Asianet Suvarna News Asianet Suvarna News

‘ರಾಮ್​ ಶ್ಯಾಮ್​ ಪಾನಿಪುರಿ’ ತಿನ್ನುವುದು ಬಿಡದೇ ತೆಳ್ಳಗಾಗಬೇಕೆಂದ ಅನಿಮಲ್​ ನಟಿ ತೃಪ್ತಿ ಡಿಮ್ರಿ!

‘ರಾಮ್​ ಶ್ಯಾಮ್​ ಪಾನಿಪುರಿ’ ತಿನ್ನುವುದು ಬಿಡದೇ ತೆಳ್ಳಗಾಗಬೇಕೆಂದ ಅನಿಮಲ್​ ನಟಿ ತೃಪ್ತಿ ಡಿಮ್ರಿ ಬಾಯ್​ಫ್ರೆಂಡ್​ ಜೊತೆ ಸೆಲ್ಫಿ! ಏನಿದು ಪಾನಿಪುರಿ?
 

Triptii Dimri shares a sweet birthday wish for rumoured boyfriend Sam Merchant suc
Author
First Published Jan 31, 2024, 6:05 PM IST

ಅನಿಮಲ್​ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್​​ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್​ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್​ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್​ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್​ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್​ ಮೀಡಿಯಾ ಕೂಡ ಸರ್ಚ್​ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ.  ಅನಿಮಲ್​ ಚಿತ್ರದಲ್ಲಿ ನಟ ರಣಬೀರ್​ ಕಪೂರ್​ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್​ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ. 
 

29 ವರ್ಷದ ತೃಪ್ತಿ ಈ ಮೊದಲು ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಜೊತೆ ಸಂಬಂಧದಲ್ಲಿದ್ದರು. ಅದರ ಬಳಿ ಅವರ ನಡುವೆ ಬ್ರೇಕಪ್​ ಆಗಿದೆ. ಇದೀಗ ನಟಿ, ಹೋಟೆಲ್​ ಉದ್ಯಮಿ ಆಗಿರುವ ಸ್ಯಾಮ್​ ಮರ್ಚೆಂಟ್​ ಜೊತೆ ಸಂಬಂಧ ಹೊಂದಿದ್ದು, ಇವರಿಬ್ಬರ ಫೋಟೋಗಳು ಇದಾಗಲೇ ವೈರಲ್​ ಆಗಿವೆ. ತಮ್ಮ ಸಂಬಂಧವನ್ನು ಇನ್ನೂ ಕನ್​ಫರ್ಮ್​ ಮಾಡಿಲ್ಲ ನಟಿ. ಆದರೆ ಚಿತ್ರತಾರೆಯರ ಸಂಬಂಧ ಗುಟ್ಟಾಗೇನೂ ಉಳಿಯುವುದಿಲ್ಲವಲ್ಲ. ಅಂದಹಾಗೆ, ಸ್ಯಾಮ್ ಮರ್ಚೆಂಟ್ ಅವರು  ಗೋವಾದಲ್ಲಿರುವ ವಾಟರ್ಸ್ ಬೀಚ್ ಲೌಂಜ್ ಮತ್ತು ಗ್ರಿಲ್‌ನ ಸಂಸ್ಥಾಪಕರಾಗಿದ್ದಾರೆ. ಅವರ 249K ಅನುಯಾಯಿಗಳಲ್ಲಿ ದಿಶಾ ಪಟಾನಿ, ತೃಪ್ತಿ ಡಿಮ್ರಿ ಮತ್ತು ಟೈಗರ್ ಶ್ರಾಫ್ ಸೇರಿದ್ದಾರೆ. ಸ್ಯಾಮ್ ಮರ್ಚೆಂಟ್ ಮಾಡೆಲ್ ಆಗಿದ್ದರು. 2002ರಲ್ಲಿ ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ನಂತರ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡರು. ಗೋವಾದಲ್ಲಿ ಬೀಚ್ ಕ್ಲಬ್‌ಗಳು ಮತ್ತು ಹೋಟೆಲ್‌ಗಳನ್ನು ಪ್ರಾರಂಭಿಸಿದರು.

ಬೆತ್ತಲೆಯಾಗಿ ನಟಿಸಿದ ಬಳಿಕ ಎಷ್ಟೋ ರಾತ್ರಿ ನಿದ್ದೆಯಿಲ್ಲದೇ ಕಳೆದೆ: ಸವಿ ನೆನಪು ತೆರೆದಿಟ್ಟ ಅನಿಮಲ್​ ನಟಿ ತೃಪ್ತಿ ಡಿಮ್ರಿ

 ಇದೀಗ ಸ್ಯಾಮ್​ ಜೊತೆಗೆ ಯಾವುದೇ ಕನ್​ಫರ್ಮ್​ ಸಂಬಂಧದ ಬಗ್ಗೆ ತೃಪ್ತಿ ಮಾತನಾಡಿಲ್ಲವಾದರೂ ಅವರ ಜೊತೆ ಹುಟ್ಟುಹಬ್ಬ  ಆಚರಿಸಿಕೊಂಡಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಈ ಬಗ್ಗೆ ಅವರು ಬರೆದುಕೊಂಡು ಗೆಳೆಯನಿಗೆ ಬರ್ತ್​ಡೇ ವಿಷ್​ ಮಾಡಿದ್ದಾರೆ. ‘ಹ್ಯಾಪಿ ಬರ್ತ್​ಡೇ ಸ್ಯಾಮ್​ ಮರ್ಚೆಂಟ್​. ‘ರಾಮ್​ ಶ್ಯಾಮ್​ ಪಾನಿಪುರಿ’ ತಿನ್ನುವುದನ್ನು ಬಿಡದೆಯೂ ನಾವು ಮತ್ತೊಮ್ಮೆ ತೆಳ್ಳಗೆ ಆಗಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಅವರು ಈ ಫೋಟೋಗಳಿಗೆ ಕ್ಯಾಪ್ಷನ್​ ನೀಡಿದ್ದಾರೆ. ಇದೇನು ಪಾನಿಪುರಿ ಎನ್ನುವುದು ತಿಳಿಯದೇ ಸದ್ಯ ತೃಪ್ತಿ ಡಿಮ್ರಿ ಫ್ಯಾನ್ಸ್​ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ನಟಿ ತೃಪ್ತಿ 2017  ತೆಗೆದ ಫೋಟೋ ಮತ್ತು 2023ರಲ್ಲಿ ತೆಗೆದ ಫೋಟೋವನ್ನು ಜೊತೆ ಸೇರಿಸಿ ಸ್ಯಾಮ್​ ಜೊತೆ ಚಿತ್ರ ಶೇರ್​ ಮಾಡಿಕೊಂಡಿದ್ದಾರೆ.  ಹೀಗೆಯೇ ತೆಳ್ಳಗಿದ್ದರೆ ಚೆನ್ನಾಗಿತ್ತು ಎಂದು ಹೇಳಿಕೊಂಡಿದ್ದಾರೆ.  ಇತ್ತೀಚೆಗೆ, ತೃಪ್ತಿ ದಿಮ್ರಿ ಮದುವೆಗೆ ಹಾಜರಾಗಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ (Social media) ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು.. ಇತ್ತೀಚೆಗೆ, ತೃಪ್ತಿ, ಮದುವೆ ಕಾರ್ಯದಲ್ಲಿ ಕಾಣಿಸಿಕೊಂಡ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಒಂದು ಸ್ಯಾಮ್ ಮರ್ಚೆಂಟ್ ಜೊತೆಗಿನ ಸೆಲ್ಫಿ ಆಗಿತ್ತು. ಇದು ಇವರಿಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗಳನ್ನು ಹುಟ್ಟುಹಾಕಿದೆ.

ನಟಿ ಬೆತ್ತಲಾದ ದೃಶ್ಯ ನೋಡಿದ್ದು ಸಾಕಾಗಿಲ್ವಂತೆ! ರಣಬೀರ್​-ಬಾಬಿ ಕಿಸ್ಸಿಂಗ್​ ನೋಡಲು ಸಿಗದೇ ಅನಿಮಲ್​ ಫ್ಯಾನ್ಸ್​ ಗರಂ

Follow Us:
Download App:
  • android
  • ios