ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಮುಂದಿನ ಸಿನಿಮಾ ನಿಶ್ಯಬ್ದಮ್ ಶೂಟಿಂಗ್ ಮುಗಿಸಿ ವಾಪಸ್ ಹೈದರಾಬಾದ್ ಗೆ ಬರುವಾಗಿನ ಫೋಟೋವೊಂದು ವೈರಲ್ ಆಗಿದೆ. 

ಈ ಫೋಟೋದಲ್ಲಿ ಅನುಷ್ಕಾ ಸಿಕ್ಕಾಪಟ್ಟೆ ದಪ್ಪವಾದಂತೆ ಕಾಣಿಸುತ್ತಿದ್ದರು. ತೆಲುಗು ವೆಬ್ ಸೈಟ್ ಗಳು ಆಕೆ ಬಾಡಿ ಶೇಮಿಂಗ್ ಮಾಡಿ, ಸಿಕ್ಕಾಪಟ್ಟೆ ದಪ್ಪವಾಗಿದ್ದಾರೆ, ಡಬಲ್ ಚಿನ್ ಅಂತೆಲ್ಲಾ ಕಾಮೆಂಟ್ ಮಾಡಿವೆ. 

ಇದೇನು ಅಭಿಮಾನ! ಕಿಚ್ಚ ಸುದೀಪ್ ಗಾಗಿ ಲೈಬ್ರರಿ ಕಟ್ಟಿಸಿದ ಅಭಿಮಾನಿ!

ಈ ರೀತಿಯ ಕಮೆಂಟ್ ಗಳಿಗೆ ಅಭಿಮಾನಿಗಳು, ನೆಟ್ಟಿಗರು ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿವೆ. ಮಾಧ್ಯಮಗಳು ಅಧಃಪತನಕ್ಕಿಳಿದಿವೆ ಎಂದು ಹೇಳಿದ್ದಾರೆ. 

ತೂಕ ಕಳೆದುಕೊಳ್ಳಲು ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಡಿಟಾಕ್ಸ್ ಸೆಂಟರ್ ವೊಂದರಲ್ಲಿರುವ ಫೋಟೋಗಳು ವೈರಲ್ ಆಗಿತ್ತು.  ಸದ್ಯ ಅನುಷ್ಕಾ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ನಿಶ್ಯಬ್ದಂ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.