ಮುಂಬೈನಲ್ಲಿ ಸೆಕ್ಸ್ ರಾಕೆಟ್ ಸೌತ್‌ನ ಇಬ್ಬರು ನಟಿಯರ ರಕ್ಷಣೆ

ಮುಂಬೈ(ಜೂ.02): ಸೆಕ್ಸ್ ರಾಕೆಟ್‌ನಲ್ಲಿ ಸಿಕ್ಕಿಹಾಕಿದ್ದ ಇಬ್ಬರು ತಮಿಳು ನಟಿಯರನ್ನು ರಕ್ಷಿಸಲಾಗಿದೆ. ಇವರು ದಕ್ಷಿಣ ಭಾರತದ ಇತರ ಭಾಷೆಯ ಚಲನಚಿತ್ರಗಳಲ್ಲಿಯೂ ನಟಿಸಿದ್ದರು. ಮಹಾರಾಷ್ಟ್ರದ ಥಾಣೆಯಲ್ಲಿ ಇವರನ್ನು ಸೆಕ್ಸ್ ರಾಕೆಟ್‌ನಿಂದ ರಕ್ಷಿಸಲಾಗಿದೆ ಮತ್ತು ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವ್ಯಕ್ತಿಗಳಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ನಗರದ ನೌಪಾಡಾ ಪ್ರದೇಶದ ಫ್ಲ್ಯಾಟ್‌ನಲ್ಲಿ ನಡೆಸಿದ ದಾಳಿಯ ನಂತರ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಿವುಡ್ ನಟ ಟೈಗರ್ ಶ್ರಾಫ್ ವಿರುದ್ಧ FIR ದಾಖಲು

"ಮುಂಬ್ರಾದ ಅಮೃತ್ ನಗರದ ಮಹಿಳೆಯೊಬ್ಬರು ವೇಶ್ಯಾವಾಟಿಕೆ ದಂಧೆ ನಡೆಸಿದ್ದಾರೆ. ಪೊಲೀಸರು ನಕಲಿ ಗ್ರಾಹಕರನ್ನು ಕಳುಹಿಸಿ ಮೂವರನ್ನು ಬಂಧಿಸಿದ್ದಾರೆ" ಎಂದು ಹಿರಿಯ ಇನ್ಸ್ಪೆಕ್ಟರ್ ಕೃಷ್ಣ ಕೊಕ್ನಿ ಹೇಳಿದ್ದಾರೆ.

ಆರೋಪಿಗಳನ್ನು ಹಸೀನಾ ಮೆಮನ್, ವಿಶಾಲ್ ಅಲಿಯಾಸ್ ಸುನಿಲ್ಕುಮಾರ್ ಉತ್ತಮ್ಚಂದ್ ಜೈನ್ ಮತ್ತು ಸ್ವೀಟಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು 2,14,015 ರೂ. ನಗದು ಮತ್ತು ದುಬಾರಿ ಮೊಬೈಲ್ ಫೋನ್ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದರು.