Asianet Suvarna News Asianet Suvarna News

ದುಬೈನಲ್ಲಿ ನಟಿ ಉರ್ಫಿ ಜಾವೇದ್‌ನನ್ನು ವಶಕ್ಕೆ ಪಡೆದ ಪೊಲೀಸ್: ಕಾರಣ ಹೀಗಿದೆ..

ತನ್ನ ಚಿತ್ರ - ವಿಚಿತ್ರ ಹಾಗೂ ಅರೆ ಬರೆ ಉಡುಪಿನಿಂದಾಗಿಯೇ ಸುದ್ದಿ ಮಾಡುವ ನಟಿ ಉರ್ಫಿ ಜಾವೇದ್ ಅವರು ರಜೆಯಲ್ಲಿದ್ದ ಯುಎಇಯಲ್ಲಿ ವಶಕ್ಕೊಳಗಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಅಲ್ಲದೆ, ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ದುಬೈನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾರಣ ನಟಿ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. 

tv actress uorfi javed detained in dubai uae due to revealing outfit and shooting in open place ash
Author
First Published Dec 20, 2022, 9:09 PM IST

ಸದಾ ತನ್ನ ಉಡುಪಿನಿಂದಾಗಿಯೇ (Dress) ವಿವಾದಕ್ಕೀಡಾಗುವ ಹಾಗೂ ಸುದ್ದಿಗೊಳಗಾಗುವ ನಟಿ ಉರ್ಫಿ ಜಾವೇದ್‌ (Uorfi Javed) ಈಗ ವಿದೇಶದಲ್ಲೂ ಸುದ್ದಿಯಾಗಿದ್ದಾಳೆ. ಪ್ರವಾಸಕ್ಕೆಂದು (Holiday) ತೆರಳಿದ್ದ ನಟಿಯನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಹೌದು, ಟಿವಿ ನಟಿ (TV Actress) ಹಾಗೂ ಬಿಗ್‌ ಬಾಸ್‌ ಒಟಿಟಿ ಸ್ಪರ್ಧಿ (Bigg Boss OTT Contestant) ಉರ್ಫಿ ಜಾವೇದ್ ಅವರನ್ನು ಯುಎಇಯಲ್ಲಿ (UAE) ವಶಕ್ಕೆ ಪಡೆಯಲಾಗದೆ. ಪ್ರವಾಸಕ್ಕೆಂದು ತೆರಳಿದ್ದ ನಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅಲ್ಲಿಯೇ ಇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.  ತನ್ನ ಚಿತ್ರ - ವಿಚಿತ್ರ ಹಾಗೂ ಅರೆ ಬರೆ ಉಡುಪಿನಿಂದಾಗಿಯೇ ಸುದ್ದಿ ಮಾಡುವ ನಟಿ ಉರ್ಫಿ ಜಾವೇದ್ ಅವರು ರಜೆಯಲ್ಲಿದ್ದ ಯುಎಇಯಲ್ಲಿ ವಶಕ್ಕೊಳಗಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಅಲ್ಲದೆ, ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ದುಬೈನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಕಾರಣ ನಟಿ ತೊಂದರೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. 

ಸಾರ್ವಜನಿಕವಾಗಿ ಅಶ್ಲೀಲ ಉಡುಪಿನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದು, ಅದಕ್ಕೆ ಆ ದೇಶದಲ್ಲಿ ಅವಕಾಶವಿಲ್ಲ. ಈ ಹಿನ್ನೆಲೆ ಅವರು ವಶಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರದ ಬಗ್ಗೆ ಮಾಧ್ಯಮಗಳು ಉರ್ಫಿ ಜಾವೇದ್‌ ತಂಡವನ್ನು ಸಂಪರ್ಕಿಸಿದರೂ, ಅದಕ್ಕೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸದ್ಯ ಆಕೆಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ನಡವಳಿಕೆ; ಉರ್ಫಿ ಜಾವೇದ್ ವಿರುದ್ಧ ದೂರು ದಾಖಲು

ಉರ್ಫಿಯನ್ನು ಬಂಧಿಸಿರುವುದೇಕೆ..?
ಉರ್ಫಿ ಜಾವೇದ್‌ ಸಾರ್ವಜನಿಕವಾಗಿ ಬಹಿರಂಗ ಉಡುಪಿನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾರಣ ತೊಂದರೆಗೆ ಸಿಲುಕಿದರು ಎಂದು ತಿಳಿದುಬಂದಿದೆ. ಸ್ವತ: ನಟಿಯೇ ರೆಡಿ ಮಾಡಿದ  ಉಡುಪಿನಲ್ಲಿ ತನ್ನ ಇನ್‌ಸ್ಟಾಗ್ರಾಮ್‌ಗಾಗಿ ವಿಡಿಯೋವನ್ನು ಚಿತ್ರೀಕರಿಸಿದ್ದಳು. ಆ ಉಡುಪು ದುಬೈನಲ್ಲಿರುವ ಜನರ ಪ್ರಕಾರ ಅಶ್ಲೀಲವಾಗಿದೆ. ಹಾಗೂ, ಆಕೆ ಧರಿಸಿದ್ದ ಉಡುಪಿಗಿಂತ, ಉರ್ಫಿ ಜಾವೇದ್‌ ವಿಡಿಯೋವನ್ನು ತೆರೆದ ಜಾಗದಲ್ಲಿ ಚಿತ್ರೀಕರಿಸುತ್ತಿದ್ದಳು ಎಂಬುದು ವಶಕ್ಕೆ ಪಡೆಯಲು ಕಾರಣವಾಗಿದೆ ಎಂದೂ ತಿಳಿದುಬಂದಿದೆ. ಅಂತಹ ಪ್ರದೇಶದಲ್ಲಿ ಅವಳು ಧರಿಸಿದ್ದ ಉಡುಪನ್ನು ಹಾಕಲು ಅಲ್ಲಿ ಅನುಮತಿಸುವುದಿಲ್ಲ. ಈ ಹಿನ್ನೆಲೆ ಆಕೆಯನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ ಎಮದು ತಿಳಿದುಬಂದಿದೆ.

ಆಸ್ಪತ್ರೆಗೂ ದಾಖಲಾಗಿದ್ದ ಉರ್ಫಿ ಜಾವೇದ್‌..!
ಇನ್ನೊಂದೆಡೆ, ಉರ್ಫಿಯ ದುಬೈ ಪ್ರವಾಸವು ಇತರೆ ಕಾರಣಗಳಿಗಾಗಿಯೂ ಸುದ್ದಿಯಾಗಿದೆ. ದುಬೈನಲ್ಲೇ ನಟಿಯ ಆರೋಗ್ಯ ಹದಗೆಟ್ಟು ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ಸಂಬಂಧ ವಿಡಿಯೋ ಮೂಲಕ ನಟಿ ಜನರಿಗೆ ಮಾಹಿತಿ ನೀಡಿದ್ದರು. "ನಾನು ಲಾರಿಂಜೈಟಿಸ್ ಮತ್ತು ಗಲಗ್ರಂಥಿಯ ಉರಿಯೂತದಿಂದ ಬಳಲುತ್ತಿದ್ದೇನೆ ಎಂದು ಈ ವೈದ್ಯರು ಅಂತಿಮವಾಗಿ ರೋಗನಿರ್ಣಯ ಮಾಡಿದರು’’ ಎಂದು ನಟಿ ವಿಡಿಯೋದಲ್ಲಿ ಕ್ಯಾಮೆರಾ ನೋಡಿಕೊಂಡು ಹೇಳಿದ್ದಾರೆ. ನಂತರ ವೈದ್ಯರು ಅವಳನ್ನು ಮಾತನಾಡದಂತೆ ಕೇಳಿದ್ದು, ನಟಿಯ ಆರೋಗ್ಯ ಈಗ ಉತ್ತಮವಾಗಿದೆ ಎಂದು ಅವರ ತಂಡ ಬಳಿಕ ಹೇಳಿಕೆ ನೀಡಿತ್ತು. ಈ ಘಟನೆಯ ಬೆನ್ನಲ್ಲೇ ನಟಿ ಉರ್ಫಿ ಜಾವೇದ್‌ ಅನ್ನು ಆಕೆಯ ಉಡುಪಿನ ಕಾರಣಕ್ಕೆ ವಶಕ್ಕೆ ಪಡೆದಿರುವ ಸುದ್ದಿಯಾಗಿದೆ.

ಇದನ್ನೂ ಓದಿ: ಚಿಕ್ಕ ಹುಡುಗರೂ ಕಿರುಕುಳ ಕೊಡ್ತಿದ್ದಾರೆ ಅಂತಿದ್ದಾಳೆ ಉರ್ಫಿ; ಆ 10 ಹುಡುಗರು ಏನ್ ಕಾಟ ಕೊಟ್ರು?

Follow Us:
Download App:
  • android
  • ios