ದಕ್ಷಿಣ ಚಿತ್ರರಂಗದ ಹೆಸರಾಂತ ನಟಿ ಅಂದ್ರೆ ಸಮಂತಾ. ಸ್ಟಾರ್‌ ನಟರಿಗೂ ಮೀರಿಸುವಂಥ ಅಭಿಮಾನಿಗಳು ಈಕೆಗಿದ್ದಾರೆ. ಪ್ರತಿಯೊಂದೂ ಚಿತ್ರದಲ್ಲೂ ಎಕ್ಸ್‌ಪರಿಮೆಂಟ್ ಮಾಡುವ ಸಮಂತಾ 'ಜಾನು' ಚಿತ್ರದಲ್ಲಿ ವಿಫಲರಾದ್ರಾ? 

ಬರಿಗಾಲಲ್ಲಿ ತಿರುಪತಿ ಬೆಟ್ಟ ಹತ್ತಿದ ಸಮಂತಾ!

ವಿಜಯ್ ಸೇತುಪತಿ ಹಾಗೂ ತ್ರಿಷಾ ಅಭಿನಯದ '96' ಚಿತ್ರ ಸೂಪರ್ ಹಿಟ್‌ ಆಗಿ, ಭಾರತದ ಚಿತ್ರರಂಗದಲ್ಲೇ ಹೊಸ ಸಂಚಲನ ಹುಟ್ಟಿಸಿತ್ತು. ಚಿತ್ರಕಥೆ ಹಿಂದೆ ಬಿದ್ದ ನಿರ್ದೇಶಕರು ಸ್ಯಾಂಡಲ್‌ವುಡ್‌ನಲ್ಲಿ 'ಗೀತಾ', ಟಾಲಿವುಡ್‌ನಲ್ಲಿ 'ಜಾನು' ಚಿತ್ರವಾಗಿ ರಿಮೇಕ್‌ ಮಾಡಿದ್ದಾರೆ.

ಸಮಂತಾನೇ ಬೇಕು ಎಂದ ನಿರ್ದೇಶಕನಿಗೆ ಖಡಕ್ ವಾರ್ನಿಂಗ್ ಕೊಟ್ಟ ನಾಗಚೈತನ್ಯ

ಜನವರಿ 9ರಂದು ಸಮಂತಾ ಅಭಿನಯದ 'ಜಾನು' ಟೀಸರ್‌ ರಿಲೀಸ್‌ ಮಾಡಲಾಗಿತ್ತು. ಯೂಟ್ಯೂಬ್‌ನಲ್ಲಿ ನೆಗೆಟಿವ್‌ ಕಾಮೆಂಟ್‌ಗಳು ಹೆಚ್ಚಾಗಿ ಬರುತ್ತಿವೆ. 3.5 ಮಿಲಿಯನ್ ವೀಕ್ಷಣೆ ಪಡೆದಿರುವ ಟೀಸರ್‌ಗೆ ಅಭಿಮಾನಿಗಳು 'ನಮಗೆ ವಿಜಯ್ ಸೇತುಪತಿ ಹಾಗೂ ತ್ರಿಷಾನೇ ಬೇಕು ನೀವು ಬೇಡ..' ಎಂದೇ ಕಮೆಂಟ್ ಮಾಡುತ್ತಿದ್ದಾರೆ. ಚಿತ್ರದ ಪ್ರತಿಯೊಂದು ತುಣುಕನ್ನೂ '96'ಕ್ಕೆ ಹೋಲಿಸುತ್ತಿದ್ದಾರೆ.

ರಾಮ್ ಹಾಗೂ ಜಾನೂ ಪಾತ್ರ ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿದೆ. ಸಮಂತಾ ಹಾಗೂ ಶರ್ವಾನಂದ್ ನಟನೆ ಚೆನ್ನಾಗಿದ್ದರೂ ಅಭಿಮಾನಿಗಳು ಅವರೇ ಬೇಕು ಎಂದು ಹೇಳುತ್ತಿದ್ದಾರೆ.