ಡಿಫರೆಂಟ್ ಆಗಿರುವ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ ಸಂಪೂರ್ಣೇಶ್ ಬಾಬು. ಟ್ರೋಲ್ ಮಾಡೋಕೆ ಕಾರಣನೇ ಬೇಡ.
ತೆಲುಗು ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಛಾಪು ಮೂಡಿಸಿರುವ ಬರ್ನಿಂಗ್ ಸ್ಟಾರ್ ಸಂಪೂರ್ಣೇಶ್ ಬಾಬು ತಮ್ಮ ಮುಂದಿನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಏನೇ ಮಾಡಿದರೂ ಡಿಫರೆಂಟ್ ಬಯಸುವ ಸಂಪೂರ್ಣೇಶ್ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದೆ.
ಸಮಾಜ ಮತ್ತು ರಾಜಕೀಯವನ್ನು ವ್ಯಂಗ್ಯ ಮಾಡುವ ಸಿನಿಮಾಗಳನ್ನಷ್ಟೇ ಸಂಪೂರ್ಣೇಶ್ ಬಾಬು ಮಾಡುವುದು. ಇದೇ ಕಾರಣಕ್ಕೆ 'ಕಾಲಿಫ್ಲವರ್' ಹೆಸರಿನ ಸಿನಿಮಾವನ್ನು ಘೋಷಿಸಿದ್ದಾರೆ. ಪೋಸ್ಟರ್‌ನಲ್ಲಿ ಬಾಬು ಅಸೆಂಬ್ಲಿ ಮುಂದೆ ನಗ್ನವಾಗಿ ನಿಂತು ಕಾಲಿಫ್ಲವರ್ ಹಿಡಿದಿರುವುದಕ್ಕೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನಮ್ಮ ರಾಜಕೀಯ ಸ್ಥಿತಿ ಬಗ್ಗೆ ಮಾತನಾಡುವುದಕ್ಕೆ ವ್ಯಂಗ್ಯ ಮಾಡುವುದಕ್ಕೆ ಸಂಪೂರ್ಣೇಶ್ ಬಾಬುಗೆ ಮಾತ್ರ ಹಕ್ಕಿರುವುದು ಎಂದು ಕಾಲೆಳೆಯುತ್ತಿದ್ದಾರೆ.
ಸಂಪೂರ್ಣೇಶ್ ಬಾಬುಗೆ ಇಷ್ಟವಾದ ಕನ್ನಡ 'ರಿಯಲ್ ಸ್ಟಾರ್'!
'ಕಾಲಿಫ್ಲವರ್' ಶೀರ್ಷಿಕೆಗೆ 'ಶೀಲೊ ರಕ್ಷತಿ ರಕ್ಷಿತಃ' ಎಂಬ ಟ್ಯಾಗ್‌ಲೈನ್ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ 'ಪ್ಯಾರೆಡಿ' ಸಿನಿಮಾ ಕೂಡ ಸಖತ್ ಟ್ರೋಲ್ ಅಗಿತ್ತು. ಚಿತ್ರದಲ್ಲಿ ಇತರರನ್ನು ಗೇಲಿ ಮಾಡುವ ಜೊತೆಗೆ ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುವುದು ಸಿನಿಮಾ ಹಿಟ್ ಆಗುವುದಕ್ಕೆ ದೊಡ್ಡ ಕಾರಣ ಎನ್ನಲಾಗಿದೆ.
