ಟಾಲಿವುಡ್‌ ವರ್ಸಟೈಲ್‌ ನಟಿ ಸಮಂತಾ ಅಕ್ಕಿನೇನಿ ಲಾಕ್‌ಡೌನ್‌ನಿಂದಾಗಿ ಫ್ಯಾಮಿಲಿ ಜೊತೆ ಸಿಕ್ಕಾಪಟ್ಟೆ ಟೈಮ್‌ ಸ್ಪೆಂಡ್‌ ಮಾಡುತ್ತಿದ್ದಾರೆ ಈ ಕಾರಣದಿಂದಾಗಿ ಸೋಷಿಯಲ್ ಮೀಡಿಯಾ ಲೈಫ್‌ಯಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದರು .ಆದರೆ ಅಭಿಮಾನಿಗಳು ಕಾಮೆಂಟ್‌ಗಳಲ್ಲಿ  ಪ್ರಶ್ನೆಗಳು ಕೇಳುವುದು ಹೆಚ್ಚಾಗುತ್ತಿದ್ದಂತೆ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

2019ರಲ್ಲಿ ಟಾಲಿವುಡ್‌ ಚಿತ್ರರಂಗದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸಿನಿಮಾ ಅಂದ್ರೆ 'ಓಹ್ ಬೇಬಿ'.  70 ವರ್ಷದ ಮುದುಕಿ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ ಜೂಲಿ ಲಕ್ಷ್ಮಿ  ಹಾಗೂ 24 ವರ್ಷ ಹುಡುಗಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. 

ಲಕ್ಷ್ಮಿ ಪಾತ್ರ ಮಾಡೋಕೆ ಭಯ:

ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಸಮಂತಾ ತನ್ನ ಫೋಟೋ ಹಾಗೂ ಲಕ್ಷ್ಮಿ ಫೋಟೋವನ್ನು ಕೋಲ್ಯಾಜ್‌ ಮಾಡಿ ಬರೆದಿದ್ದ ಸಾಲುಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 'ನಿರ್ದೇಶಕಿ  ನಂದುರೆಡ್ಡಿ, ನಿಮಗೆ ಜ್ಞಾಪ ಇರಬಹುದು ಚಿತ್ರೀಕರಣದ ವೇಳೆ ನೀವು ಕಳುಹಿಸಿದ ಫೋಟೋ ಇದು. ಉತ್ಸಾಹದಿಂದ ಕೂಡಿದ್ದರೂ  ತುಂಬಾನೇ ಭಯವಿತ್ತು. ಇದು ನನ್ನ ಲೈಫ್‌ನ  ಗ್ರೇಟ್‌ ಮೆಮೊರಿ. ಇದು ನನ್ನ ಫೇವರೆಟ್‌ ಸಿನಿಮಾ ಯಾರು ನೋಡಿಲ್ಲ ಪ್ಲೀಸ್‌ ನೆಟ್‌ಫ್ಲಿಕ್ಸ್‌ನಲ್ಲಿದೆ ನೋಡಿ' ಬರೆದುಕೊಂಡಿದ್ದರು.

 

'ಓಹ್‌ ಬೇಬಿ' ವಿಭಿನ್ನ ಕಥೆ:

 ನಿರ್ದೇಶಕಿ ನಂದುರೆಡ್ಡಿ ಅವರ  ಓಹ್ ಬೇಬಿ ಸಿನಿಮಾ ವಿಭಿನ್ನ ಕಥೆ ಹೊಂದಿದ್ದು ರಿಲೀಸ್‌ ಆದ ದಿನವೇ ಬಾಕ್ಸ್ ಆಫೀಸ್‌ ಕಲೆಕ್ಷನ್‌ ಮುಟ್ಟಿತ್ತು.  70 ವರ್ಷ ಅಜ್ಜಿ ತನ್ನ ಜೀವನದಲ್ಲಿ  ಎದುರಿಸುತ್ತಿರುವ ಸಂಕಷ್ಟಗಳಿಗೆ ದೇವರನ್ನು ದೂರುತ್ತಿರುತ್ತಾರೆ. ಒಂದು ಸಲ ಫೋಟೋ ತೆಗೆಸಿಕೊಳ್ಳಲು ಹೋಗಿ 24 ವರ್ಷ ಹುಡುಗಿಯಾಗಿ ಬದಲಾಗುತ್ತಾರೆ. ಆಗ ಜೀವನದಲ್ಲಿ ಮಿಸ್‌ ಮಾಡಿಕೊಂಡ ಪ್ರತಿ ಕ್ಷಣವನ್ನು ಅನುಭವಿಸುತ್ತಾರೆ.

ಸಮಂತಾ ಪ್ರೆಗ್ನೆನ್ಸಿ ಗಾಸಿಪ್:

'ಓಹ್ ಬೇಬಿ' ಚಿತ್ರದ ನಂತರ ಯಾವ ಸಿನಿಮಾನೂ ಒಪ್ಪಿಕೊಂಡಿಲ್ಲ .  ಸಮಂತಾ ಫ್ಯಾಮಿಲಿ ಜೊತೆ ಫುಲ್‌ ಕಾಲ ಕಳೆಯುತ್ತಾ ಪತಿ ನಾಗಚೈತನ್ಯ ಮಾಡುತ್ತಿರುವ ಸಿನಿಮಾ ಕಥೆಗಳು ಹಾಗೂ ಅದರ ಪ್ರೀ ರಿಲೀಸ್‌ ವಿಡಿಯೋ ಎಲ್ಲಾ ನೋಡುತ್ತಿದ್ದಾರೆ.  

ನಾಗಚೈತನ್ಯ ಜೊತೆ ಕಾಣಿಸಿಕೊಂಡ ಸಾಯಿ ಪಲ್ಲವಿ; ಸಮಂತಾ ಮಾಡಿದ ಕಾಮೆಂಟ್ ವೈರಲ್!

ಇದೆನಪ್ಪಾ ಪತಿ ಸಿನಿಮಾದ ಬಗ್ಗೆ  ಪ್ರತಿ ಕ್ಷಣವೂ ಅಪ್‌ಡೇಟ್‌ ತೆಗೆದುಕೊಳ್ಳುತ್ತಿರುವ ಸಮಂತಾ ಯಾಕೆ ಯಾವ ಸಿನಿಮಾ ಮಾಡುವುದಕ್ಕೆ ರೆಡಿ ಇಲ್ಲ? ಏನಾದ್ರೂ  ಪ್ರೆಗ್ನೆಂಟಾ? ನಿಧಾನಕ್ಕೆ  ರಿವೀಲ್‌ ಮಾಡುತ್ತಾರಾ? ಎಂದೆಲ್ಲಾ ಅಭಿಮಾನಿಗಳಲ್ಲಿ ಪ್ರಶ್ನೆ ಮೂಡುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ಪಪ್ಪಿ ಫೇಮಸ್:

ಸಮಂತಾ ಹಾಗೂ ನಾಗಚೈತನ್ಯ 2018ರಲ್ಲಿ Bugaboo ಎಂದು ನಾಯಿಯನ್ನು ದತ್ತು ಪಡೆದುಕೊಂಡರು. ಅಂದಿನಿಂದ ಸಮಂತಾ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅದರದೇ ಫೋಟೋ, ಸಾಲದೆಂದು ಅದರ ಜೊತೆ ಜಾಹೀರಾತು  ಹಾಗೂ ಫೋಟೋ ಶೂಟ್ ಮಾಡಿಸಿದ್ದಾರೆ.  2019ರಲ್ಲಿ ಒಂದು ವರ್ಷ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ತಮ್ಮ ಸಾಕು ನಾಯಿಯನ್ನು  ಮಗನಂತೆ ಭಾವಿಸಿ ಬಟ್ಟೆ, ಕೇಕ್  ಹಾಗೂ ಇತರೆ  ನಾಯಿಗಳನ್ನು ಕರೆಸಿ ಸಂಭ್ರಮಿಸಿದ್ದಾರೆ.

 

 
 
 
 
 
 
 
 
 
 
 
 
 

Good light , good skin , good puppy kinda day ❤️ ... #nofilter #bareskin #happyheart

A post shared by Samantha Akkineni (@samantharuthprabhuoffl) on May 13, 2020 at 1:46am PDT