ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ ‘ತ್ರಿಶಾ ರಹಸ್ಯವಾಗಿ ಮತಾಂತರಗೊಂಡಿದ್ದಾರಾ?’ ಎಂಬುದು. ಅಷ್ಟೇ ಅಲ್ಲದೆ, ಕಳೆದ ಕೆಲವು ಸಮಯದಿಂದ ತಮಿಳಿನ ಖ್ಯಾತ ನಟರೊಬ್ಬರ ಜೊತೆ ತ್ರಿಶಾ ಹೆಸರು ಕೇಳಿಬರುತ್ತಿದೆ. ಹೀಗಾಗಿ, ‘ಆ ಸ್ಟಾರ್ ನಟನ ಜೊತೆ ಈ ನಟಿಗೆ ಮದುವೆ ಆಗೋಯ್ತಾ? ಆ ನಟನಿಗೋಸ್ಕರವೇ ಇವರು ಧರ್ಮ ಬದಲಿಸಿದರಾ?’ ಎಂಬ ಅನುಮಾನಗಳು ದಟ್ಟವಾಗಿವೆ.

ಈ ನಟಿಯ ಖತೆ ಏನಾಗಿದೆ?

ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ 'ಕ್ವೀನ್' ಎಂದೇ ಖ್ಯಾತರಾಗಿರುವ ನಟಿ ತ್ರಿಶಾ ಕೃಷ್ಣನ್ (Trisha Krishan) ಬಿಟ್ರು ವಿವಾದ ಅವರ ಬೆಂಬಿಡದು ಅನ್ನೋ ಹಾಗೆ ಆಗಿದೆ. ತಮಿಳು ಸ್ಟಾರ್ ನಟ ಇಳೆಯ ದಳಪತಿ ಎಂದೇ ಖ್ಯಾತವಾಗಿರುವ ಹಾಗೂ ಟಿವಿಕೆ (TVK) ಪಕ್ಷ ಸ್ಥಾಪಿಸಿ ಸದ್ಯ ಚುನಾವಣಾ ರಾಜಕೀಯಕ್ಕೆ ಇಳಿದಿರುವ ವಿಜಯ್ ಜೋಸೆಫ್ (Vijay Joseph) ಜೊತೆಗಿನ ತ್ರಿಶಾ ಸ್ನೇಹ ತಮಿಳುನಾಡಿನಲ್ಲಿ ಮನೆ ಮಾತಾಗಿರೋವಂಥದ್ದೇ! ಇತ್ತೀಚೆಗಷ್ಟೇ ವಿಜಯ್ (Thalapathy Vijay) ಪತ್ನಿ ಡಿವೋರ್ಸ್‌ ಫೈಲ್ ಮಾಡಿರೋ ಸುದ್ದಿ ಚರ್ಚೆಗೆ ಬಂದ ವೇಳೆ ಕೂಡ ಇದಕ್ಕೆ ಕಾರಣ ತ್ರಿಶಾರೇ ಅನ್ನೋ ಆರೋಪಗಳೂ ಕೇಳಿ ಬಂದಿದ್ದವು.

ತಮಿಳು ಮತ್ತು ತೆಲುಗಿನ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಮಿಂಚಿರುವ ಈ ಚೆಲುವೆ, ಬಾಲಿವುಡ್‌ನ ಅಕ್ಷಯ್ ಕುಮಾರ್ ಅಭಿನಯದ ‘ಖಟ್ಟಾ ಮಿಠಾ’ ಚಿತ್ರದ ಮೂಲಕವೂ ದೇಶಾದ್ಯಂತ ಗುರುತಿಸಿಕೊಂಡಿದ್ದರು. ಸದಾ ಫಿಟ್ನೆಸ್ ಮತ್ತು ಸಿನಿಮಾಗಳ ಮೂಲಕ ಸೌಂಡ್ ಮಾಡುತ್ತಿದ್ದ ತ್ರಿಶಾ ಬಗ್ಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಅಚ್ಚರಿಯ ವಿಷಯ ಚರ್ಚೆಯಾಗುತ್ತಿದೆ.

ನಿನ್ನೆ ಅಂದ್ರೆ ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಮತದಾನ ಇತ್ತು. ಈ ವೇಳೆ ಮತ ಚಲಾಯಿಸಲು ಬಂದ ತ್ರಿಶಾ, ಮಾಧ್ಯಮಗಳೊಂದಿಗೆ ಕೂಡ ಮಾತನಾಡಿದ್ರು. ಆ ಬಳಿಕ ಅವರು, ತಮ್ಮ ಕಾರಿನಲ್ಲಿ ಕುಳಿತುಕೊಳ್ಳಲು ಕಾರ್ ಡೋರ್ ತೆಗೆದಾಗಲೇ ಸಾಕಷ್ಟು ಜನರಿಗೆ ಆ ದೃಶ್ಯ ಕಣ್ಣಿಗೆ ಬಿದ್ದಿತ್ತು. ಬಹುತೇಕ ಮಾಧ್ಯಮಗಳಲ್ಲಿ ಕೂಡ ಈ ವಿಡಿಯೋಗಳ ಸುದ್ದಿ ಪ್ರಸಾರವಾಗಿತ್ತು.

ಸಾಂಪ್ರದಾಯಿಕ ತಮಿಳು ಬ್ರಾಹ್ಮಣ ಹಿಂದೂ ಕುಟುಂಬ

ತ್ರಿಶಾ ಮೂಲತಃ ಅತ್ಯಂತ ಸಾಂಪ್ರದಾಯಿಕ ತಮಿಳು ಬ್ರಾಹ್ಮಣ ಹಿಂದೂ ಕುಟುಂಬಕ್ಕೆ ಸೇರಿದವರು. ಅವರ ಹೆಸರಿನಲ್ಲಿರುವ ‘ಕೃಷ್ಣನ್’ ಎನ್ನುವ ಪದಕ್ಕೆ ‘ಶ್ರೀಕೃಷ್ಣನ ಪರಮ ಭಕ್ತೆ’ ಎಂಬ ಅರ್ಥವಿದೆ. ಮನೆಯಲ್ಲಿ ಆಚಾರ-ವಿಚಾರಗಳನ್ನು ಪಾಲಿಸಿಕೊಂಡು ಬಂದಿರುವ ಈ ನಟಿಯ ಬಗ್ಗೆ ಈಗ ಹೊಸದೊಂದು ಗಾಸಿಪ್ ಹರಿದಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಸಾಮಾಜಿಕ ಜಾಲತಾಣದ 'ಛೋಟಾ ಡಾನ್' (Chota Don) ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾದ ಒಂದು ಪೋಸ್ಟ್.

ಈ ಪೋಸ್ಟ್‌ನಲ್ಲಿ ತ್ರಿಶಾ ಅವರ ಕಾರಿನ ಒಳಭಾಗದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು ಒಂದು 'ಕ್ರಾಸ್' (✝️) ಪೆಂಡೆಂಟ್! ಹೌದು, ಬ್ರಾಹ್ಮಣ ಕುಟುಂಬದ ನಟಿಯ ಕಾರಿನಲ್ಲಿ ಕ್ರೈಸ್ತ ಧರ್ಮದ ಸಂಕೇತವಾದ ಕ್ರಾಸ್ ಕಂಡ ತಕ್ಷಣ ನೆಟ್ಟಿಗರು ಅಚ್ಚರಿಯ ಶಾಕ್‌ಗೆ ಒಳಗಾಗಿದ್ದಾರೆ.

ತ್ರಿಶಾ ಕಾರಿನಲ್ಲಿ ಕ್ರೈಸ್ತರ ಧಾರ್ಮಿಕ ಸಂಕೇತ ಕ್ರಾಸ್

ಆದ್ರೆ, ರಂಗೋಲಿ ಕೆಳಗೆ ಮಾತ್ರವಲ್ಲ, ರಂಗೋಲಿ ಒಳಗೂ ತೂರುವ ಸೋಶಿಯಲ್ ಮೀಡಿಯಾ ಬಳಕೆದಾರರು, ತ್ರಿಶಾ ಕಾರಿನಲ್ಲಿ ಕ್ರೈಸ್ತರ ಧಾರ್ಮಿಕ ಸಂಕೇತ, ಕ್ರಾಸ್ ಅನ್ನು ಕಂಡ ತಕ್ಷಣವೇ ತಮ್ಮದೇ ಆದ ರೀತಿಯಲ್ಲಿ ಚರ್ಚೆ ಶುರು ಮಾಡಿಕೊಂಡಿದ್ದಾರೆ. ಬ್ರಾಹ್ಮಣಳಾದ ತ್ರಿಶಾಗೆ ವಿಜಯ್ ಜೋಸೆಫ್ ಜೊತೆ ಸ್ನೇಹವಿರೋದೇನೋ ಸರಿ. ಆದ್ರೆ, ಸ್ನೇಹಿತನ ಧರ್ಮದ ಸಿಂಬಾಲ್ ಅನ್ನೇ ತನ್ನ ಕಾರಿನಲ್ಲೂ ಹಾಕಿಕೊಂಡರಾ ನಟಿ? ಅಥವ ಬೇರೆಯದ್ದೇ ಏನೋ ಇದೆಯಾ? ಹೀಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ನೆಟ್ಟಿಗರು.

ಅದ್ರಲ್ಲೂ ಕೆಲವರಂತೂ, "ತ್ರಿಶಾ ರಹಸ್ಯವಾಗಿ ಮತಾಂತರಗೊಂಡಿದ್ದಾರಾ?" ಅನ್ನೋ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, "ಆ ಸ್ಟಾರ್ ನಟನ ಜೊತೆ ಈ ನಟಿಗೆ ಮದುವೆ ಆಗೋಯ್ತಾ? ಆ ನಟನಿಗೋಸ್ಕರವೇ ಇವರು ಧರ್ಮ ಬದಲಿಸಿದರಾ?" ಎಂದೂ ಕೇಳುತ್ತಿದ್ದಾರೆ.

ಒಟ್ಟಿನಲ್ಲಿ ಸತ್ಯ ಸುಳ್ಳಿನ ಆಚೆ ನೆಟ್ಟಿಗರ ಬೆರಳಚ್ಚು ಕುಟ್ಟುವ ಚಟಕ್ಕಂತೂ ಮಿತಿಯೇ ಇಲ್ಲದಂತಿದ್ದು, ಕುತೂಹಲದ ಎಳೆ ಕೂಡ ಹಬ್ಬುತ್ತಲೇ ಇದೆ..!