ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್‌ ಸದಾ ಸುದ್ದಿಯಲ್ಲಿರುತ್ತಾರೆ. ಸುದ್ದಿಯ ಸದ್ದು ಹೆಚ್ಚಾಗುತ್ತಿದ್ದಂತೆ ಟ್ರೋಲ್‌ ಕೂಡ ಆಗುತ್ತಾರೆ. ಆದರೆ ಯಾವುದರ ಬಗ್ಗೆಯೂ ತೆಲೆ ಕೆಡಿಸಿಕೊಳ್ಳದೇ, ತಾನಾಯ್ತು ತನ್ನ ಕಲಸವಾಯ್ತು ಎಂದು ಸುಮ್ಮನಿರುತ್ತಾರೆ.  

ಕಿಚ್ಚ ಸುದೀಪ್‌ ಮತ್ತು ಪವನ್ ಕಲ್ಯಾಣ ಫೋಟೋ ವೈರಲ್ ಮಾಡಿದ

ಕೆಲವು ದಿನಗಳ ಹಿಂದೆ ಹೈದರಾಬಾದ್‌ನ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದರು. ಆಗ ಪವನ್ ಕೈಗೆ ಕಟ್ಟಿದ ವಾಚ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಸೂಟ್‌ ಧರಿಸಿ ಟ್ರಿಮ್‌ ಆಗಿದ್ದ ಪವನ್‌ ಕೈಯಲ್ಲಿ ಸಿಲ್ವರ್ ಕಲರ್‌ ವಾಚ್ ಎದ್ದು ಕಾಣುತ್ತಿತ್ತು. ಇದ್ಯಾವ ಬ್ರ್ಯಾಂಡ್? ಇದರ ಬೆಲೆ ಎಷ್ಟು ಎಂಬ ಮಾಹಿತಿ ಕಲೆ ಹಾಕಿದ ನೆಟ್ಟಿಗರು, ಶಾಕ್ ಆಗಲಿಲ್ಲ ಬದಲಿಗೆ ನಟನನ್ನು ಟ್ರೋಲ್ ಮಾಡಿದರು.

ಒಂದು ಸಿನಿಮಾಗೆ 40 ಕೋಟಿ ರೂ. ಸಂಭಾವನೆ ಪಡೆಯುವ ನಟ ಧರಿಸಿದ ವಾಚ್ ಹೆಸರು ರೋಲೆಕ್ಸ್‌. ಇದರ ಬೆಲೆ ಸುಮಾರು 40,81,253 ರೂ. ಎನ್ನಲಾಗಿದೆ.  ಕೆಲವರು ಇದನ್ನು ಶೂಟಿಂಗ್‌ಗೆಂದು ಧರಿಸಿದ್ದಾರೆ ಎಂದರೆ, ಇನ್ನು ಕೆಲವರು ಇದನ್ನು ಸ್ವಂತದ್ದು ಎಂದಿದ್ದಾರೆ. 

ಕೇವಲ 1,999 ರೂಪಾಯಿಗೆ ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್! 

ಕೆಲವು ತಿಂಗಳ ಹಿಂದೆ ನಮ್ಮ ಕಾರ್ಮಿಕರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೇಕಾರರಿಗೆ ಸಹಾಯ ಮಾಡಬೇಕು. ಲೋಕಲ್‌ ಮಾರುಕಟ್ಟೆಯ ಲಾಭ ಹೆಚ್ಚಿಸಬೇಕು ಎಂದು ಮಹತ್ವದ ಸಂದೇಶ ಸಾರಿದ ಪವನ್, ಖಾದಿ ಜುಬ್ಬಾ ಹಾಗೂ ಧೋತಿ ಧರಿಸಿದ್ದರು. ಆದರೆ ಅವರೇ ಈಗ ಇಷ್ಟೊಂದು ದುಬಾರಿ ವಾಚ್ ಧರಿಸಿದರೆ ಎಲ್ಲಿಂದ ನಮ್ಮ ಲೋಕಲ್ ಕಾರ್ಮಿಕರಿಗೆ ಸಹಾಯವಾಗುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.