Asianet Suvarna News Asianet Suvarna News

ಸೀರೆಯ ಸೆರಗು ಕೆಳಕ್ಕೆ ಬಿದ್ದ ತಕ್ಷಣ ಓಡೋಡಿ ಬರೋ ಸಿಬ್ಬಂದಿ! ಶ್ವೇತಾ ತಿವಾರಿ ವಿಡಿಯೋ ಸಕತ್​ ಟ್ರೋಲ್​

ಬಾಲಿವುಡ್​ ನಟಿ ಶ್ವೇತಾ ತಿವಾರಿಯ ಸೀರೆಯ ಸೆರಗನ್ನು ಹಿಡಿದುಕೊಳ್ಳಲು ಇಬ್ಬರು ಸಹಾಯಕರು ಇರುವ ವಿಡಿಯೋ ವೈರಲ್​ ಆಗಿದ್ದು, ಸಕತ್​ ಕಮೆಂಟ್ಸ್​ ಬರುತ್ತಿವೆ.
 

two helpers to hold Bollywood actress Shweta Tiwaris saree video has been trolled suc
Author
First Published Aug 5, 2024, 11:20 AM IST | Last Updated Aug 5, 2024, 11:20 AM IST

ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.

ಹಲವರ ಜೊತೆ ಮಲಗಿದಾಗ ಆಗದ ನಾಚಿಕೆ ಶೆರ್ಲಿನ್​ಗೆ ಈ ವಿಷ್ಯಕ್ಕೆ ಆಗ್ತಿದೆಯಂತೆ! ನಟಿ ಏನೆಂದ್ರು ಕೇಳಿ...

ಇದೀಗ ನಟಿ ಶ್ವೇತಾ ತಿವಾರಿ ಸೀರೆ ಉಟ್ಟುಕೊಂಡಿದ್ದರೂ ಅವರ ಸೆರಗನ್ನು ಹಿಡಿಯಲು ಇಬ್ಬರು ಸಹಾಯಕರು ಬಂದಿರುವ ವಿಡಿಯೋ ವೈರಲ್​ ಆಗಿದ್ದು, ಇದೀಗ ಸಕತ್​ ಟ್ರೋಲ್​ ಆಗುತ್ತಿದೆ.  ಭಾರಿ ಡ್ರೆಸ್​ ಹಾಕಿಕೊಂಡ ಸಮಯದಲ್ಲಿ ಹೀಗೆ ಮಾಡುವುದು ಮಾಮೂಲು.  ಆದರೆ ಇಲ್ಲಿ ನಟಿ ಉಟ್ಟಿರೋದು ಮಾಮೂಲಿ ಸೀರೆ. ಅದಕ್ಕೆ ಉದ್ದನೆಯ ಸೆರಗು ಇದ್ದ ಕಾರಣ, ಅದು ನೆಲ ಗುಡಿಸುತ್ತಾ ಬಂದಿದೆ. ಅದನ್ನು ಹಿಡಿದುಕೊಳ್ಳಲು ಇಬ್ಬರು ಸಹಾಯಕರು ಇರುವುದು ತಮಾಷೆ ಎಂದು ಎನಿಸಿದೆ. ಸೀರೆಯ ಸೆರಗು ಕೆಳಗೆ ಬಿದ್ದ ತಕ್ಷಣ ಅದನ್ನು ಹಿಡಿದುಕೊಳ್ಳಲು ಸಹಾಯಕರು ಬಂದಿರುವುದು ಸಕತ್​ ಮಜಾ ಇದೆ ಎಂದು ಹಲವರು ಕಮೆಂಟ್​ ಮಾಡುತ್ತಿದ್ದರೆ, ಇನ್ನು ಕೆಲವರು ಶ್ವೇತಾ ಅವರ ಸೌಂದರ್ಯವನ್ನು ಗುಣಗಾನ ಮಾಡುತ್ತಿದ್ದಾರೆ. 

ಇನ್ನು ಶ್ವೇತಾ ತಿವಾರಿ ಕುರಿತು ಹೇಳುವುದಾದರೆ,. ಇವರು 'ಬಿಗ್ ಬಾಸ್' ಖ್ಯಾತಿಯ ಭೋಜ್‌ಪುರಿ ಮತ್ತು ಕಿರುತೆರೆ ನಟಿ. 'ಬಿಗ್ ಬಾಸ್' ವಿನ್ನರ್‌ ಕೂಡ ಹೌದು.  ವಯಸ್ಸು 43 ಆದರೂ ಈಕೆಯ ಸೌಂದರ್ಯ ಇನ್ನೂ ಕುಗ್ಗಿಲ್ಲ. ಯುವತಿಯಂತೆಯೇ ಕಂಗೊಳಿಸುತ್ತಿದ್ದಾರೆ. ಆಗಾಗ್ಗೆ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುವ ನಟಿ ತನ್ನ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  ಈಕೆ ಹಲವಾರು ಧಾರಾವಾಹಿಗಳನ್ನು ಮಾಡಿದರೂ ಮೈ ಹೂಂ ಅಪರಾಜಿತಾ ಧಾರಾವಾಹಿಯ ಮೂಲಕ ಚಿರಪರಿಚಿರತಾಗಿದ್ದಾರೆ. ಹೆಚ್ಚಾಗಿ ಈಕೆ ಧಾರಾವಾಹಿಗಳಲ್ಲಿ ಸಾಂಪ್ರದಾಯಿಕ ಪಾತ್ರಗಳನ್ನು ಮಾಡಿದರೂ  ನಿಜ ಜೀವನದಲ್ಲಿ ಅವರ ವ್ಯಕ್ತಿತ್ವವೇ ಬೇರೆ. 43 ನೇ ವಯಸ್ಸಿನಲ್ಲಿ, ಶ್ವೇತಾ ಫಿಟ್​ನೆಸ್​ಗೆ ಫ್ಯಾನ್ಸ್​ ಫಿದಾ ಆಗುವುದು ಇದೆ. ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಂಡರೂ, ಸೆಕ್ಸಿ ಇಮೇಜಿನಲ್ಲಿ ಈಕೆ ಕಾಣಿಸಿಕೊಳ್ಳುತ್ತಾರೆ. 

ಒಳ ಉಡುಪು ಧರಿಸದ ಪೂನಂ ಪಾಂಡೆ 'ಅಯ್ಯೋ ನನ್ನನ್ನು ಯಾರೂ ಅರ್ಥ ಮಾಡ್ಕೋತಿಲ್ಲ' ಅಂದದ್ಯಾಕೆ?

ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ ಶ್ವೇತಾ. ಕುತೂಹಲದ ವಿಷಯವೆಂದರೆ, ಇವರ ಮಗಳಿಗೆ ಈಗ 22 ವರ್ಷ. ಇದರ ಹೊರತಾಗಿಯೂ ಕಿರುತೆರೆಯಲ್ಲಿ (Hindi serial) ಜನಪ್ರಿಯತೆ ಪಡೆದಿದ್ದಾರೆ  ನಟಿ ಶ್ವೇತಾ ತಿವಾರಿ. ತಮ್ಮ ಸೌಂದರ್ಯವನ್ನು ತೋರಿಸುವ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ.  ತಮ್ಮ ಎರಡನೇ ಮಗುವಿನ ಜನನದ ನಂತರ ಒಮ್ಮೆ 73 ಕೆಜಿ ತೂಕವನ್ನು ಹೊಂದಿದ್ದರು. ಇದರಿಂದ ಸಕತ್​ ಟೆನ್ಷನ್​ ಆಗಿತ್ತಂತೆ. ಈ ಕುರಿತು  ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೊಂಡಿದ್ದರು. ಸಿಂಗಲ್​ ಪೇರೆಂಟ್​ ಆಗಿರುವ ಶ್ವೇತಾ ತಮ್ಮ ಫಿಟ್​ನೆಸ್​ ಗುಟ್ಟನ್ನು ಬಿಟ್ಟುಕೊಟ್ಟಿದ್ದರು. ನನ್ನ  ಪೌಷ್ಟಿಕತಜ್ಞರು  ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬಿನ ಉತ್ತಮ ಮಿಶ್ರಣವನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ನಾನು ನಡೆದುಕೊಂಡೆ ಎನ್ನುತ್ತಾರೆ. 
 

Latest Videos
Follow Us:
Download App:
  • android
  • ios