Chhaava box office collection: ವಿಕಿ ಕೌಶಲ್ ಅಭಿನಯದ 'ಛಾವಾ' ಬಾಕ್ಸ್ ಆಫೀಸ್ನಲ್ಲಿ धಮಾಕ ಮಾಡ್ತಿದೆ! ಚಿತ್ರ ತನ್ನ ಬಿಡುಗಡೆಯ ಮೂರನೇ ದಿನ ಅಂದರೆ ಮೊದಲ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಕಂಡಿದೆ. ಜಾಗತಿಕವಾಗಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Chhaava box office collection: ವಿಕಿ ಕೌಶಲ್ (Vicky Kaushal) ಅಭಿನಯದ ಚಿತ್ರ ಛಾವಾ (Chhaava) ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ದಿನದಿಂದ ಪ್ರತಿದಿನ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಚಿತ್ರದ ಗಳಿಕೆ ಬಾಕ್ಸ್ ಆಫೀಸ್ ಅನ್ನು ಬೆಚ್ಚಿ ಬೀಳಿಸಿದೆ. ಈ ಮಧ್ಯೆ, ಚಿತ್ರದ ಮೊದಲ ವಾರಾಂತ್ಯದ ಅಂದರೆ ಮೂರನೇ ದಿನದ ಕಲೆಕ್ಷನ್ ಅಂಕಿಅಂಶಗಳು ಬಹಿರಂಗವಾಗಿವೆ. ಚಿತ್ರ ತನ್ನ ವೆಚ್ಚವನ್ನು ಮರಳಿ ಪಡೆಯುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ. sacnilk.com ವರದಿಯ ಪ್ರಕಾರ, ಚಿತ್ರವು ತನ್ನ ಮೂರನೇ ದಿನ 48.5 ಕೋಟಿ ಗಳಿಸಿದೆ. ಮೂರನೇ ದಿನ ಛಾವಾದ ಗಳಿಕೆಯಲ್ಲಿ ಶೇ.31.08 ರಷ್ಟು ಏರಿಕೆ ಕಂಡುಬಂದಿದೆ.
ಛಾವಾ ಬಾಕ್ಸ್ ಆಫೀಸ್ ಕಲೆಕ್ಷನ್
ವಿಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಫೆಬ್ರವರಿ 14 ರಂದು ಬಿಡುಗಡೆಯಾಯಿತು. ಬಿಡುಗಡೆಯಾದೊಂದಿಗೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಪಿರಿಯಡ್ ಡ್ರಾಮಾ ಚಿತ್ರ ಪ್ರತಿದಿನ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಚಿತ್ರವು ಮೊದಲ ದಿನ 31 ಕೋಟಿ ಗಳಿಸಿ ಭರ್ಜರಿ ಆರಂಭ ಪಡೆಯಿತು. ಎರಡನೇ ದಿನ ಛಾವಾ 37 ಕೋಟಿ ಗಳಿಸಿತು. ಮೂರನೇ ದಿನ ಚಿತ್ರ 48.5 ಕೋಟಿ ಗಳಿಸಿತು. ಇದರೊಂದಿಗೆ ಚಿತ್ರವು ಭಾರತೀಯ ಬಾಕ್ಸ್ ಆಫೀಸ್ನಲ್ಲಿ 116.5 ಕೋಟಿ ಗಳಿಸಿದೆ. ಜಾಗತಿಕ ಗಳಿಕೆಯ ಬಗ್ಗೆ ಹೇಳುವುದಾದರೆ, ಛಾವಾ ಮೂರು ದಿನಗಳಲ್ಲಿ ಸುಮಾರು 150 ಕೋಟಿ ಗಳಿಸಿದೆ.
ಇದನ್ನೂ ಓದಿ: Chhava Review: ಸಂಭಾಜಿ ಮಹಾರಾಜನ ಪಾತ್ರದಲ್ಲಿ ಅಬ್ಬರಿಸಿದ ವಿಕ್ಕಿ ಕೌಶಲ್, ಯೇಸುಬಾಯಿ ಪಾತ್ರಕ್ಕೆ ಜೀವ ತುಂಬಿದ ರಶ್ಮಿಕಾ!
ಚಿತ್ರ ಛಾವಾ ಬಗ್ಗೆ
ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಚಿತ್ರ ಛಾವಾ ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಚಿತ್ರದಲ್ಲಿ ಸಂಭಾಜಿ ಮಹಾರಾಜರ ಪಾತ್ರವನ್ನು ವಿಕಿ ಕೌಶಲ್ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಅವರು ನಿರ್ವಹಿಸಿದ ಸಂಭಾಜಿ ಮಹಾರಾಜರ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದಲ್ಲದೆ, ರಶ್ಮಿಕಾ ಮಂದಣ್ಣ ಸಂಭಾಜಿ ಮಹಾರಾಜರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಖನ್ನಾ ಕೂಡ ಇದ್ದಾರೆ, ಅವರು ಮೊಘಲ್ ಚಕ್ರವರ್ತಿ ಔರಂಗಜೇಬ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 130 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರದ ನಿರ್ಮಾಪಕ ದಿನೇಶ್ ವಿಜಾನ್.
