ಸಿನಿಮಾ ಕ್ಷೇತ್ರದಲ್ಲಿ ಆನ್‌ ಸ್ಕ್ರೀನ್‌ ನೋಡುವುದೆಲ್ಲಾ ನಿಜವಲ್ಲ. ಹಾಗೇ ಆಫ್‌ ಸ್ಕ್ರೀನ್‌ನಲ್ಲಿ ನಡೆಯುವುದೂ ಶಾಶ್ವತವಲ್ಲ. ಚಿತ್ರ ಕಥೆಗೆ ಕಿತ್ತಾಟ, ಪಾತ್ರಕ್ಕೆ ಮನಸ್ತಾಪ, ವಸ್ತ್ರ ವಿನ್ಯಾಸ ಬಗ್ಗೆ ಜಟಾಪಟಿ ಹೀಗೆ ಅನೇಕ ವಿಚಾರಗಳ ಬಗ್ಗೆ ನಟಿಯರ ನಡುವೆ ಕೋಲ್ಡ್‌ ವಾರ್‌ ನಡೆಯುತ್ತಲೇ ಇರುತ್ತವೆ, ಎಂದು ಕೇಳಿದ್ದೇವೆ. ಆದರೆ ಅವೆಲ್ಲಾ ಆ ಕ್ಷಣಕ್ಕೆ ಎಂದು ಹೇಳುತ್ತಾ ಒಬ್ಬರನ್ನೊಬ್ಬರು ಬೆಂಬಲಿಸುತ್ತಾರೆ.

ಸಮಂತಾ ಸಪೋರ್ಟ್‌:
ಟಾಲಿವುಡ್‌ ಎವರ್‌ ಗ್ರೀನ್‌ ಬ್ಯೂಟಿ ಹಾಗೂ ಹಿಟ್ ನಟಿಯರ ಪಟ್ಟದಲ್ಲಿರುವ ಸಮಂತಾ ಈಗ ತನ್ನ ಸಹನಟಿಯನ್ನು ಹೊಗಳುತ್ತಿದ್ದಾರೆ. ಇಷ್ಟು ದಿನಗಳ ಕಾಲ ಇದು ನಟರ ನಡುವೆ ಮಾತ್ರ ನಡೆಯುತ್ತಿದ್ದು, ಇದೀಗ ಬಹಿರಂಗವಾಗಿ ನಟಿಯರೂ ಮಾತನಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಟಿ ಸಮಂತಾ.

ಸಮಂತಾನೇ ಭಯಪಟ್ಟ ಪಾತ್ರವಿದು; 'ಓಹ್ ಬೇಬಿ'ಯಲ್ಲಿ ಹಿಂಗೆಲ್ಲಾ ಆಯ್ತಾ?

ಹೌದು! ನಟಿ ಸಮಂತಾ ತಮ್ಮ ಸಹನಟಿ ರಕುಲ್‌ ಪ್ರೀತ್‌ ಸಿಂಗ್‌ ಬಗ್ಗೆ ಮಾತನಾಡಿದ್ದಾರೆ. ಸಮಂತಾ ಜೊತೆ ಇಂಡಸ್ಟ್ರಿಗೆ ಕಾಲಿಟ್ಟ ರಕುಲ್‌ಗೆ ಲಕ್ ಒಲಿದಿದ್ದು ಸ್ವಲ್ಪ ತಡವಾದರೂ, ಈಗ  ಸಮಂತಾಳ ಸಮಕ್ಕೆ ಬೇಡಿಕೆ ಹೊಂದಿದ್ದಾರೆ. ಇಬ್ಬರು ಆಫ್‌ ಸ್ಕ್ರೀನ್‌ನಲ್ಲಿ ತುಂಬಾನೇ ಕ್ಲೋಸ್ ಫ್ರೆಂಡ್ಸ್.

ಇತ್ತೀಚಿನ ದಿನಗಳಲ್ಲಿ ರಕುಲ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು ದಿನೆ ದಿನೇ ವಿಭಿನ್ನ ಪೋಟೋ ಹಾಗೂ ವಿಡಿಯೋ ಅಪ್ಲೋಡ್‌ ಮಾಡುತ್ತಲೇ ಇರುತ್ತಾರೆ. ರಕುಲ್‌ ಫೋಟೋವೊಂದಕ್ಕೆ ಸಮಂತಾ 'ಎಂಥಾ ಸೌಂದರ್ಯ' ಎಂದು ಕಾಮೆಂಟ್‌ ಮಾಡಿದ್ದಾರೆ. ಫೋಟೋ ಫೇಮಸ್ ಆಯ್ತೋ ಇಲ್ವೋ, ಆದರೆ ಸಮಂತಾ ಮಾಡಿದ ಕಾಮೆಂಟ್ ಫುಲ್‌ ವೈರಲ್ ಆಗುತ್ತಿದೆ.

ರಕುಲ್‌ ಮಾತ್ರವಲ್ಲ. ಕಾಜಲ್‌ಗೂ:
ರುಕುಲ್‌ ಸಮಂತಾ ಕಾಮೆಂಟ್‌ಗೆ ತಕ್ಷಣವೇ ಪ್ರತಿಕ್ರಿಯೆ  ನೀಡಿದ್ದಾರೆ. 'ನೀನು ಸೌಂದರ್ಯವತಿ' ಎಂದು ರಿಪ್ಲೈ ಮಾಡಿದ್ದಾರೆ. ಸಮಂತಾ ರಕುಲ್‌ಗೆ ಮಾತ್ರ ಹೀಗೆ ಹೇಳಿದ್ದಾರೆ ಅಂದುಕೊಳ್ಳಬೇಕೆ? ಈ ಹಿಂದೆ ನಟಿ ಕಾಜಲ್ ಅಗರ್ವಾಲ್‌ಗೂ ಇಂಥದ್ದೇ ಕಮೆಂಟ್ ಮಾಡಿದ್ದಾರೆ. 'ಅಮೇಜಿಂಗ್‌ ಆಗಿ ಕಾಣುತ್ತಿದ್ದಿ' ಎಂದು ಕಾಮೆಂಟ್‌ ಮಾಡಿದ್ದರು.

ನಾಗಚೈತನ್ಯ ಜೊತೆ ಕಾಣಿಸಿಕೊಂಡ ಸಾಯಿ ಪಲ್ಲವಿ; ಸಮಂತಾ ಮಾಡಿದ ಕಾಮೆಂಟ್ ವೈರಲ್!

ಒಟ್ಟಿನಲ್ಲಿ ತಮ್ಮ ಎಲ್ಲ ಸಹ ನಟಿಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸಮಂತಾ, ಯಾವುದೇ ಮುಜುಗರವಿಲ್ಲದೆ ಬಹಿರಂಗವಾಗಿಯೇ ಮತ್ತೊಬ್ಬ, ಅದೂ ತಮ್ಮದೇ ಸ್ಪರ್ಧಿಯನ್ನು ಶ್ಲಾಘಿಸುವ ಗುಣಕ್ಕೆ ಚಪ್ಪಾಳೆ...

'ಈಗ' ಚಿತ್ರದಲ್ಲಿ ಸ್ಯಾಂಡಲ್‌ವಡ್ ಅಭಿನಯ ಚಕ್ರವರ್ತಿ ಸುದೀಪ್ ಅವರೊಂದಿಗೆ ನಟಿಸಿದ ಸಮಂತಾ ಅವರು ಹತ್ತ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿ ಮೆರೆಯುತ್ತಿರುವಾಗಲೇ ಅಕ್ಕಿನೇನಿ ನಾಗರ್ಜುನ ಅವರ ಮಗ ನಾಗ ಚೈತನ್ಯ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಮದುವೆಯಾದೂ ಅವರ ಬೇಡಿಕೆ ಏನೂ ಕಡಿಮೆಯಾಗಿಲ್ಲ. 

2010ರಲ್ಲಿ ಗೌತಮ್ ಮೆನನ್ ಅವರ ತೆಲಗು ಚಿತ್ರ ಏ ಮಾಯಾ ಛೇಸವೇ ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಸಮಂತಾ, ಜೊತೆ ಜೊತೆಗೆ ತಮಿಳು ಚಿತ್ರ ವಿನ್ನೈಥಆಂಡಿ ವರುವಾಯದಲ್ಲಿಯೂ ನಟಿಸಿದ್ದರು. ಆ ಮೂಲಕ ಸೌಂದರ್ಯದೊಂದಿಗೆ ಸಮಂತಾ ಅತ್ಯುತ್ತಮ ನಟಿಯಾಗಿಯೂ ಹೊರ ಹೊಮ್ಮಿದ್ದು, ಯಶಸ್ವಿ ನಾಯಕಿಯಾಗಿ ಬದುಕು ರೂಪಿಸಿಕೊಂಡರು. ತಮ್ಮ ಮೊದಲ ಚಿತ್ರದಲ್ಲಿ ಮಲಯಾಳಿ ಸೇಂಟ್ ಥಾಮಸ್ ಕ್ರಿಶ್ಚಿಯನ್ ಯುವತಿಯಾದ ಜೆಸ್ಸಿ ಪಾತ್ರವನ್ನು ಸಮಂತಾ ನಿಭಾಯಿಸಿದ್ದು, ನಾಯಕನ ಪಾತ್ರದಲ್ಲಿ ನಾಗ ಚೈತನ್ಯ ಅವರು ನಟಿಸಿದ್ದರು. ಆಗಿನಿಂದಲೇ ಈ ಜೋಡಿ ಮಧ್ಯ ಪ್ರೇಮಕ ಅಂಕುರಿಸಿತ್ತು ಎನ್ನಲಾಗುತ್ತದೆ. ಮೊದಲ ಚಿತ್ರ ಬಿಡುಗಡೆಯಾದ ಕೂಡಲೇ ಸಮಂತಾ ಅವರಿಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುವಲ್ಲಿ ಅವರು ಬಹುಬೇಗ ಯಶಸ್ವಿಯಾದರು. ನಂತರ ಹಲವು ಚಿತ್ರಗಳಲ್ಲಿ ನಟಿಸಿರುವ ಈ ದಕ್ಷಿಣದ ಸುಂದರಿಗೆ ಪ್ರಶಸ್ತಿಗಳು ಒಲಿದು ಬಂದಿದ್ದು, ಕಡಿಮೆ ಏನಿಲ್ಲ. ಆದರೆ, ಕನ್ನಡದಲ್ಲಿಯೂ ಇವರಿಗೆ ಅಪಾರ ಅಭಿಮಾನಿಗಳಿದ್ದು, ಇನ್ನೂ ಸ್ಯಾಂಡಲ್‌ವುಡ್ ಚಿತ್ರದಲ್ಲಿ ನಟಿಸಿಲ್ಲ.