Asianet Suvarna News Asianet Suvarna News

ಸಿನಿಮಾ ಪಾತ್ರಕ್ಕಾಗಿ ಸ್ಮೋಕ್ ಮಾಡಲು ಕಲಿತು ಸಿಗರೇಟ್ ಅಡಿಕ್ಟ್ ಆಗ್ಬಿಟ್ಟಿದ್ರಂತೆ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ!

ವಿದ್ಯಾ ಬಾಲನ್ ತಾವು ಅಭಿನಯಿಸುವ ಸಿನಿಮಾಕ್ಕಾಗಿ ಯಾವಾಗಲೂ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರಂತೆ. ಹಾಗೆಯೇ ತಮ್ಮ ಡರ್ಟಿ ಪಿಕ್ಚರ್‌ ಸಿನಿಮಾಕ್ಕಾಗಿ ಸಿಗರೇಟ್ ಸೇದಿದ ಅನುಭವವನ್ನು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಟಾಕ್ ಶೋನಲ್ಲಿ ಇತ್ತೀಚೆಗೆ ನಡೆದ ಸಂವಾದದಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.

Vidya Balan Says She Was Addicted To Cigarettes Post The Dirty Picture Vin
Author
First Published Apr 26, 2024, 3:45 PM IST

ಬಾಲಿವುಡ್‌ನಲ್ಲಿ ಸದ್ಯ ಪ್ರತಿಭಾವಂತ ನಟಿಯರಲ್ಲೊಬ್ಬರು ವಿದ್ಯಾ ಬಾಲನ್. ಯಾವಾಗ್ಲೂ ತಮ್ಮ ಅಪ್ರತಿಮ ಸೌಂದರ್ಯ ಹಾಗೂ ಅಭಿನಯದಿಂದ ಅಭಿಮಾನಿಗಳ ಮನಗೆಲ್ಲುತ್ತಾರೆ. ತಮ್ಮ ಕ್ಲಾಸಿಕ್ ಸ್ಯಾರಿ ಲುಕ್‌ನಿಂದ ಹುಡುಗರ ಹಾರ್ಟ್‌ಬೀಟ್ ಏರುಪೇರಾಗುವಂತೆ ಮಾಡುತ್ತಾರೆ. ಅದರಲ್ಲೂ ವಿದ್ಯಾ ಬಾಲನ್ ಅಭಿನಯ ಎಲ್ಲರ ಮನಸೂರೆಗೊಳ್ಳುತ್ತದೆ. ಹೆಚ್ಚಾಗಿ ಹೀರೋಯಿನ್ ಓರಿಯೆಂಟೆಂಡ್ ಸಿನಿಮಾಗಳಲ್ಲಿ ನಟಿಸುವ ವಿದ್ಯಾ, ಪಾತ್ರ ಆದಷ್ಟೂ ರಿಯಲಿಸ್ಟಿಕ್ ಆಗಿರುತ್ತದೆ. ಪಾತ್ರವನ್ನೇ ಜೀವಿಸಿ ನಟಿಸುವ ನಟಿಯರಲ್ಲಿ ವಿದ್ಯಾ ಬಾಲನ್ ಸಹ ಒಬ್ಬರು.

ವಿದ್ಯಾ ಬಾಲನ್ ತಾವು ಅಭಿನಯಿಸುವ ಸಿನಿಮಾಕ್ಕಾಗಿ ಯಾವಾಗಲೂ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರಂತೆ. ಹಾಗೆಯೇ ತಮ್ಮ ಡರ್ಟಿ ಪಿಕ್ಚರ್‌ ಸಿನಿಮಾಕ್ಕಾಗಿ ಸಿಗರೇಟ್ ಸೇದಿದ ಅನುಭವವನ್ನು ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಟಾಕ್ ಶೋನಲ್ಲಿ ಇತ್ತೀಚೆಗೆ ನಡೆದ ಸಂವಾದದಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.

ಬಾಲಿವುಡ್​ ಸ್ಟಾರ್​ ನಟರ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ವಿದ್ಯಾ ಬಾಲನ್​

ಅನ್‌ಫಿಲ್ಟರ್ ವಿತ್ ಸಮ್ದೀಶ್ ಸಂದರ್ಶನದಲ್ಲಿ ವಿದ್ಯಾ ಬಾಲನ್, 'ದಿ ಡರ್ಟಿ ಪಿಕ್ಚರ್' ಚಲನಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೊದಲ ಬಾರಿಗೆ ಧೂಮಪಾನ ಮಾಡಲು ಹೇಗೆ ಪ್ರಯತ್ನಿಸಿದರು ಎಂಬುದನ್ನು ನೆನಪಿಸಿಕೊಂಡರು. ಚಿತ್ರದಲ್ಲಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಪಾತ್ರವನ್ನು ಮಾಡಿದ್ದಾರೆ. ಬೋಲ್ಡ್‌ ಆಗಿರುವ ಈ ಪಾತ್ರಕದ ಆನ್-ಸ್ಕ್ರೀನ್ ಅಗತ್ಯಗಳನ್ನು ಪೂರೈಸಲು ವಿದ್ಯಾ ಬಾಲನ್ ಸ್ಮೋಕ್ ಮಾಡಬೇಕಿತ್ತು. ಇದನ್ನು ರಿಯಲಿಸ್ಟಿಕ್ ಆಗಿಸಲು ವಿದ್ಯಾ ಬಾಲನ್ ಧೂಮಪಾನ ಮಾಡಿದ್ದಾಗಿ ತಿಳಿಸಿದರು.

'ಚಿತ್ರೀಕರಣಕ್ಕೂ ಮುನ್ನ ನಾನು ಧೂಮಪಾನ ಮಾಡಿದ್ದೆ. ನನಗೆ ಧೂಮಪಾನ ಮಾಡುವುದು ಹೇಗೆಂದು ತಿಳಿದಿತ್ತು. ಆದರೆ ಸಿನಿಮಾ ಮುಗಿದ ಮೇಲೂ ಈ ಅಡಿಕ್ಷನ್ ಮುಂದುವರಿಯಿತು' ಎಂದು ವಿದ್ಯಾ ಬಾಲನ್ ಹೇಳಿದ್ದಾರೆ. ಸ್ಮೋಕಿಂಗ್ ಮಾಡಲು ಇಷ್ಟಪಡುವ ಜನರಲ್ಲಿ ನಾನೂ ಒಬ್ಬಳು ಎಂದು ವಿದ್ಯಾ ಬಾಲನ್ ಬಹಿರಂಗಪಡಿಸಿದ್ದಾರೆ.

ಹಾರ್ಮೋನ್ ಬದಲಾವಣೆಯಿಂದ ಹೆಣ್ಣುತನ ಎಂಜಾಯ್ ಮಾಡಲಿಲ್ಲ, ಗೇಲಿ ಮಾಡ್ಬೇಡಿ; ವಿದ್ಯಾ ಬಾಲನ್ ಹೇಳಿಕೆ ವೈರಲ್

'ಚಟದಿಂದ ದಿನಕ್ಕೆ ಎರಡು-ಮೂರು ಸಿಗರೇಟ್ ಹೊಡೆಯುತ್ತೇನೆ. ಆದರೆ ಚೈನ್ ಸ್ಮೋಕರ್ ಅಲ್ಲ, ಸಿಗರೇಟ್ ಉಂಟುಮಾಡುವ ಹಾನಿಯನ್ನು ತಿಳಿದಿರುವ ಕಾರಣ ಆದಷ್ಟು ಕಡಿಮೆ ಮಾಡಲು ಯತ್ನಿಸುತ್ತೇನೆ.  ತನ್ನ ಕಾಲೇಜು ದಿನಗಳಲ್ಲಿ, ಧೂಮಪಾನದ ವಾಸನೆಯ ಮೇಲಿನ ಪ್ರೀತಿಯಿಂದಾಗಿ ಉದ್ದೇಶಪೂರ್ವಕವಾಗಿ ಧೂಮಪಾನ ಮಾಡುವವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ. ಹಾಗೆಯೇ ಡರ್ಟಿ ಪಿಕ್ಚರ್‌ ಚಿತ್ರೀಕರಣದ ಸಮಯದಲ್ಲೂ ಧೂಮಪಾನದ ಚಟಕ್ಕೆ ಒಳಗಾಗಿದ್ದೆ. ದಿನಕ್ಕೆ 2-3 ಸಿಗರೇಟ್ ಸುಲಭವಾಗಿ ಮುಗಿಸುತ್ತಿದ್ದೆ' ಎಂದು ವಿದ್ಯಾ ಬಾಲನ್ ಬಹಿರಂಗಪಡಿಸಿದ್ದಾರೆ.

'ನಾನು ಧೂಮಪಾನವನ್ನು ಆನಂದಿಸುತ್ತೇನೆ. ಸಿಗರೇಟಿನಿಂದ ಯಾವ ಹಾನಿಯೂ ಇಲ್ಲ ಎಂದು ಹೇಳಿದ್ದರೆ ನಾನು ನಿಜವಾಗಿಯೂ ಧೂಮಪಾನಿಯಾಗುತ್ತಿದ್ದೆ' ಎಂದು ವಿದ್ಯಾ ಬಾಲನ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios