Asianet Suvarna News Asianet Suvarna News

'ವಕೀಲ್ ಸಾಬ್‌' ನಂತರ ನಾಲ್ಕು ಸಿನಿಮಾಗೆ ಸಹಿ ಮಾಡಿದ ಪವನ್ ಕಲ್ಯಾಣ್!

ಟಾಲಿವುಡ್‌ನಲ್ಲಿ ಪವನ್ ಕಲ್ಯಾಣ್ ಹವಾ ಜೋರು. ನಾಲ್ಕು ಹೊಸ ಚಿತ್ರಗಳಿಗೆ ಚಾಲನೆ, ಎರಡು ಸಿನಿಮಾಗಳ ಚಿತ್ರೀಕರಣ ಶುರು. 
 

Tollywood Pawan Kalyan as Bheemla Nayak in Ayyapanum Koshiyum remake vcs
Author
Bangalore, First Published Aug 3, 2021, 11:43 AM IST
  • Facebook
  • Twitter
  • Whatsapp

'ವಕೀಲ್ ಸಾಬ್' ಚಿತ್ರದ ಮೂಲಕ ತೆಲಗು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ಪವನ್ ಕಲ್ಯಾಣ್ ಮತ್ತೆ ಸಾಲು ಸಾಲು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. 

ಮಾಲಿವುಡ್ ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾ ತೆಲುಗುಗೆ ರಿಮೇಕ್ ಆಗುತ್ತಿದೆ. ಈ ರಿಮೇಕ್ ಚಿತ್ರದಲ್ಲಿ ಪವನ್ ನಟಿಸುತ್ತಿದ್ದು ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದ ಸಣ್ಣ ಪುಟ್ಟ ಕ್ಲಿಪ್ಪಿಂಗ್ ಹೊರ ಬರುತ್ತಿದ್ದಂತೆ ಪವನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. 

Tollywood Pawan Kalyan as Bheemla Nayak in Ayyapanum Koshiyum remake vcs

ನಾಲ್ಕು ಸಿನಿಮಾಗಳಲ್ಲಿ ಎರಡು ಸಿನಿಮಾಗಳ ಚಿತ್ರೀಕರಣ ಆರಂಭವಾಗಿವೆ.  ಪೋಸ್ಟ್ ಪ್ರೊಡಕ್ಷನ್ ಹಂತ ತಲುಪುವ ಮುನ್ನವೇ ಡಬ್ಬಿಂಗ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಹಿಂದಿಯ ಹಕ್ಕು ಪಡೆಯಲು ಬಾಲಿವುಡ್‌ನ ದೊಡ್ಡ ಪ್ರೊಡಕ್ಷನ್ ಹೌಸ್ ಯತ್ನಿಸುತ್ತಿದ್ದು, ದೊಡ್ಡ ಮೊತ್ತದ ಆಫರ್‌ ಅನ್ನು ನಿರ್ಮಾಪಕರಿಗೆ ನೀಡಿದ್ದಾರೆ. 

ನೆಚ್ಚಿನ ನಟನ ಚಿತ್ರ ರಿಲೀಸ್ ಆದಾಗ ಕೈ ಕುಯ್ಕೊಂಡ ಅಭಿಮಾನಿ!

ಚಿತ್ರದಲ್ಲಿ ಪವನ್ ಭೀಮ್ಲ ನಾಯಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಒಬ್ಬರು ಐಶ್ವರ್ಯ ರಾಜೇಶ್,ಮತ್ತೊಬ್ಬರು ನಿತ್ಯಾ ಮೆನನ್. ಚಿತ್ರದಲ್ಲಿ ಪವನ್ ಎದುರು ರಾಣಾ ದುಗ್ಗುಬಾಟಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿಗೆ  ಈ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ.

Follow Us:
Download App:
  • android
  • ios