Asianet Suvarna News Asianet Suvarna News

ಸಂಪೂರ್ಣೇಶ್ ಬಾಬುಗೆ ಇಷ್ಟವಾದ ಕನ್ನಡ 'ರಿಯಲ್ ಸ್ಟಾರ್'!

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಶುಭಕೋರಿದ ಸಂಪೂರ್ಣೇಶ್ ಬಾಬು. ಇನ್ಸಫಿಯೇಶನ್ ಆಗಲು ಇದೇ ಕಾರಣ...

Telugu sampoornesh babu share picture with Upendra says my inspiration vcs
Author
Bangalore, First Published Sep 20, 2020, 2:05 PM IST

ತೆಲುಗು ಚಿತ್ರರಂಗದಲ್ಲಿ ತನ್ನದೇ ವಿಭಿನ್ನ ಶೈಲಿಯ ಮೂಲಕ ನಾಯಕ ನಟನಾಗಿ ಗುರುತಿಸಿಕೊಂಡಿರುವ ಸಂಪೂರ್ಣೇಶ್ ಬಾಬು ಕೆಲದ ದಿನಗಳ ಹಿಂದೆ ಕನ್ನಡದ ನಟ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೆ ಸಂಪೂರ್ಣೇಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಸಾಲುಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

Telugu sampoornesh babu share picture with Upendra says my inspiration vcs

ಸಂಪೂರ್ಣೇಶ್‌ ಪೋಸ್ಟ್‌:

'ನಾನು ಕಥನಾಯಕನಾಗಲು ಸ್ಫೂರ್ತಿಯಾದ ನಟ. ಹಾಗೂ ನನಗೆ ತುಂಬ ಇಷ್ಟವಾದ ನಾಯಕರಾದ ಉಪೇಂದ್ರ ಅವರಿಗೆ ನನ್ನ ಹೃದಯಪೂರ್ವಕ ಜನ್ಮದಿನ ಶುಭಾಶಯಗಳು' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

 

ಸ್ಯಾಂಡಲ್‌ವುಡ್‌ 'ಬುದ್ಧಿವಂತ' ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ನೆರೆ ರಾಜ್ಯದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಒಬ್ಬ ನಟನಿಗೆ ಪರಭಾಷಾ ಚಿತ್ರದ ನಟ ವಿಶ್ ಮಾಡುವುದು ದೊಡ್ಡ ವಿಚಾರವೇ ಹೌದು ಅದರಲ್ಲೂ  ಕನ್ನಡದಲ್ಲಿಯೇ ಬರೆದು ಶುಭ ಹಾರೈಸಿರುವುದು ಇನ್ನು ವಿಶೇಷವಾಗಿದೆ. 

ಪ್ರವಾಹ ಪೀಡಿತರಿಗೆ 2 ಲಕ್ಷ ರೂ ನೆರವು ಕೊಟ್ಟ ‘ಬರ್ನಿಂಗ್ ಸ್ಟಾರ್’! ಯಾರಿವರು?

'Hrudaya Kaleyam'ಚಿತ್ರದ ಮೂಲಕ ನಟನಾಗಿ ಎಂಟ್ರಿಕೊಟ್ಟ ಸಂಪೂರ್ಣೇಶ್‌ ಬಾಬು ಹಿಟ್ ಸಿನಿಮಾದ ಕೆಲವೊಂದು ಸನ್ನಿವೇಶಗಳನ್ನು ತಮ್ಮ ವಿಭಿನ್ನ, ವ್ಯಂಗ್ಯ ರೀತಿಯಲ್ಲಿ ಅನುಕರಣೆ ಮಾಡಿ ಪ್ರೇಕ್ಷಕರ ಮುಂದೆ ಪ್ರದರ್ಶಿಸುತ್ತಾರೆ.  ಉತ್ತಮ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಸಂಪೂರ್ಣೇಶ್‌ ವಿಡಿಯೋಗಳನ್ನು ನೀವು ಹೆಚ್ಚಾಗಿ ಟ್ರೋಲ್ ಪೇಜ್‌ಗಳಲ್ಲೂ ನೋಡಬಹುದು.

Follow Us:
Download App:
  • android
  • ios