ಟಾಲಿವುಡ್ ಸುಂದರಿ ಸಮಂತಾ ಅಭಿನಯದ 'ಜಾನು' ಚಿತ್ರ ಕಾಲಿವುಡ್‌ನ '99' ಚಿತ್ರದ ರಿಮೇಕ್‌. ಚಿತ್ರದಲ್ಲಿ ಸಮಂತಾ ಹಾಗೂ ಶಿವಾರ್ನಂದ್‌ ಕಾಂಬಿನೇಷನ್‌ ಪ್ರೇಕ್ಷಕರ ಗಮನ ಸೆಳೆದಿದೆ.

ಫೆ 7ರಂದು ಎಲ್ಲೆಡೆ ತೆರೆ ಕಂಡ ಜಾನು ಎಲ್ಲ ಚಿತ್ರಮಂದಿರಗಳಲ್ಲಿಯೂ ಹೌಸ್‌‌ಫುಲ್ ಆಗಿವೆ. ಸಮಂತಾ ಫ್ಯಾನ್‌ ಕ್ಲಬ್‌ ಸೇರುವ ಅಭಿಮಾನಿಗಳು ಈಗಾಗಲೇ ಚಿತ್ರವನ್ನು 2-3 ಬಾರಿ ವೀಕ್ಷಿಸಿದ್ದಾರೆ, ಎಂದೇ ಹೇಳಲಾಗುತ್ತಿದೆ. 

ಆಕೆ ಸಮಂತಾ ಅಲ್ಲ 'ಜಾನು'; ಅಭಿಮಾನಿಗಳಿಂದ ನೆಗೆಟಿವ್‌ ಕಾಮೆಂಟ್ಸ್‌!

ಹೀಗೆ ಹೈದರಾಬಾದ್‌ನ ಗೋಕುಲ್‌ ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ 'ಜಾನು' ಚಿತ್ರ ವೀಕ್ಷಿಸುತ್ತಿದ್ದನು. ಪ್ರದರ್ಶನ ಮುಗಿದ ನಂತರವೂ ಹೊರ ಬಾರದ ಕಾರಣ ಸಿಬ್ಬಂದಿ ಹತ್ತಿರ ಹೋದಾಗ ಆ ವ್ಯಕ್ತಿ ಆಗಲೇ ಕೊನೆಯುಸಿರೆಳೆದಿದ್ದರು. ಕೂಡಲೇ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನೂ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವ್ಯಕ್ತಿಯನ್ನು ಹತ್ತಿರದ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೃದಯಾಘಾತವೇ ಈ ವ್ಯಕ್ತಿಯ ಸಾವಿಗೆ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮದುವೆಯಾಗಿ ತಪ್ಪು ಮಾಡಿಬಿಟ್ರಾ ಸಮಂತಾ?

ವ್ಯಕ್ತಿಯ ಜೇಬಿನಲ್ಲಿ ಯಾವುದೇ ರೀತಿಯ ಗುರುತು ಚೀಟಿ, ವಿಳಾಸ ಸಿಗದ ಕಾರಣ, ಮೃತಪಟ್ಟವರ ಬಗ್ಗೆ ವಿವರ ಲಭ್ಯವಾಗುವುದು ತಡವಾಗಿದೆ.