ಕೊನೆಗೂ ನಟ ಆರ್ಯಗೆ ಸಿಕ್ತು ಬಿಗ್ ರಿಲೀಫ್. ಚೆನ್ನೈನ ಪೊಲೀಸರ ವಶದಲ್ಲಿ ಇಬ್ಬರು ಆರೋಪಿಗಳು. 

ಜರ್ಮನಿ ಯುವತಿಗೆ ಮದುವೆ ಆಗುವುದಾಗಿ ಮಾತು ಕೊಟ್ಟು, 70 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ನಟ ಅರ್ಯನ ವಿರುದ್ಧ ಕೇಳಿ ಬಂದಿತ್ತು. ಅಲ್ಲದೇ ಜರ್ಮನಿ ಯುವತಿ ಪರವಾಗಿ ಚೆನ್ನೈನಲ್ಲಿ ವಕೀಲರೊಬ್ಬರು ನ್ಯಾಯ ಒದಗಿಸಲು ಹೋರಾಡುತ್ತಿದ್ದರು. ತಿಂಗಳ ಬಳಿಕ ಈ ಪ್ರಕರಣದ ಆರೋಪಿಗಳಿಬ್ಬರನ್ನೂ ಬಂಧಿಸುವಲ್ಲಿ ಚೆನ್ನೈ ಪೊಲೀಸರು ಯಶಸ್ವಿಯಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟ ಆರ್ಯ ವಿರುದ್ಧ 70 ಲಕ್ಷ ವಂಚನೆ ಆರೋಪ; ದೂರು ದಾಖಲಿಸಿದ ಜರ್ಮನಿ ಹುಡುಗಿ!

ಹೌದು! ನಟ ಆರ್ಯ ವಿರುದ್ಧ ವಕೀಲರು ದೂರು ನೀಡಿದ ಹಿನ್ನಲೆಯಲ್ಲಿ, ಸೈಬರ್ ಪೊಲೀಸರು ನೋಟಿಸ್‌ ನೀಡಿದ್ದರು. ವಿಚಾರಣೆಯಲ್ಲಿ ಭಾಗಿಯಾಗಿದ ನಟ ಆರ್ಯ ಈ ಮಹಿಳೆಗೂ ನನಗೂ ಯಾವುದೇ ಸಂಬಂಧವಲ್ಲ. ಪರಿಚಯವೂ ಇಲ್ಲ, ಯಾರೋ ನನ್ನ ಹೆಸರು ದುರ್ಬಳಕೆ ಮಾಡಿಕೊಂಡು, ವಂಚಿಸಿರಬಹುದು ಎಂದು ಅನುಮಾನ ಇರುವುದಾಗಿ ಹೇಳಿದ್ದರು. 

ಕೇವಲ 25 ದಿನಗಳಲ್ಲಿ ಚೆನ್ನೈನ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಜರ್ಮನಿ ಹುಡುಗಿ ವಿದ್ಜಾ ಜೊತೆ ಮೆಸೇಜ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಪತ್ತೆ ಹಚ್ಚಿದ ಪುಲೈಂತೋಪ್ ಪ್ರದೇಶಕ್ಕೆ ಸೇರಿದ ಮೊಹಮ್ಮದ್ ಅರ್ಮಾನ್ ಹಾಗೂ ಮೊಹಮ್ಮದ್ ಹುಸೇನಿ ಎಂಬ ಇಬ್ಬರನ್ನು ಬಂಧಿಸಿದ್ದಾರೆ. 

ಆರೋಪಿಗಳು ಸಿಕ್ಕ ನಂತರ ನಟ ಆರ್ಯ ಟ್ಟೀಟರ್‌ನಲ್ಲಿ ಪೊಲೀಸರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 'ನಿಜವಾದ ಆರೋಪಿಗಳನ್ನು ಹಿಡಿಯುವುದರಲ್ಲಿ ನಮ್ಮ ಚೆನ್ನೈನ ಪೊಲೀಸ್ ಆಯುಕ್ತರು ಯಶಸ್ವಿಯಾಗಿದ್ದಾರೆ. ಪೊಲೀಸ್ ಆಯುಕ್ತರಿಗೆ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಿಜಕ್ಕೂ ಮಾನಸಿಕವಾಗಿ ಹಿಂಸೆ ಉಂಟು ಮಾಡಿತ್ತು. ನನ್ನನ್ನು ನಂಬಿದ ಎಲ್ಲರಿಗೂ ಪ್ರೀತಿಯ ಧನ್ಯವಾದ,' ಎಂದು ಟ್ಟೀಟ್ ಮಾಡಿದ್ದಾರೆ.