ಹೈದರಾಬಾದ್ ಆಸ್ಪತ್ರೆಗೆ ದಾಖಲಾದ ತೆಲುಗು ನಟ ಶ್ರೀವಿಷ್ಣು, ಸ್ಥಿತಿ ಗಂಭೀರವಿಲ್ಲ ಎಂದು ತಿಳಿಸಿದ ಕುಟುಂಬಸ್ಥರು....
2009ರಲ್ಲಿ ಬಾನಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಶ್ರೀವಿಷ್ಣು ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ಕೊಟ್ಟಿರುವುದು ಸೋಲೋ ಸಿನಿಮಾ. ಒಟ್ಟು 26 ಸಿನಿಮಾಗಳಲ್ಲಿ ನಟಿಸಿರುವ ವಿಷ್ಣು ಈ ವರ್ಷ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸ ಒತ್ತಡವೋ ಅಥವಾ ಹೆಚ್ಚಿಗೆ ಪ್ರಯಾಣ ಮಾಡುತ್ತಿರುವ ಕಾರಣವೋ ಏನೋ ಗೊತ್ತಿಲ್ಲ ಶ್ರೀವಿಷ್ಣು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟನ ಬಗ್ಗೆ ಪೋಷಕರು ಅಪ್ಡೇಟ್ ಕೊಟ್ಟಿದ್ದಾರೆ.
ಕೆಲವು ದಿನಗಳಿಂದ ಶ್ರೀವಿಷ್ಣು ಜ್ವರದಿಂದ ಬಳಲುತ್ತಿದ್ದರು. ಕಾಮನ್ ಆಗಿ ಬರುವ ಕೋಲ್ಡ್ ಎಂದುಕೊಂಡು ನಿರ್ಲಕ್ಷ್ಯ ಮಾಡಿದ್ದಾರೆ. ಜ್ವರ ಕಡಿಮೆ ಆಗದ ಕಾರಣ ಮನೆ ಬಳಿ ಇರುವ ವೈದ್ಯರನ್ನು ಸಂಪರ್ಕಮಾಡಿದ್ದಾರೆ. ಜ್ವರ ತೀವ್ರವಾದ ಕಾರಣ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀವಿಷ್ಣು ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗ್ಯೂ ಆಗಿದೆ ಎಂದು ಖಾತ್ರಿಯಾಗಿದ್ದು ತಕ್ಷಣವೇ ಸಮೀಪ ಆಸ್ಪತ್ರೆಯಿಂದ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀವಿಷ್ಣು ಪ್ಲೇಟ್‌ಲೇಟ್ಸ್ ಸಂಖ್ಯೆ ಕಡಿಯಾಗಿದ ಕಾರಣ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಒಂದೆರಡು ದಿನಗಳ ಕಾಲ ವಿಷ್ಣುನ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಪ್ರಾಣಕ್ಕೆ ಅಪಾಯವಿಲ್ಲ ಆದರೆ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿಲ್ಲ ಎಂದು ಶ್ರೀವಿಷ್ಣು ಕುಟುಂಬಸ್ಥರು ಖಾಸಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ ಡೆಂಗ್ಯೂ ದುಪ್ಪಟ್ಟು!
ಕೆಲವು ತಿಂಗಳುಗಳ ಹಿಂದೆ ಅಲ್ಲೂರಿ ಸೀತಾರಾಮರಾಜು ಜಯಂತಿಯಂದು ಅಲ್ಲೂರಿ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿತ್ತು. ನಾದಿ ನೀದಿ ಒಕೇ ಕತ, ವಸಂತ ರಾಯಲು, ಬ್ರೋಚೆವಾರೆವರುರಾ, ತಿಪ್ಪರಾ ಮೀಸ, ರಾಜರಾಜ ಚೋರ, ಅರ್ಜುನ್ ಪಾಲ್ಗುಣ, ವುನ್ನೇದಿ ಚಕ್ಕಟೆ ಜೀವತಂ, ಮೆಂಟಲ್ ಮದಿಲೊ, ಭಲಾ ಥಾಂಡನಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಶ್ರೀವಿಷ್ಣು.
ವಿಷ್ಣು ಮೂಲತಃ ಅಂತರವೇದಿಪಾಲೆಂನವರು. ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿರುವ ವಿಷ್ಣು ವೆಬ್ ಡಿಸೈನರ್ ಆಗಿ ಕೆಲವು ವರ್ಷಗಳ ಕಾಲ ಹೈದರಾಬಾದ್‌ನಲ್ಲಿ ಕೆಲಸ ಮಾಡಿದ್ದಾರೆ. ಡಿಸೈನರ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಕಾಲೇಜ್ ದಿನಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ವಿಷ್ಣು ಅಂಡರ್ 19 ಆಂಧ್ರ ಕ್ರಿಕೆಟ್ ಟೀಮ್‌ನಲ್ಲಿದ್ದರು.
ಶ್ರೀವಿಷ್ಣು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ವಿಶೇಷ ಪೂಜೆಗಳನ್ನು ನಡೆಸುತ್ತಿದ್ದಾರೆ.
