'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಕಿಸ್ಸಿಂಗ್ ಬಾಯ್ ಎಂದೇ ಮತ್ತೊಂದು ಅಡ್ಡ ಹೆಸರು ಪಡೆದುಕೊಂಡರು. ಯಾವ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡರೂ ಅದರಲ್ಲಿ ಮಿಸ್‌ ಇಲ್ಲದೆ ಕಿಸ್ಸಿಂಗ್ ಸೀನ್‌ ಇರುತ್ತಿತ್ತು.

ಇನ್ನೆರಡು ವರ್ಷ ರಶ್ಮಿಕಾ ಬೇಡ; ದೇವರಕೊಂಡ ನಿರ್ಧಾರ! ರಶ್ಮಿಕಾ ಉತ್ತರ ಶಾಕಿಂಗ್

ಇನ್ನು ರಶ್ಮಿಕಾ ಮಂದಣ್ಣ ಜೊತೆ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ನಟಿಸಿದ ಕಾರಣ ಅವರ ನಡುವೆ ಪ್ರೀತಿ ಹುಟ್ಟಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಸದ್ಯಕ್ಕೆ 'ವರ್ಲ್ಡ್‌ ಫೇಮಸ್‌ ಲವರ್' ಹಾಗೂ 'ತಲೈವಿ' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚಿಗೆ 'ವರ್ಲ್ಡ್‌ ಫೇಮಸ್‌ ಲವರ್' ಚಿತ್ರ ಟೀಸರ್ ಬಿಡುಗಡೆಯಾಗಿದ್ದು ಟೈಟಲ್‌ ಕಾರ್ಡ್‌ನಲ್ಲಿ ವಿಜಯ್ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. 

ಬಾಲಿವುಡ್‌ ಸಿನಿಮಾಗೆ ವಿಜಯ್ ದೇವರಕೊಂಡ ಸಂಭಾವನೆ ಕೇಳಿದ್ರೆ ಅಬ್ಬಬ್ಬಾ..!

ಎಲ್ಲಾ ಚಿತ್ರಗಳಲ್ಲೂ ವಿಜಯ್ ದೇವರಕೊಂಡ ಎಂದು ಇರುತ್ತಿತ್ತು ಆದರೀಗ 'ದೇವರಕೊಂಡ ವಿಜಯ್ ಸಾಯಿ' ಎಂದು ಬದಲಾಯಿಸಿಕೊಂಡಿದ್ದಾರೆ.  ಇದಕ್ಕೆ ವಿಜಯ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ಅವರ ಹಿಂದಿನ ಸಿನಿಮಾಗಳು ಕಂಡ ಸೋಲು ಇದಕ್ಕೆ ಕಾರಣ ಎನ್ನಲಾಗಿದೆ. ವಿಜಯ್‌ಗೆ ಹಿಟ್‌ ತಂದುಕೊಟ್ಟಂತ ಸಿನಿಮಾ ಅಂದ್ರೆ ಅರ್ಜುನ್ ರೆಡ್ಡಿ, ಈ ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಅವರ ಹೆಸರು ದೇವರಕೊಂಡ ವಿಜಯ್ ಸಾಯಿ ಎಂದಿದೆ. ನಂತರದ ಚಿತ್ರಗಳಲ್ಲಿ ವಿಜಯ ದೇವರಕೊಂಡ ಎಂದು ಹೆಸರು ಬಳಸಿ, ಯಾವ ಯಶಸ್ಸೂ ಸಿಗದ ಕಾರಣ ಈ ಚಿತ್ರದಲ್ಲೂ ದೇವರಕೊಂಡ ವಿಜಯ್ ಸಾಯಿ ಎಂದು ಬಳಸಲು ನಿರ್ದೇಶಕ ಕ್ರಾಂತಿ ಮಾಧನ್ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.