Asianet Suvarna News Asianet Suvarna News

ಕನ್ನಡ ಚಿತ್ರರಂಗದ ಹೆಮ್ಮೆ ಯಶ್: ಫ್ಯಾನ್ಸ್ ಪೂಜಾ ಹೆಗ್ಡೆ ಉತ್ತರ

ಟ್ಟಿಟರ್‌ನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ಪೂಜಾ ಹೆಗ್ಡೆ. ಯಶಸ್ಸು ಎಲ್ಲಿಂದ ಬರುತ್ತಿದೆಯೋ ಗೊತ್ತಿಲ್ಲ ಎಂದ ಚೆಲುವೆ...
 

Tollywood Pooja Hegde interacts with Twitter followers says actor Yash is the best vcs
Author
Bangalore, First Published Oct 21, 2021, 2:38 PM IST
  • Facebook
  • Twitter
  • Whatsapp

ತೆಲುಗು (Tollywood) ಮತ್ತು ತಮಿಳು (Kollywood) ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಮಂಗಳೂರು ಚೆಲುವೆ ಪೂಜಾ ಹೆಗ್ಡೆ (Pooja Hegde) ಕೆಲವು ದಿನಗಳ ಹಿಂದೆ ತಮ್ಮ ಟ್ಟಿಟರ್‌ ಖಾತೆಯಿಂದ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಅವರು ಕೇಳಿರುವ ನೂರಾರು ಪ್ರಶ್ನೆಗಳಲ್ಲಿ ಕೆಲವು ಪ್ರಶ್ನೆಗಳಿಗೆ ಮನಬಿಚ್ಚಿ ಉತ್ತರ ನೀಡಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್‌ ಫೇಮಸ್‌ ಡೈಲಾಗ್ ಹೊಡೆದ ಕ್ರಿಕೆಟಿಗ ಇರ್ಫಾನ್ ಪಠಾಣ್‌..!

ಪೂಜಾ ಹೆಗ್ಡೆ ಮತ್ತು ಅಖಿಲ್ ಅಕ್ಕಿನೇನಿ (Akhil Akkineni) ನಟನೆಯ 'Most Eligible Bachelor' ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸುತ್ತಿದೆ. ರಿಲೀಸ್ ಆದ ಎರಡೇ ದಿನಕ್ಕೆ ಸಿನಿಮಾ  18 ಕೋಟಿ ರೂ. ಕಲೆಕ್ಷನ್ ಮಾಡಿದ ಎಂದು ಸ್ವತಃ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡರು. ಇದೇ ಖುಷಿಗೆ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. 'ನಿಮ್ಮ instinct ಮಾತುಗಳನ್ನು ಕೇಳಿ. ನಿಮ್ಮ ಗಟ್ ಫೀಲಿಂಗ್ ನಂಬಿ, ನಿಮ್ಮನ್ನು ಸರಿಯಾದ ದಾರಿಗೆ ಕರೆದುಕೊಂಡು ಹೋಗುತ್ತದೆ. ನನ್ನ ಬ್ಯಾಗ್‌ನಲ್ಲಿ ಮತ್ತೊಂದು ಹಿಟ್ ಸಿನಿಮಾ. ಆ ದೇವರು ನನಗೆ ತುಂಬಾನೇ ಕೈಂಡ್‌ (kind) ಆಗಿದ್ದಾನೆ. ನನ್ನ ಇಡೀ ತಂಡಕ್ಕೆ ಶುಭಾಶಯಗಳು, ಜೋರಾಗಿ ಪಾರ್ಟಿ (Party Hard) ಮಾಡಿ,' ಎಂದು ಪೂಜಾ ಬರೆದುಕೊಂಡಿದ್ದಾರೆ. 

Tollywood Pooja Hegde interacts with Twitter followers says actor Yash is the best vcs

ರಾಧೆ ಶ್ಯಾಮ (Radhe Shyam) ಚಿತ್ರದಲ್ಲಿ ಪ್ರೇರಣಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೂಜಾ 'ಇದೊಂದು ಎಪಿಕ್ ಲವ್‌ಸ್ಟೋರಿ ವಿತ್ ಗ್ರ್ಯಾಂಡ್ ಫೇರಿ ಟೈಲ್' ಎಂದಿದ್ದಾರೆ. ರಾಧಾ ಕೃಷ್ಣ ಕುಮಾರ್ ನಿರ್ದೇಶಕ ಮಾಡಿರುವ ಈ ಚಿತ್ರಕ್ಕೆ 2022ರ ಜನವರಿ 14ರಂದ ಬಿಡುಗಡೆ ಆಗಲಿದೆ.  ಯಶಸ್ಸಿನಲ್ಲಿ ತೇಲುತ್ತಿರುವ ಪೂಜಾ ಅವರಿಗೆ ಮೆಗಾ ಸ್ಟಾರ್ ಕರೆ ಮಾಡಿದ್ದರಂತೆ. 'ಚಿರಂಜೀವಿ (Chiranjeevi) ಗಾರು ನನಗೆ ಮೆಸೇಜ್‌ ಮಾಡಿ ಎಂಇಬಿನಲ್ಲಿ ನನ್ನ ನಟನೆ ಹೊಗಳಿದ್ದಾರೆ. ಅವರು ಮಾತುಗಳು ನನಗೆ ಸ್ಫೂರ್ತಿ ನೀಡಿ, ಇನ್ನು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಬೇಕು ಅನಿಸುತ್ತಿದೆ,' ಎಂದಿದ್ದಾರೆ. 

ತಮಿಳು ಚಿತ್ರರಂಗ ಹೇಗಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ವಿಜಯ್ (Vijay) ಜೊತೆ ಬೀಸ್ಟ್‌ (Beast) ಚಿತ್ರದಲ್ಲಿ ನಟಿಸುತ್ತಿರುವ ಪೂಜಾ ಅವರು ಒಂದೇ ಪದದಲ್ಲಿ ಉತ್ತರಿಸಿದ್ದಾರೆ. ವಿಜಯ್ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಅವರು 'Sweetest' ಎಂದಿದ್ದಾರೆ.  ನಟನೆ ವೃತ್ತಿಯಲ್ಲಿ ನೀವು ಒಬ್ಬರ ಜೊತೆ ನಟಿಸಬೇಕು ಅಂತಿದ್ದರೆ ಅದು ಯಾರು ಎಂದು ಕೇಳಿದ್ದಾರೆ. 'ಒನ್ ಆ್ಯಂಡ್ ಓನ್ಲಿ ಅಮಿತಾಭ್ ಬಚ್ಚನ್ (Amitabh Bachchan) ಸರ್. ದೇವರಲ್ಲಿ ಬೇಡಿಕೊಳ್ಳುವೆ ಒಂದು ದಿನ ಇದು ನಿಜವಾಗಲಿ,' ಎಂದಿದ್ದಾರೆ. 

"

ಇನ್ನು ಆಹಾರದ (Food) ಬಗ್ಗೆ ಕೇಳಿದ್ದಕ್ಕೆ 'ನಾನು ಎಲ್ಲಾ ರೀತಿಯ ಆಹಾರಗಳ ರುಚಿ ನೋಡಲು ಇಷ್ಟ ಪಡುವೆ. ಆದರೆ  ಅಮ್ಮ ಮಾಡಿದ  ಅಡುಗೆ ರುಚಿಯನ್ನು ಯಾರಿಗೂ ಮೀರಿಸಲು ಆಗುವುದಿಲ್ಲ' ಎಂದಿದ್ದಾರೆ. ಸಿನಿಮಾ ಹಾಗೂ ಪರ್ಸನಲ್ ಲೈಫ್ ಹೇಗೆ ಮ್ಯಾನೇಜ್ ಮಾಡುತ್ತೀರಿ ಎಂದು ಕೇಳಿದ್ದಕ್ಕೆ 'ನಾನು  ಮಲಗುವುದು (Sleep) ತುಂಬಾನೇ ಕಡಿಮೆ ಸಮಯ, ಯಾವಗೆಂದರೆ ಆಗ ಫ್ಲೈಟ್ (Flight) ತೆಗೆದುಕೊಳ್ಳುವೆ. ಎಲ್ಲವೂ ಸಿನಿಮಾಗಾಗಿ. ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಖುಷಿ ಇದೆ. ಕೆಲಸದಲ್ಲಿ ತುಂಬಾ ತೊಡಗಿಸಿಕೊಂಡಿರುವುದಕ್ಕೆ ಯಾವ ಕೆಟ್ಟ ಅಥವಾ ನೆಗೆಟಿವ್ ವಿಚಾರಗಳ ಬಗ್ಗೆ ಚಿಂತಿಸಲು ಹಾಗೂ ಮಾತನಾಡಲು ಅವಕಾಶ ಇಲ್ಲ ಅದೇ ಖುಷಿ,' ಎಂದಿದ್ದಾರೆ.

ಕೆಜಿಎಫ್ (KGF) ಚಿತ್ರದ ಯಶ್ (Yash) ಬಗ್ಗೆ ಹೇಳಿ ಎಂದಿದ್ದಾರೆ. ' ಯಶ್ ಅವರು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದು ಕೊಡುತ್ತಿದ್ದಾರೆ. ಎಲ್ಲರೂ ಮುಖದಲಿ ನಗು ಮತ್ತು ಜೋರು ಚಪ್ಪಾಳೆ ಸದ್ದು ಇರುತ್ತದೆ,' ಎಂದಿದ್ದಾರೆ. 'ಆರಂಭದಲ್ಲಿ ನನ್ನ ವೃತ್ತಿ ಜೀವನ (Career) ತುಂಬಾನೇ ಕಷ್ಟ ಇತ್ತು. ಕೆಲವೊಮ್ಮೆ ನನಗೆ ಕೆಲಸವೇ ಇರುತ್ತಿರಲಿಲ್ಲ. ಮನಸ್ಸು ಮತ್ತು ಶ್ರಮ ಹಾಕಿದ್ದರೆ ಖಂಡಿತ ಯಶಸ್ಸು ಸಿಗುತ್ತದೆ' ಎಂದಿದ್ದಾರೆ.
 

Follow Us:
Download App:
  • android
  • ios