84 ರ ಹರೆಯದ ಹಾಲಿವುಡ್ ನಟ ಅಲ್ ಪಸಿನೋ 'Sonny Boy' ಪುಸ್ತಕದಲ್ಲಿ ಬಾಲ್ಯದ ಆಘಾತಕಾರಿ ಘಟನೆ ಬರೆದಿದ್ದಾರೆ. ಹತ್ತು ವರ್ಷದವರಿದ್ದಾಗ ಕಬ್ಬಿಣದ ರಾಡ್ ಖಾಸಗಿ ಅಂಗಕ್ಕೆ ಚುಚ್ಚಿ ಗಾಯವಾಗಿತ್ತು. ದೈಹಿಕವಾಗಿ ಗುಣವಾದರೂ ಮಾನಸಿಕ ನೋವು ಈಗಲೂ ಕಾಡುತ್ತಿದೆ ಎಂದಿದ್ದಾರೆ. ಗಾಡ್‌ಫಾದರ್ ಚಿತ್ರದಿಂದ ಖ್ಯಾತಿ ಗಳಿಸಿದ ಅವರು, ನಟನೆಯ ಜೊತೆಗೆ ರಿಯಲ್ ಎಸ್ಟೇಟ್‌ನಲ್ಲೂ ಹೂಡಿಕೆ ಮಾಡಿದ್ದಾರೆ.

ಹಾಲಿವುಡ್ ಸ್ಟಾರ್ ಗಾಡ್ ಫಾದರ್ (Hollywood star godfather) ಎಂದೇ ಪ್ರಸಿದ್ಧಿ ಪಡೆದಿರುವ ನಟ ಅಲ್ ಪಸಿನೋ (actor Al Pacino) ತಮ್ಮ 84ನೇ ವಯಸ್ಸಿನಲ್ಲೂ ನಟನೆ ಮುಂದುವರೆಸಿದ್ದಾರೆ. ಸ್ಕಾರ್ಫೇಸ್ ಹಾಗೂ ಗಾಡ್ ಫಾದರ್ ಚಿತ್ರದ ಮೂಲಕ ಪ್ರಸಿದ್ಧಿ ಪಡೆದಿರುವ ಅಲ್ ಪಸಿನೋ ಬರೀ ಹಾಲಿವುಡ್ ಗೆ ಮಾತ್ರವಲ್ಲ ವಿಶ್ವಕ್ಕೆ ಚಿರಪರಿಚಿತರು. ನಟನೆ ಮೂಲಕ ವಿಶ್ವದ ಜನರ ಪ್ರೀತಿಯನ್ನು ಗಳಿಸಿರುವ ಅಲ್ ಪಸಿನೋ ಬಾಲ್ಯದಲ್ಲಿ ನಡೆದ ಘಟನೆಯನ್ನು ಇನ್ನೂ ಮರೆತಿಲ್ಲ. ದೇಹಕ್ಕಾದ ಗಾಯ ಬೇಗ ಗುಣವಾದ್ರೂ ಮನಸ್ಸಿಗಾದ ಗಾಯ ಹೋಗಿಲ್ಲ ಎಂದು ಅವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಅಲ್ ಪಸಿನೋ, Sonny Boy ಪುಸ್ತಕದಲ್ಲಿ ತಮ್ಮ ಖಾಸಗಿ ಅಂಗಕ್ಕೆ ಗಾಯವಾದ ಆ ದಿನಗಳ ಬಗ್ಗೆ ಬರೆದಿದ್ದಾರೆ. ಆ ದಿನಗಳನ್ನು ಮರೆಯಲು ನನಗೆ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ ಪಸಿನೋ ಹಾಲಿವುಡ್ ಗೆ ಪ್ರವೇಶಿಸುವ ಮುನ್ನವೇ ದೊಡ್ಡ ಅಪಾಯಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಅವರ ಗಾಯ ಶಾಶ್ವತ ಗಾಯವಾಗಿ ಕಾಡಲಿಲ್ಲ. ಆದ್ರೆ ಆ ದಿನಗಳು ಮಾನಸಿಕ ನೋವಾಗಿ ಈಗ್ಲೂ ಅವರ ಮನದಲ್ಲಿ ಉಳಿದಿದೆ. ಹತ್ತು ವರ್ಷದವರಿದ್ದಾಗ ನಡೆದ ಅಪಾಯಕಾರಿ ಘಟನೆಯನ್ನು ಅಲ್ ಪಸಿನೋ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಮಳೆಗಾಲದ ಒಂದು ದಿನ, ತೆಳುವಾದ ಕಬ್ಬಿಣದ ರಾಡ್ ಮೇಲೆ ಡಾನ್ಸ್ ಮಾಡ್ತಾ ಹೋಗ್ತಿದ್ದ ವೇಳೆ ಕಾಲು ಜಾರಿತ್ತು. ಅಲ್ ಪಸಿನೋ ಬೀಳ್ತಾ ಇದ್ದಂತೆ ಆ ಕಬ್ಬಿಣದ ರಾಡ್ ಅವರ ಖಾಸಗಿ ಭಾಗಕ್ಕೆ ನೇರವಾಗಿ ಚುಚ್ಚಿತ್ತು.

ಪುಷ್ಪ 2 ಗಾಗಿ ಛಾವಾ ಬಿಡುಗಡೆ ಮುಂದೂಡಿಕೆ, ಅಲ್ಲು ಅರ್ಜುನ್ ಫೋನ್‌ಗೆ ಚಿತ್ರತಂಡ ಹೇಳಿದ್ದೇನು?

ಆ ದಿನಗಳನ್ನು ನೆನಪಿಸಿಕೊಂಡ್ರೆ ನನಗೆ ಈಗ್ಲೂ ಭಯವಾಗುತ್ತದೆ. ಅತ್ಯಂತ ಮುಜುಗರದ ದಿನ ಅದಾಗಿತ್ತು. ದೇವರಿಗೆ ನಾನು ಧನ್ಯವಾದ ಹೇಳ್ತೇನೆ, ಕೆಲವೇ ದಿನಗಳಲ್ಲಿ ಆ ಗಾಯ ಗುಣವಾಯ್ತು. ಶಾಶ್ವತ ಗಾಯವಾಗಿ ನನ್ನನ್ನು ಕಾಡಲಿಲ್ಲ ಎಂದು ಅಲ್ ಪಸಿನೋ ಬರೆದಿದ್ದಾರೆ. ಕೆಲ ದಿನ ನಾನು ಹಾಸಿಗೆ ಮೇಲೆ ಕಳೆಯಬೇಕಾಯ್ತು. ನನ್ನ ಅಜ್ಜಿ, ಅಮ್ಮ ಹಾಗೂ ಚಿಕ್ಕಮ್ಮ ನನ್ನ ಆರೈಕೆ ಮಾಡ್ತಿದ್ದರು ಎಂದು ಅಲ್ ಪಸಿನೋ ಹೇಳಿದ್ದಾರೆ. ಅಲ್ ಪಸಿನೋ ತಮ್ಮ ಪುಸ್ತಕದಲ್ಲಿ ತಮ್ಮ ಜೀವನದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. 

ಅಮೆರಿಕಾದ ನಟ ಹಾಗೂ ನಿರ್ದೇಶ ಅಲ್ ಪಸಿನೋ 1940, ಏಪ್ರಿಲ್ 25ರಂದು ಜನಿಸಿದರು. ಅಪ್ ಪಸಿನೋ ತಮ್ಮ ಅತ್ಯುತ್ತಮ ನಟನೆಯಿಂದಲೇ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಆರಂಭದಲ್ಲಿ ಹಾಲಿವುಡ್ ನಲ್ಲಿ ಜಾಗ ಪಡೆಯಲು ಅಲ್ ಪಸಿನೋ ಸಾಕಷ್ಟು ಕಷ್ಟಪಟ್ಟಿದ್ದರು. ಹೊತ್ತಿನ ಊಟ, ಮಲಗಲು ಜಾಗವಿಲ್ಲದೆ ತೊಂದರೆ ಅನುಭವಿಸಿದ್ದರು. 1972ರಲ್ಲಿ ಬಂದ ಗಾಡ್ ಫಾದರ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡ್ತು. ಅಲ್ ಪಸಿನೋ ಈಗಿನ ಸಂಪತ್ತು 120 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ನಟನೆ, ನಿರ್ಮಾಣದ ಜೊತೆ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆ ಅಲ್ ಪಸಿನೋ. ಜಾಹೀರಾತು,ಪ್ರಾಯೋಜಕತ್ವ ಮತ್ತು ವೈಸ್ ಓವರ್ ನಲ್ಲಿ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ.

ಹೋಳಿಗೆ ಊಟಕ್ಕೆ ಆಹ್ವಾನ ನೀಡಿದ ಡಾಲಿ ಧನಂಜಯ, ನಟ ರಾಕ್ಷಸನ ಮದುವೆಗೆ ಹೊರಟ

ದಿ ಗಾಡ್‌ಫಾದರ್ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರಿಗೆ 35,000 ಡಾಲರ್ ಸಂಭಾವನೆ ನೀಡಲಾಗಿತ್ತು. ದಿ ಗಾಡ್‌ಫಾದರ್: ಪಾರ್ಟ್ II, ಬಂದಾಗ ಅವರ ಸಂಭಾವನೆ 500,000 ಡಾಲರ್ ಗೆ ಬಂದಿತ್ತು. 2019ರಲ್ಲಿ ಅವರು ನಟಿಸಿದ ದಿ ಐರಿಶ್‌ಮ್ಯಾನ್ ಚಿತ್ರ 20 ಮಿಲಿಯನ್ ಡಾಲರ್ ಗಳಿಸಿದೆ. ಅಕಾಡೆಮಿ ಪ್ರಶಸ್ತಿ, ಎರಡು ಟೋನಿ ಪ್ರಶಸ್ತಿಗಳು ಮತ್ತು ಎರಡು ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.