ಟಾಲಿವುಡ್‌ ಲವರ್‌ ಬಾಯ್‌ ವಿಜಯ್ ದೇವರಕೊಂಡ ಅಭಿನಯದ 'ವರ್ಲ್ಡ್‌ ಫೇಮಸ್ ಲವರ್' ಚಿತ್ರ ರಾಜ್ಯಾದ್ಯಂತ ತೆರೆ ಕಂಡಿದ್ದು, ನಿರೀಕ್ಷಿಸಿದಷ್ಟು ಜಯ ಸಾಧಿಸುವಲ್ಲಿ ವಿಫಲವಾಗಿದೆ. 

ನಿರ್ಮಾಪಕ ಕೆ.ಸ್‌ ರಾಮಾ ರಾವ್‌ ಚಿತ್ರದ ಮಕಾಡೆ ಮಲಗಿದೆ. ಬೇಜಾರಾಗೋದು ಸಹಜ ಬಿಡಿ. ಬಹು ನಿರೀಕ್ಷಿತ ಚಿತ್ರವೊಂದು ಈ ರೀತಿ ತೋಪು ಹಿಡಿದರೆ ಬೇಸರವಾಗಿಯೇ ಆಗುತ್ತೆ. ಅಷ್ಟೇ ಅಲ್ಲದೇ ವಿಜಯ್ ನಷ್ಟವನ್ನು ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದು, ವಿಜಯ್ ಭವಿಷ್ಯದ ದೃಷ್ಟಿಯಿಂದಲೂ ಇದು ದೊಡ್ಡ ಹೊಡೆತವೇ ಸರಿ. 'ವರ್ಲ್ಡ್‌ ಫೇಮಸ್‌ ಲವರ್‌' ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರವಾಗಿದ್ದು, ಅಭಿನಯಿಸಲು ವಿಜಯ್ 10 ಕೋಟಿ ರೂ.ಸಂಭಾವನೆ ಪಡೆದಿದ್ದರಂತೆ! ಚಿತ್ರ ಇದುವರೆಗೆ ಕೇವಲ 12 ಕೋಟಿ ರೂ, ಗಳಿಸಿದ್ದು, ನಿರ್ಮಾಪಕರು ವಿಜಯ್‌ ಅವರಿಗೆ ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದಾರೆನ್ನಲಾಗಿದೆ.

ಇದೇನ್ ಗತಿ!ಫ್ಲಾಪ್‌ ಆಗ್ತೀನಿ ಅಂತ ಹೆಸರು ಬದಲಾಯಿಸಿಕೊಂಡ್ರಾ ವಿಜಯ್ ದೇವರಕೊಂಡ?

ನಿರ್ಮಾಪಕ ರಾಮಾ ರಾವ್ ಸಂಭಾವನೆ ಹೊರತು ಪಡಿಸಿ, ವಿಜಯ್ ಅವರಿಗೆ 2 ಕೋಟಿ ವೆಚ್ಚದ 1 ಫ್ಲ್ಯಾಟ್ ಉಡುಗೊರೆಯನ್ನಾಗಿ ನೀಡಿದ್ದರು. ಇದೀಗ ಅದನ್ನೂ ಮರಳಿಸುವಂತೆ ಕೇಳುತ್ತಿದ್ದಾರಂತೆ. ಹಾಗಂತ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 

ಇದೇ ವರ್ಲ್ಡ್ ಫೇಮಸ್ ಲವರ್ ಚಿತ್ರಕ್ಕಾಗಿ ವಿಜಯ್ ತಮ್ಮ ಹೆಸರನ್ನು 'ದೇವರಕೊಂಡ ವಿಜಯ್ ಸಾಯಿ' ಎಂದು ಬದಲಾಯಿಸಿಕೊಂಡಿದ್ದರು. ಏಕೆ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂಬುವುದನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಸಾಲು ಸಾಲು ಚಿತ್ರಗಳು ತೋಪು ಹಿಡಿದ ಬೆನ್ನಲ್ಲೇ, ಈ ಹೆಸರು ಬದಲಾಯಿಸಿಕೊಂಡಿದ್ದರಿಂದ ಲಕ್ ಬದಲಾಗಬಹುದೆಂಬ ನಿರೀಕ್ಷೆಯಲ್ಲಿದ್ದರು ಎನಿಸುತ್ತೆ. ಆದರೆ, ಈ ಚಿತ್ರವೂ ಕೈ ಹಿಡಿದಂತೆ ಕಾಣಿಸುತ್ತಿಲ್ಲ. 

'World famous Lover' ಆಗಲು ಹೋಗಿ, ಪಬ್ಲಿಕ್ಕಲ್ಲಿ ಲುಂಗಿ ಉದುರಿಸಿಕೊಂಡ ವಿಜಯ್?

ಬಾಲಿವುಡ್‌ ಕರಣ್ ಜೋಹಾರ್‌ ನಿರ್ದೇಶನಕ 'ಫೈಟರ್‌' ಚಿತ್ರದಲ್ಲಿ ಅನನ್ಯಾ ಪಾಂಡೆಗೆ ಜೋಡಿಯಾಗಿ ಮಿಂಚಲಿದ್ದಾರೆ ವಿಜಯ್. ಈಗಾಗಲೇ ಹಂತ ಹಂತವಾಗಿ ಚಿತ್ರೀಕರಣ ಶುರುವಾಗಿದ್ದು ಬಿ-ಟೌನ್‌‌ನಲ್ಲಾದರೂ ವಿಜಯ್ ಲಕ್‌ ಬದಲಾಯಿಸುತ್ತಾ ಎಂದು ಕಾದು ನೋಡಬೇಕಿದೆ.