನಡುವೆಯೂ ಉಕ್ರೇನ್ ಅಧ್ಯಕ್ಷ ಗ್ರ್ಯಾಮಿ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
'ಡಿವೈನ್ ಟೈಡ್ಸ್'ಗೆ ಗ್ರ್ಯಾಮಿ ಅವಾರ್ಡ್ ಪಡೆದ ಕರ್ನಾಟಕದ ಅಳಿಯ ರಿಕ್ಕಿ ಕೇಜ್!
ಸಮಾರಂಭದಲ್ಲಿ ಜಾನ್ ಲೆಜೆಂಡ್ ಅವರ 'ಫ್ರೀ' ಹೆಸರಿನ ಹಾಡನ್ನು ಹಾಡಿದರು. ಅವರ ಜೊತೆ ಉಕ್ರೇನಿನ ಹಾಡುಗಾರು, ಸಂಗೀತಗಾರರು ಜೊತೆಗಿದ್ದರು. ಗಾಯನ ಪ್ರದರ್ಶನ ಪ್ರಾರಂಭವಾಗುವ ಮೊದಲು ಗ್ರ್ಯಾಮಿಯ ದೊಡ್ಡ ಪರದೆಯ ಮೇಲೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ವಿಡಿಯೋ ಪ್ರಸಾರ ಮಾಡಲಾಯಿತು.
'ನಮ್ಮ ಸಂಗೀತಗಾರರು ಸೂಟುಗಳನ್ನು ಧರಿಸುವ ಬದಲಿಕೆ ದೇಹದ ರಕ್ಷಾಕವಚ ಧರಿಸಿರುತ್ತಾರೆ' ಎಂದು ಹೇಳುವ ಮೂಲಕ ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಬಗ್ಗೆ ಉಲ್ಲೇಖ ಮಾಡಿದರು. 'ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಹಾಡುತ್ತಾರೆ. ಕೇಳಲು ಸಾಧ್ಯವಾಗದಿದ್ದರೂ ಸಂಗೀತ ಎಲ್ಲವನ್ನು ಭೇದಿಸುತ್ತದೆ' ಎಂದರು.
'ನೀವು ಯಾವುದೇ ರೀತಿಯಲ್ಲಿ ನಮ್ಮನ್ನು ಬೆಂಬಲಿಸಿ. ಆದರೆ ನಿಮ್ಮ ಮೌನದಿಂದ ಅಲ್ಲ. ಮೌನವನ್ನು ಸಂಗೀತದಿಂದ ತುಂಬಿರಿ ಎಂದು ಹೇಳಿದರು. ನಾವು ಬದುಕಲು, ಪ್ರೀತಿಸಲು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುತ್ತಿದ್ದೇವೆ. ನಾವು ನಮ್ಮ ನೆಲದಲ್ಲಿ ರಷ್ಯಾದ ವಿರುದ್ಧ ಹೋರಾಡುತ್ತಿದ್ದೇವೆ. ಅವರು ತಮ್ಮ ಬಾಂಬುಗಳ ಮೂಲಕ ಭಯಾನಕ ಮೌನವನ್ನು ನಮ್ಮ ದೇಶದಲ್ಲಿ ತುಂಬುತ್ತಿದ್ದಾರೆ. ಆ ಮೌನವನ್ನು ನೀವು ನಿಮ್ಮ ಸಂಗೀತದಿಂದ ತುಂಬಿಸಿ. ನಮ್ಮ ಕತೆಯನ್ನು ಸಂಗೀತದ ಮೂಲಕ ಹೇಳಿ' ಎಂದರು.
ಈಶಾ ಫೌಂಡೇಶನ್ ಮಹಾಶಿವರಾತ್ರಿ ಲೈವ್; ವಿಶ್ವದಲ್ಲಿ ಅತೀ ಹೆಚ್ಚು ಮಂದಿ ವೀಕ್ಷಣೆ ದಾಖಲೆ!
ಪ್ರತಿಷ್ಠಿತ ಗ್ರ್ಯಾಮಿ 2022 ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಮತ್ತು ಸ್ಟೀವರ್ಟ್ ಕೋಪ್ ಲ್ಯಾಂಡ್ ಅವರ ಡಿವೈನ್ ಟೈಡ್ಸ್ ಆಲ್ಬಂ ಆಯ್ಕೆ ಆಗಿತ್ತು. ಡಿವೈನ್ ಟೈಡ್ಸ್ ಹಾಡನ್ನು ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಾಣ ಮಾಡಿತ್ತು. ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಗೆ ಆಯ್ಕೆ ಆಗಿದ್ದು ರಿಕ್ಕಿ ಕೇಜ್ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ.
