ಅಗಲಿದ ಗಾನ ಲೋಕದ ದೊರೆಯ ಸ್ಮರಣೆ/  ಎಸ್‌ಪಿಬಿ ನೆನೆದ ಗಣ್ಯರು/ ಬಾಲಸುಬ್ರಹ್ಮಣ್ಯಂ ಜೀವನ ಸಾಧನೆ/ ಎಸ್‌ಬಿಪಿ ಪುತ್ರ ಎಸ್‌ಪಿ ಚರಣ್ ಭಾಗಿ

ಚೆನ್ನೈ(ಸೆ. 30)ಗಾನ ಲೋಕವನ್ನು ಅಗಲಿದ ಸಂಗೀತ ಸಾಮ್ರಾಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದಿಗ್ಗಜರೆಲ್ಲ ಒಂದಾಗಿ ನಮನ ಸಲ್ಲಿಸಿದ್ದಾರೆ. ತಮಿಳುನಾಡಿನ ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಒಂದಾಗಿ ಅಗಲಿದ ಮಾಂತ್ರಿಕನ ನೆನೆದರು.

ಕೊರೋನಾ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ದಿಗ್ಗಜ ಗಾಯಕ ಕೊರೋನಾದಿಂದ ಗುಣಮುಖರಾಗಿದ್ದರೂ ಸಾವನ್ನು ಗೆಲ್ಲಲು ಸಾಧ್ಯವಾಗಲೇ ಇಲ್ಲ. ಎಸ್‌ಪಿಬಿ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಸಹ ಅಭಿಪ್ರಾಯ ಹಂಚಿಕೊಂಡರು.

ಎಸ್‌ಪಿಬಿ ಆಸ್ಪತ್ರೆ ಬಿಲ್ ಮೂರು ಕೋಟಿ ರೂ. ಹೌದಾ!

ಹದಿನಾರು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಗೀತೆ ಹಾಡಿ ಸಂಗೀತ ಲೋಕವನ್ನೆ ಬಿಟ್ಟು ತೆರಳಿರುವ ಎಸ್‌ಪಿಬಿ ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂಬ ಒತ್ತಾಯ ಸಹ ಕೇಳಿ ಬಂದಿದೆ. ತಮಿಳುನಾಡಿನ ಗಣ್ಯರು ಎಸ್‌ಪಿಬಿ ಅವರನ್ನು ಸ್ಮರಿಸಿದ ರೀತಿ ನೋಡಿ...