ಪ್ರಭಾಸ್ 3 ಗಂಟೆ ಫ್ರೆಂಡ್; ಕೊನೆಗೂ ಗಾಸಿಪ್‌ಗೆ ಬ್ರೇಕ್ ಹಾಕಿದ್ರಾ ಅನುಷ್ಕಾ ಶೆಟ್ಟಿ ?
ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷದ ಸಂಭ್ರಮದಲ್ಲಿ ಅನುಷ್ಕಾ ಶೆಟ್ಟಿ. ಪ್ರಭಾಸ್- ಅನುಷ್ಕಾ ಮದುವೆ ಆಗ್ತಾರಾ? ಇವರ ಸಂಭಂದದ ಬಗ್ಗೆ ಸಿಗ್ತು ಫುಲ್ ಕ್ಲಾರಿಟಿ...
ತಮಿಳು- ತೆಲುಗು ಚಿತ್ರರಂಗದ ಬ್ಯೂಟಿ ಕ್ವೀನ್, 'ಭಾಗಮತಿ' ಅನುಷ್ಕಾ ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳಾಯ್ತು. ಇದೇ ಸಂತೋಷಕ್ಕೆ ಖಾಸಗಿ ಸಂದರ್ಶನವೊಂದರಲ್ಲಿ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಸಿನಿ ಜರ್ನಿಯ ಸುಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾ ಮಾತನಾಡುತ್ತಿದ್ದ ಅನುಷ್ಕಾ, ಪ್ರಭಾಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 'ಕಳೆದ 15 ವರ್ಷಗಳಿಂದ ನನಗೆ ಪ್ರಭಾಸ್ ಗೊತ್ತು. ಪ್ರಭಾಸ್ ನನ್ನ 3 ಗಂಟೆ ಫ್ರೆಂಡ್. ನಮ್ಮಿಬ್ಬರ ನಡುವೆ ಅದ್ಭುತವಾದ ಗೆಳತನವಿದೆ. ನಮ್ಮಿಬ್ಬರ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಇದಕ್ಕೆ ಕಾರಣ ನಮ್ಮ ಆನ್‌ಸ್ಕ್ರೀನ್ ಕೆಮಿಸ್ಟ್ರೀ ತುಂಬಾ ಚನ್ನಾಗಿದೆ ' ಎಂದು ಹೇಳಿದ್ದಾರೆ.
‘ಬಾಹುಬಲಿ’ ನಟಿಗೆ ಬಾಡಿ ಶೇಮಿಂಗ್; ಅಭಿಮಾನಿಗಳಿಂದ ಸಖತ್ ಕ್ಲಾಸ್!
ಅಷ್ಟಕ್ಕೂ 3 ಗಂಟೆ ಫ್ರೆಂಡ್ ಎಂದರೇನು?
ನಮ್ಮ ಜೀವನದಲ್ಲಿ ಅತಿ ಹೆಚ್ಚು ಮನಸ್ಸಿಗೆ ಹತ್ತಿರವಾದವರನ್ನು 3Am ಫ್ರೆಂಡ್ ಎಂದು ಹೇಳುತ್ತಾರೆ. ಒಬ್ಬರಿಗೊಬ್ಬರು ತುಂಬಾ ಡಿಪೆಂಡ್ ಆಗಿರುತ್ತಾರೆ. ಏನೇ ವಿಚಾರವಿದ್ದರು ಹಂಚಿಕೊಳ್ಳುತ್ತಾರೆ. ಇದರ ಅರ್ಥ ಅನುಷ್ಕಾ- ಪ್ರಭಾಸ್ ನಡುವೆ ಇಂತದೇ ಸ್ನೇಹವಿದೆ ಎಂದು ಅರ್ಥ.
ಕನ್ನಡದಲ್ಲಿ ಕನ್ನಡಿಗರಿಗೆ ಶುಭಾಶಯ: ಎಷ್ಟು ಚೆಂದ ಅನುಷ್ಕಾ ಭಾಷಾ ಲಯ!
ಇನ್ನು ಏಪ್ರಿಲ್ ನಲ್ಲಿ ಅನುಷ್ಕಾ ಅಭಿನಯದ 'ನಿಶ್ಯಬ್ಧಂ' ತೆರೆ ಕಾಣಲು ಸಿದ್ಧವಾಗುತ್ತಿದೆ. ಮೂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ ಈ ಭಾರಿಯೂ ತಮ್ಮ ಅಭಿನಯದ ಮೂಲಕ ಸಿನಿ ಪ್ರೇಮಿಗಳ ಪ್ರೀತಿ ಗೆಲ್ಲುವುದರಲ್ಲಿ ಅನುಮಾನವಿಲ್ಲ.