ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜೀವನಗರದ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇನ್ನೋರ್ವ ವ್ಯಕ್ತಿ ಮತ ಚಲಾಯಿಸಿರುವ ಆರೋಪ ವಿಚಾರಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ ನೀಡಿದ್ದಾರೆ.

ಉಡುಪಿ (ಏ.26): ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜೀವನಗರದ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇನ್ನೋರ್ವ ವ್ಯಕ್ತಿ ಮತ ಚಲಾಯಿಸಿರುವ ಆರೋಪ ವಿಚಾರಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸ್ಪಷ್ಟನೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ರಾಜೀವನಗರದಲ್ಲಿ ಯಾವುದೇ ನಕಲಿ ಮತದಾನ ನಡೆದಿಲ್ಲ. ಮಣಿಪಾಲದ ಅರ್ಬಿ ನಿವಾಸಿ ಕೃಷ್ಣ ನಾಯ್ಕ್ ಹೆಸರಲ್ಲಿ ನಡೆದಿದ್ದ ಮತದಾನ. ಒಂದೇ ಮತಗಟ್ಟೆಯಲ್ಲಿ ಇಬ್ಬರು ಮತದಾರರ ಹೆಸರು ಒಂದೇ ರೀತಿ ಇರುವುದರಿಂದ ಪೊಲೀಸರು, ಮತಗಟ್ಟೆ ಅಧಿಕಾರಿಗಳು, ಏಜಂಟರಲ್ಲಿ ಗೊಂದಲಕ್ಕೆ ಕಾರಣವಾಗಿ ಈ ಘಟನೆ ನಡೆದಿದೆ. ವೋಟರ್ ಸ್ಲಿಪ್ ಅದಲುಬದಲಾಗಿರುವ ಕಾರಣ ಸಿಬ್ಬಂದಿಗೆ ಗೊಂದಲವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಕೃಷ್ಣ ನಾಯ್ಕ್ ಎನ್ನುವ ಮತ ಚಲಾವಣೆ ಮಾಡಿರುವ ವ್ಯಕ್ತಿಯನ್ನು ಚುನಾವಣಾ ಸಿಬ್ಬಂದಿ ಹುಡುಕುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರಿನಲ್ಲಿ ಯಾರಿಗೆ ಒಲಿಯುತ್ತೆ ಗೆಲುವಿನ ಹಾರ? ಸಜ್ಜನ ರಾಜಕಾರಣಿಗಳ ಹೋರಾಟಕ್ಕೆ ಸಾಕ್ಷಿ ಈ ಕ್ಷೇತ್ರ!

ಘಟನೆ ಹಿನ್ನೆಲೆ: ಅರ್ಬಿಯ ಕೃಷ್ಣ ನಾಯ್ಕ್ ಎಂಬ ವ್ಯಕ್ತಿ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರನಾಗಿದ್ದಾನೆ. ಇಂದು ಮತ ಚಲಾಯಿಸಲು ಬಡಗಬೆಟ್ಟು ಗ್ರಾಪಂನ ರಾಜೀವ್ ನಗರದ ಪ್ರೌಢಶಾಲೆಗೆ ಬಂದಿದ್ದಾನೆ. ಆದರೆ ಈ ವೇಳೆ ತನ್ನ ಹೆಸರಲ್ಲಿ ಈಗಾಗಲೇ ಮತದಾನ ಆಗಿದೆ ಎಂದು ಚುನಾವಣೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಶಾಕ್ ಆಗಿದೆ. ನಾನು ಮತದಾನ ಮಾಡಿಲ್ಲ. ಈಗ್ತಾನೆ ಬಂದಿದ್ದಾನೆ. ನನ್ನ ಹೆಸರಲ್ಲಿ ಅದ್ಹೇಗೆ ಮತದಾನ ಆಯ್ತು ಎಂದು ಪ್ರಶ್ನಿಸಿದ್ದಾನೆ. ಆ ಬಳಿಕ ತನ್ನ ಹೆಸರಲ್ಲಿ ಇನ್ನೊಬ್ಬರು ಮತ ಚಲಾಯಿಸಿರುವುದು ಪತ್ತೆಯಾಗಿದೆ. ಈ ಘಟನೆ ಹಿನ್ನೆಲೆ ಎರಡೂ ಪಕ್ಷಗಳ ಮತಗಟ್ಟೆ ಏಜೆಂಟ್‌ರಿಂದ ವಿರೋಧ ವ್ಯಕ್ತವಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ನಕಲಿ ಮತದಾನ ಮಾಡಿದ ವ್ಯಕ್ತಿಯನ್ನ ಪತ್ತೆಹಚ್ಚುವಂತೆ ಒತ್ತಾಯಿಸಿದ್ದರು