ಒಳ ಉಡುಪು ಧರಿಸದ ಪೂನಂ ಪಾಂಡೆ 'ಅಯ್ಯೋ ನನ್ನನ್ನು ಯಾರೂ ಅರ್ಥ ಮಾಡ್ಕೋತಿಲ್ಲ' ಅಂದದ್ಯಾಕೆ?
ಗರ್ಭಕಂಠ ಕ್ಯಾನ್ಸರ್ನಿಂದ ಸತ್ತಿರುವ ನಾಟಕವಾಗಿ ಕೋಲಾಹಲ ಸೃಷ್ಟಿಸಿದ್ದ ನಟಿ, ಆ ನಾಟಕದಿಂದಾಗಿ ಏನು ಪರಿಣಾಮ ಆಗಿದೆ ಎಂಬ ಬಗ್ಗೆ ಹೀಗೆ ಹೇಳಿದ್ದಾರೆ.
ಹಾಟೆಸ್ಟ್ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇರೋ ಬಾಲಿವುಡ್ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಕೆಲ ತಿಂಗಳ ಹಿಂದೆ ಎಲ್ಲೆಲ್ಲೂ ಬಾಲಿವುಡ್ ನಟಿ ಪೂನಂ ಪಾಂಡೆಯ ವಿಷಯ ಸದ್ದು ಮಾಡಿತ್ತು. ಈಕೆ ಸತ್ತರೆಂಬ ಸುದ್ದಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಿತ್ತು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್ ಸತ್ತಿದ್ದಾಗಿ ಹೇಳಿದ್ದರು. ಆದರೆ ಆಕೆಯ ಮೃತದೇಹ ಸಿಗದ ಕಾರಣ ಹಾಗೂ ಕುಟುಂಬಸ್ಥರ ಫೋನ್ಗಳು ಸ್ವಿಚ್ ಆಫ್ ಆಗಿದ್ದರಿಂದ ಅನುಮಾನ ಹುಟ್ಟಿದ ಬೆನ್ನಲ್ಲೇ ನಟಿ ಖುದ್ದು ವಿಡಿಯೋ ಮೂಲಕ ತಾನು ಸತ್ತಿಲ್ಲ ಎಂದು ಹೇಳಿದರು.
ಇದೀಗ ಅದೇ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ನಟಿ ಪೂನಂ ಮಾತನಾಡಿದ್ದಾರೆ. ಈ ಸುಳ್ಳು ಸುದ್ದಿಯ ಬಳಿಕ ಹೇಗೆ ಅನ್ನಿಸ್ತಿದೆ ಎಂದು ಕೇಳಿದಾಗ, ನಟಿ ಸ್ವಲ್ಪ ಭಾವುಕರಾಗಿ ಯಾರೂ ಇನ್ನೂ ನನ್ನನ್ನು ಅರ್ಥನೇ ಮಾಡಿಕೊಳ್ತಿಲ್ಲ. ನಾನು ಯಾಕೆ ಹಾಗೆ ಮಾಡಿದೆ ಎಂದು ಮೊದಲೇ ಹೇಳಿದ್ದೇನೆ. ಎಷ್ಟೋ ಮಂದಿ ಗರ್ಭಕಂಠದ ಕ್ಯಾನ್ಸರ್ನಿಂದ ಸಾಯುತ್ತಿದ್ದಾರೆ. ಇದರ ಅರಿವು ಮೂಡಿಸುವುದು ನನ್ನ ಉದ್ದೇಶವಾಗಿತ್ತು. ಆ ಉದ್ದೇಶ ಈಡೇರಿದೆ ಕೂಡ. ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರೂ ನನ್ನ ಆ ನಾಟಕದ ಬಳಿಕ ಈ ಕ್ಯಾನ್ಸರ್ ಕುರಿತು ಅರಿತುಕೊಂಡಿದ್ದಾರೆ. ಇಷ್ಟೆಲ್ಲಾ ಆಗಿದ್ದರೂ ಈಗಲೂ ನನ್ನನ್ನು ನೋಡುವ ದೃಷ್ಟಿಯೇ ಬದಲಾಗುತ್ತಿದೆ. ಆ ನಾಟಕದ ಕುರಿತು ಏನೇನೋ ಆಡಿಕೊಳ್ಳುತ್ತಿದ್ದಾರೆ. ನಾನು ಯಾಕೆ ಮಾಡಿದೆ ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಲೇ ಇಲ್ಲ. ಅವರಿಗೆಲ್ಲಾ ಹೇಗೆ ಹೇಳಬೇಕೋ ಅರ್ಥವಾಗ್ತಿಲ್ಲ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಲೈಂಗಿಕತೆಯನ್ನು ಪ್ರೀತಿಸುತ್ತೇನೆ ಎನ್ನುತ್ತಲೇ ಅಕ್ರಮ ಸಂಬಂಧದ ವಿಷ್ಯ ತಿಳಿಸಿದ ನಟ ಅರ್ಜುನ್ ರಾಮ್ಪಾಲ್
ಅಷ್ಟಕ್ಕೂ, ಸಾವಿನ ಸುಳ್ಳು ಸುದ್ದಿ ಹರಡಿದ್ದ ಈಕೆಯ ವಿರುದ್ಧ ಇದಾಗಲೇ ಹಲವಾರು ಕೇಸ್ ದಾಖಲಾಗಿದೆ. 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯೂ ದಾಖಲಾಗಿದೆ. ಆದರೆ ಸದ್ಯ ಯಾವ ಕೇಸ್ಗಳದ್ದೂ ಸುದ್ದಿ ಇಲ್ಲ. ಎಲ್ಲವೂ ಸೈಲೆಂಟ್ ಆಗಿದೆ. ಪೂನಂ ಸುಳ್ಳು ಸುದ್ದಿ ಹರಡಿದ್ದು ಗೊತ್ತಾಗುತ್ತಿದ್ದಂತೆಯೇ ಚಿತ್ರನಿರ್ಮಾಪಕ ಅಶೋಕ್ ಪಂಡಿತ್ ಅವರು ವಿಡಿಯೋ ಮೂಲಕ ನಟಿಯ ವಿರುದ್ಧ ಕೇಸ್ ದಾಖಲು ಮಾಡಿ ಈಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಭಾರತೀಯ ದಂಡ ಸಂಹಿತೆಯ 63ನೇ ಕಲಮಿನ ಪ್ರಕಾರ, ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ನೀಡಿದರೆ, ಅದು ಅಪರಾಧವೆಂದು ಸಾಬೀತಾದರೆ ಅಂಥವರಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಅಥವಾ ಐವತ್ತು ಸಾವಿರದವರೆಗೆ ವಿಸ್ತರಿಸಬಹುದಾದ ದಂಡ ಹಾಗೂ ಎರಡೂ ವಿಧಿಸುವ ಅವಕಾಶವಿದೆ. ಇದೇ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದ್ದರೂ ಇದುವರೆಗೆ ಏನೂ ಸುದ್ದಿಯಿಲ್ಲ.
ಆದರೆ ನಟಿಯ ವರ್ಚಸ್ಸಿಗೆ ಏನೂ ಕಡಿಮೆ ಇಲ್ಲ. ಇವೆಲ್ಲಾ ಸುದ್ದಿಗಳ ಬಳಿಕವೂ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಜಾಹೀರಾತು ಕಂಪೆನಿಗಳಿಂದಲೂ ಒಳ್ಳೆಯ ಆಫರ್ಗಳು ಬರುತ್ತಲೇ ಇವೆ. ಇದೀಗ ನದಿ ತೀರದಲ್ಲಿ ಬಿಕಿನಿ ತೊಟ್ಟು ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಸತ್ತವಳು ಎದ್ದು ಬಂದಾಗ ಹೀಗೆಲ್ಲಾ ಆಗುತ್ತದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ನಟಿಯ ವಿರುದ್ಧ ಇನ್ನಿಲ್ಲದ ಕೆಟ್ಟ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಈಕೆ ಸತ್ತಿರುವ ಸುದ್ದಿ ಕೇಳಿದಾಗ ದುಃಖ ಪಟ್ಟವರೇ ನಟಿಯ ಇಂಥ ವಿಡಿಯೋಗಳನ್ನು ನೋಡಿ ಶಾಪ ಹಾಕುತ್ತಿದ್ದಾರೆ.
ಹಲವರ ಜೊತೆ ಮಲಗಿದಾಗ ಆಗದ ನಾಚಿಕೆ ಶೆರ್ಲಿನ್ಗೆ ಈ ವಿಷ್ಯಕ್ಕೆ ಆಗ್ತಿದೆಯಂತೆ! ನಟಿ ಏನೆಂದ್ರು ಕೇಳಿ...