ಈಶಾ ಫೌಂಡೇಶನ್ ಮಹಾಶಿವರಾತ್ರಿ ಲೈವ್; ವಿಶ್ವದಲ್ಲಿ ಅತೀ ಹೆಚ್ಚು ಮಂದಿ ವೀಕ್ಷಣೆ ದಾಖಲೆ!
ಈಶಾ ಫೌಂಡೇಶನ್ ಮಹಾಶಿವರಾತ್ರಿ ಹಲವು ವಿಶೇಷತೆಗಳಿಂದ ಕೂಡಿರುತ್ತದೆ. ಅತೀ ದೊಡ್ಡ ಮಹಾಶಿವರಾತ್ರಿ ಆಚರಣೆ ಮೂಲಕ ಶಿವನ ಧ್ಯಾನ ಮಾಡಲಾಗುತ್ತದೆ. ಇದೀಗ ಈಶಾ ಫೌಂಡೇಶನ್ ಶಿವರಾತ್ರಿ ಆಚರಣೆ ಮತ್ತೊಂದು ದಾಖಲೆ ಬರೆದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ತಮಿಳುನಾಡು(ಮಾ.23): ಇಶಾ ಫೌಂಡೇಶನ್ ಮಹಾ ಶಿವರಾತ್ರಿ ಆಚರಣೆ ವಿಶ್ವ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಂದಿ ವೀಕ್ಷಣೆ ಮಾಡಿದ ಲೈವ್ ಸ್ಟ್ರೀಮ್ ಕಾರ್ಯಕ್ರಮದಲ್ಲಿ ಮಹಾಶಿವರಾತ್ರಿ ಆಚರಣೆ ಮೊದಲ ಸ್ಥಾನದಲ್ಲಿದೆ. ಈಶಾ ಫೌಂಡೇಶನ್ ಮಹಾಶಿವರಾತ್ರಿ 20.3 ಮಿಲಿಯನ್ ಜನ ವೀಕ್ಷಿಸಿದ್ದಾರೆ.
4 ತಿಂಗಳಲ್ಲಿ 1.1 ಕೋಟಿ ಸಸಿ ನೆಡುವ ಗುರಿ: ಸದ್ಗುರು ಜಗ್ಗಿ ವಾಸುದೇವ್
ಅತೀ ಹೆಚ್ಚು ಜನ ವೀಕ್ಷಿಸಿದ ಲೈವ್ ಸ್ಟ್ರೀಮ್ ಕಾರ್ಯಕ್ರಮಗಳ ಪೈಕಿ ಮಹಾ ಶಿವರಾತ್ರಿ ಮೊದಲ ಸ್ಥಾನದಲ್ಲಿದ್ದರೆ, ಗ್ರಾಮಿ ಅವಾರ್ಡ್ ಪ್ರೀಮಿಯರ್ ಸೆರಮನಿ 2ನೇ ಸ್ಥಾನ ಪಡೆದುಕೊಂಡಿದೆ. FMS ಮೆಕ್ಸಿಕೋ ಜೊರ್ನಾಡಾ ಕಾರ್ಯಕ್ರಮ 3ನೇ ಸ್ಥಾನ ಪಡೆದುಕೊಂಡಿದೆ.
ಮಹಾಶಿವರಾತ್ರಿ ಕಾರ್ಯಕ್ರಮ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗಿತ್ತು. ಪೋಲ್‌ಸ್ಟಾರ್ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ 20.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಕೊಯಮತ್ತೂರಿನ ಈಶಾ ಯೋಗ ಕೇಂದ್ರದಿಂದ ನೇರ ಪ್ರಸಾರವಾದ, ಮಹಾಶಿವರಾತ್ರಿ ಆಚರಣೆ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನೋಡುಗರ ಗಮಸೆಳೆದಿತ್ತು.
ಈಶಾ ಫೌಂಡೇಶನ್ ಮಹಾಶಿವರಾತ್ರಿ ಆಚರಣೆ ಹಾಗೂ ಕಾರ್ಯಕ್ರಮಗಳು ಮಾರ್ಚ್ 11 ರಂದು ಸಂಜೆ ಆರಂಭಗೊಂಡಿತ್ತು. ಮಾರ್ಚ್ 12ರ ಬೆಳಗಿನವರೆಗೆ ಕಾರ್ಯಕ್ರಮ ಮುಂದುವರಿದಿತ್ತು. ಇನ್ನು ಗ್ರ್ಯಾಮಿ ಅವಾರ್ಡ್ ಸೆರಮನಿ ಕಾರ್ಯಕ್ರಮ ಮಾರ್ಚ್ 14 ರಂದು ಪ್ರಸಾರವಾಗಿತ್ತು. ಗ್ರ್ಯಾಮಿ ಕಾರ್ಯಕ್ರಮಕ್ಕಿಂತ ಶೇಕಡಾ 50 ರಷ್ಟು ಹೆಚ್ಚು ಮಂದಿ ಮಹಾಶಿವರಾತ್ರಿ ಕಾರ್ಯಕ್ರಮ ವೀಕ್ಷಿಸಿದ್ದಾರೆ.
ಅತೀ ಹೆಚ್ಚು ಲೈವ್ ಸ್ಟೀವ್ ವೀಕ್ಷಿಸಿದ 50 ಕಾರ್ಯಕ್ರಮಗಳ ಪೈಕಿ ಭಾರತದ ಏಕೈಕ ಕಾರ್ಯಕ್ರಮ ಮಹಾಶಿವರಾತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾಶಿವರಾತ್ರಿ ಲೈವ್ ಕಾರ್ಯಕ್ರಮ 130 ದೇಶದ ಜನರು ವೀಕ್ಷಿಸಿದ್ದಾರೆ.