ದಕ್ಷಿಣ ಭಾರತದ ಚಿತ್ರರಂಗದ ಬಹು ಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಎಲ್ಲೇ ಇದ್ದರು ಹೇಗೆ ಇದ್ದರು ಕನ್ನಡ ಚೆಲುವೆಯಾಗೆ ಮನದಲ್ಲಿ ಮನೆ ಮಾಡಿದ್ದಾರೆ. ಮಾಡುವುದು ಅಲ್ಲೊಂದು ಇಲ್ಲೊಂದು ಸಿನಿಮಾವಾದರೂ ಬಾಕ್ಸ್ ಆಫೀಸ್ ಕಲೇಕ್ಷನ್‌ ಭರ್ಜರಿಯಾಗಿ ಇರುತ್ತದೆ.

ಅಣ್ಣಾವ್ರನ್ನು ನೆನೆದ ಬಾಹುಬಲಿ ನಟಿ!

ಇದೀಗ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ 'ಈ ದಿನ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ ಮತ್ತು ವರ್ಷವಿಡೀ ಪ್ರತಿಯೊಂದು ಕ್ಷಣವನ್ನೂ ಹೀಗೆ ಮುಂದುವರಿಸೋಣ ಪ್ರಪಂಚದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು' ಎಂದು ಫೋಟೋ ಅಪ್ಲೋಡ್ ಮಾಡಿದ್ದಾರೆ.

 

ಈ ಹಿಂದೆ ತಾಯಿಯ ಹುಟ್ಟು ಹಬ್ಬಕ್ಕೆ ಅನುಷ್ಕಾ ಶೆಟ್ಟಿ ' ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ' ಎಂದು ಕನ್ನಡಲ್ಲೇ ವಿಶ್ ಮಾಡಿದ್ದರು ಹಾಗೂ ವರನಟ ಡಾ. ರಾಜ್‌ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅನುಷ್ಕಾ ಶೆಟ್ಟಿ ಫೇಸ್ ಬುಕ್‌ನಲ್ಲಿ ಫೋಟೋ ಅಪ್ಲೋಡ್‌ ಮಾಡಿ ಶುಭಾಶಯ ತಿಳಿಸಿದ್ದರು.

ಹೇಗಿದ್ರೂ ಚಂದ ‘ಬಾಹುಬಲಿ’ ನಟಿಯ ಅಂದ!