ಬಾಲಿವುಡ್ ಟಾಪ್ ನಟನ ವಿರುದ್ಧ ಕೇಸ್ ಟೈಗರ್ ಶ್ರಾಫ್ ವಿರುದ್ಧ ಎಫ್‌ಐಆರ್ ದಾಖಲು
ಯಾವುದೇ ಸರಿಯಾದ ಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಟ ಟೈಗರ್ ಶ್ರಾಫ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೈಗರ್ ಶ್ರಾಫ್ ಅವರು ಸಂಜೆ 2 ಗಂಟೆಯ ನಂತರ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ಬಳಿ ತಿರುಗಾಡುತ್ತಿರುವುದು ಕಂಡುಬಂದಿದೆ. ಸರಿಯಾದ ಕಾರಣವಿಲ್ಲದೆ ಜನರ ಸಂಚಾರದ ಮೇಲಿನ ನಿರ್ಬಂಧಗಳನ್ನು ಹೇರಲಾಗಿದೆ.
ಭಾರತದಲ್ಲಿ 5G: ಹೈಕೋರ್ಟ್ ಸೆಷನ್ ಸಂದರ್ಭ ಫಿಲ್ಮ್ ಸಾಂಗ್ ಹಾಡಿದ್ಯಾರು ?
ಸಂಜೆ ಬ್ಯಾಂಡ್‌ಸ್ಟ್ಯಾಂಡ್ ಪ್ರದೇಶದಲ್ಲಿ ಟೈಗರ್ ಶ್ರಾಫ್ ತಿರುಗುತ್ತಿರುವುದನ್ನು ಪೊಲೀಸ್ ತಂಡ ಗುರುತಿಸಿದೆ. ಪ್ರಶ್ನಿಸಿದಾಗ, ಅವರು ಹೊರಗೆ ಏಕೆ ತಿರುಗುತ್ತಿದ್ದಾರೆ ಎಂಬುದರ ಬಗ್ಗೆ ಸರಿಯಾದ ಉತ್ತರವನ್ನು ನೀಡಿಲ್ಲ.
ಪೊಲೀಸರು ನಟ ಟೈಗರ್ ಅವರ ವಿವರಗಳನ್ನು ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಸರ್ವಾಜನಿಕ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಕೇಸ್ ದಾಖಲಿಸಲಾಗಿದೆ ಎನ್ನಲಾಗಿದೆ.
