ಒಬ್ಬನಿಗಾಗಿ ಇಬ್ಬರು ಬಾಲಿವುಡ್​ ನಟಿಯರ ಫೈಟ್​: ನಿಜ ಜೀವನದ ಇಂಟರೆಸ್ಟಿಂಗ್​ ಲವ್​ ಸ್ಟೋರಿ

90ರ ದಶಕದಲ್ಲಿ ಬಾಲಿವುಡ್​ ಆಳಿದ್ದ ರವೀನಾ ಟಂಡನ್​ ಮತ್ತು ಕರಿಷ್ಮಾ ಕಪೂರ್​ ನಡುವೆ ಆ ಒಬ್ಬ ಹೀರೋ ಬಂದು ಕಿತ್ತಾಟವಾಗಿತ್ತು. ಏನಿದು ಲವ್​ ಸ್ಟೋರಿ?
 

Two actresses fight for one actor Real life interesting love story

ಚಿತ್ರರಂಗವೇ ಹಾಗೆ. ಇಲ್ಲಿ ಗಾಸಿಪ್​ಗಳದ್ದೇ (Gossip) ಕಾರುಬಾರು. ಅದರಲ್ಲಿಯೂ ಡೇಟಿಂಗ್​, ಮದುವೆ, ವಿಚ್ಛೇದನ ಇವುಗಳಂತೂ ಇಲ್ಲಿ ಮಾಮೂಲು. ಅದೇ ರೀತಿ ಒಂದೇ ಕ್ಷೇತ್ರದಲ್ಲಿ ಇರುವವರ ನಡುವೆ ಅಸೂಯೆ, ಹೊಟ್ಟೆಕಿಚ್ಚು, ಒಬ್ಬರು ಮೇಲೆ ಹೋಗುತ್ತಿದ್ದಂತೆಯೇ ಕಾಲೆಳೆಯುವುದು ಕೂಡ ಸಾಮಾನ್ಯ ಎಂಬಂತೆ ಇದು ಚಿತ್ರರಂಗವನ್ನೂ ಬಿಟ್ಟಿಲ್ಲ. ಆದರೆ ಇಲ್ಲೊಂದು ಕುತೂಹಲದ ಸಂಗತಿಯೊಂದು ಇದೀಗ ಬಯಲಾಗಿದೆ. ಅದೇನೆಂದರೆ, ಓರ್ವ ಬಾಲಿವುಡ್​ ನಾಯಕನಿಗಾಗಿ ಇಬ್ಬರು ಬಾಲಿವುಡ್​ ನಾಯಕಿಯರು ಫೈಟ್​ ನಡೆಸಿರುವ ವಿಚಾರ ಇದಾಗಿದೆ. ಈ ಬಗ್ಗೆ ಖುದ್ದು ಇದೀಗ ರವೀನಾ ಟಂಡನ್​ (Raveena Tondon)ಅವರೇ ಹೇಳಿಕೊಂಡಿದ್ದಾರೆ. ತಮ್ಮ ಜೀವನದ ಕುರಿತು ಸಂದರ್ಶನವೊಂದರಲ್ಲಿ ರವೀನಾ ಕುತೂಹಲದ ಅಂಶಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು,  ತಾವು ಅನಿಲ್​ ಥಡಾನಿ ಅವರನ್ನು ಮದುವೆಯಾದಾಗ, ಅವರ ಮೊದಲ ಪತ್ನಿ ಹೇಗೆ ಜಗಳವಾಡಿದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು. ಇದೀಗ ಖುದ್ದು ಓರ್ವ ನಟನಿಗಾಗಿ ರವೀನಾ ಮತ್ತು ಇನ್ನೋರ್ವ ನಟಿಯ ಮಧ್ಯೆ ಆಗಿರುವ ವಿಷಯವನ್ನು ಅವರು ಹೊರಹಾಕಿದ್ದಾರೆ.

ಆ ನಟನ ಹೆಸರು ಬಾಲಿವುಡ್​ನ ಸೂಪರ್​ ಹೀರೋ ಅಜಯ್​ ದೇವಗನ್​ ಹಾಗೂ ಇನ್ನೋರ್ವ ನಟಿಯೆಂದರೆ ಕರಿಷ್ಮಾ ಕಪೂರ್​! ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟಿ ರವೀನಾ ಟಂಡನ್​, ಕರಿಷ್ಮಾ ಕಪೂರ್ ಅವರ ಹೆಸರು ಹೇಳದೆ ಓರ್ವ ನಟಿ ನನ್ನನ್ನು 4 ಸಿನಿಮಾದಿಂದ ತೆಗೆದುಹಾಕುವಂತೆ ಮಾಡಿದ್ದಳು ಎಂದು ಆರೋಪಿಸಿದ್ದರು. ಆಕೆ  ತನ್ನ ಇನ್‌ಫ್ಲುಯೆನ್ಸ್ ಬಳಸಿ ನನಗೆ ನಾಲ್ಕು ಸಿನಿಮಾ ಸಿಗದ ಹಾಗೆ ಮಾಡಿದ್ದಳು ಎಂದಿದ್ದರು. 90ರ ದಶಕದಲ್ಲಿ ಬಾಲಿವುಡ್​ ಆಳಿದ ನಟಿಯರ ಪೈಕಿ ರವೀನಾ ಕೂಡ ಒಬ್ಬರು. ಹೀಗಾಗಿ ಸಂದರ್ಶನದ (Interview) ಸಮಯದಲ್ಲಿ  ರವೀನಾ ಅವರಿಗೆ 90ರ ದಶಕದ ಯಾವ ನಟಿಯರ ಜೊತೆ ಒಳ್ಳೆಯ ಬಾಂಧವ್ಯವಿದೆ ಎಂದು ಪ್ರಶ್ನೆ ಮಾಡಲಾಗಿತ್ತು. ಆ ಸಮಯದಲ್ಲಿ ಈ ವಿಷಯವನ್ನು ರವೀನಾ ಬಹಿರಂಗಪಡಿಸಿದ್ದರು.  ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ಕಾಜೊಲ್, ರಾಣಿ ಮುಖಜರ್ಜಿ, ನೀಲಂ, ಮನೀಷ್ ಕೊಯಿರಾಲಾ (Maneesha Koirala) ಅವರ ಜೊತೆ ಉತ್ತಮ ಬಾಂಧವ್ಯ ಇದೆ ಎಂದು ಹೇಳಿ ಕರಿಷ್ಮಾ ಅವರ ಹೆಸರನ್ನು ಹೇಳದೇ ಆಕೆ ತಮಗೆ ಅನ್ಯಾಯ ಮಾಡಿದುದಾಗಿ ಹೇಳಿದ್ದರು. 

Ravina Tandon: ರವಿನಾ ಟಂಡನ್​ ಪತಿಗಾಗಿ ಹಾಲಿ-ಮಾಜಿಗಳ ಫೈಟ್​!

ಆದರೆ ಆ ನಟಿ ಕರಿಷ್ಮಾ ಕಪೂರ್​ (Karishma Kapoor) ಎಂದು ಈಗ ಬಹಿರಂಗವಾಗಿದೆ. ಆಕೆ ನನ್ನ ವಿಚಾರವಾಗಿ ತುಂಬ ಅಭದ್ರತೆಯಿಂದ ಇದ್ದಳು. ನಾಲ್ಕು ಸಿನಿಮಾಗಳಿಂದ ನನ್ನನ್ನು ತೆಗೆದು ಹಾಕುವಂತೆ ಮಾಡಿದ್ದಳು. ನಾನು ಆಕೆಯ ಜೊತೆ ಒಂದು ಸಿನಿಮಾ ಮಾಡಬೇಕಾಗಿ ಬಂತು. ಆ ನಟಿ ನಿರ್ಮಾಪಕರಿಗೂ, ಹೀರೋಗೂ ಕ್ಲೋಸ್ ಆಗಿದ್ದರು. ಈ ತರ ಎಲ್ಲ ಆಗತ್ತೆ, ಆದರೆ ನನ್ನ ಹತ್ರ ಈ ರೀತಿ ಆಟ ಆಡೋಕೆ ಆಗಲ್ಲ ಎಂದು ರವೀನಾ ಹೇಳಿದ್ದರು. 

ಅಷ್ಟಕ್ಕೂ ಆಗಿರೋದು ಏನೆಂದರೆ, ರವೀನಾ ಮತ್ತು ಅಜಯ್​ ದೇವಗನ್​ (Ajay Devagan) ನಡುವೆ ಕುಚ್ ಕುಚ್ ಇತ್ತು. ಇವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದರು. ಆದರೆ ಇದೇ ವೇಳೆ ಅಜಯ್​ ಅವರ ಕಣ್ಣು ಕರಿಷ್ಮಾ ಅವರ ಮೇಲೆ ಬಿತ್ತು. ಅವರು ಕರಿಷ್ಮಾ ಜೊತೆ ಡೇಟಿಂಗ್​ (Dating) ಮಾಡಲು ಶುರು ಮಾಡಿದರು. ಇದರಿಂದಾಗಿ ಈ ಇಬ್ಬರು ನಟಿಯರ ಮಧ್ಯೆ ಪೈಪೋಟಿ, ಅಸೂಯೆಗಳ ಜಗಳ ಶುರುವಾಗಿತ್ತು. ಪಾರ್ಟಿಯೊಂದರಲ್ಲಿ (Party) ರವೀನಾ ಮತ್ತು ಕರಿಷ್ಮಾ ಕ್ಯಾಮೆರಾಕ್ಕೆ ಪೋಸ್ ಕೊಡುವ ಸಂದರ್ಭ ಬಂದಾಗ ಇಬ್ಬರೂ ದೂರ ಹೋಗಿದ್ದಾಗಲೇ ಇಬ್ಬರ ನಡುವಿನ ತಿಕ್ಕಾಟದ ಅರಿವಾಗಿತ್ತು.  'ಅಗತ್ಯ ಬಿದ್ದರೆ ನಾನು ಪೊರಕೆ ಜೊತೆ ಪೋಸ್ ಕೊಡ್ತೀನಿ. ಕರೀಷ್ಮಾ, ನಾನು ಸ್ನೇಹಿತರಲ್ಲ. ಕೆಲಸದ ವಿಷಯ ಬಂದಾಗ ಈ ರೀತಿ ಅಹಂಕಾರದ ಸಮಸ್ಯೆಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ" ಎಂದು ರವೀನಾ ಹೇಳಿದ್ದರು. ಈಗ ಎಲ್ಲವೂ ಸ್ಪಷ್ಟವಾಗಿ ಬಹಿರಂಗಗೊಂಡಿದೆ.

Tamannaah Bhatia ಸನ್ಯಾಸ ಸ್ವೀಕರಿಸಿದ್ರಾ? ಮಿಲ್ಕಿ ಬ್ಯೂಟಿಯ ಹೊಸ ಅವತಾರಕ್ಕೆ ಫ್ಯಾನ್ಸ್​ ಶಾಕ್​!
 

Latest Videos
Follow Us:
Download App:
  • android
  • ios