ಮಗಧೀರ ಚೆಲುವೆ ಕಾಜಲ್ ಅಗರ್‌ವಾಲ್ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹುಡುಗ ಯಾರು ಗೊತ್ತಾ?
ಟಾಲಿವುಡ್ ಬ್ಯುಟಿ ಕಾಜಲ್ ಅಗರ್‌ವಾಲ್ ಪ್ರೀತಿ, ಮದುವೆ ಮತ್ತು ಸಂಭಾವನೆ ವಿಚಾರ ಸದಾ ಚಿತ್ರರಂಗದ ಹಾಟ್ ಟಾಪಿಕ್ ಆಗಿರುತ್ತಿದ್ದರು. ಆದರೆ ಯಾರಿಗೂ ಸಣ್ಣ ಸುಳಿವೂ ನೀಡದೇ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.
ಹೊರಗಡೆ ಹೋಗ್ಬೇಕು, ಅಪ್ಪ ಬಿಡ್ತಿಲ್ಲಾ ಅಂತಿದ್ದಾರೆ ನಟಿ ಕಾಜಲ್..!
ಹೌದು! ಕೆಲವು ದಿನಗಳ ಹಿಂದೆ ಕಾಜಲ್ ಪೋಷಕರು ಹುಡುಗನನ್ನು ಹುಡುಕುತ್ತಿದ್ದಾರೆ, ಎಂಬ ವಿಚಾರ ಹರಿದಾಡುತ್ತಿತು. ಖ್ಯಾತ ಬ್ಯುಸಿನೆನ್ ಮ್ಯಾನ್ ಗೌಮತ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಯಾವ ಸಿನಿಮಾ ತಾರೆಯರನ್ನೂ ಆಹ್ವಾನಿದೇ ನಡೆದ ಕಾರ್ಯಕ್ರಮದಲ್ಲಿ ಬಾಲಮುರಿ ಸಾಯಿ ಶ್ರೀನಿವಾಸ್ ಮಾತ್ರ ಭಾಗಿಯಾಗಿದ್ದರು.

ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಜಲ್ 2020ರಲ್ಲಿ ಮದುವೆಯಾಗಿ ಲೈಫ್ ಸೆಟಲ್ ಆಗಬೇಕೆಂದು ಪ್ಲಾನ್ ಮಾಡಿರುವುದಾಗಿ ಹೇಳಿದ್ದರು. ಅಲ್ಲದೇ ಲಕ್ಷ್ಮಿ ಮಂಚು ಟಾಕ್ ಕಾರ್ಯಕ್ರಮದಲ್ಲಿ ತಮ್ಮ ಲೈಫ್ ಪಾರ್ಟನರ್ ಹೇಗಿರಬೇಕೆಂಬುದನ್ನೂ ರಿವೀಲ್ ಮಾಡಿದ್ದರು. 'ನನ್ನ ಪಾರ್ಟ್‌ನರ್‌ಗೆ ತುಂಬಾ ಕ್ವಾಲಿಟೀಸ್ ಇರಬೇಕು. ಅದರಲ್ಲಿ ತುಂಬಾ ಮುಖ್ಯವಾದದ್ದು ಕಾಳಜಿ, ಅಧ್ಯಾತ್ಮದೆಡೆಗೆ ಒಲವು ಹಾಗೂ ಪೋಸೆಸಿವ್‌ನೆಸ್' ಎಂದು ಹೇಳಿದ್ದರು.
ಸಿಂಗಾಪೂರ್‌ನಲ್ಲಿ ಅನಾವರಣಗೊಂಡಿತು ರಣಧೀರ ಚೆಲುವೆ ಮೇಣದ ಪ್ರತಿಮೆ
ಇತ್ತೀಚಿಗೆ ನಟ ಶ್ರೀನಿವಾಸ್‌ಗೆ ಜೋಡಿಯಾಗಿ ಕಾಣಿಸಿಕೊಂಡ ಕಾಜಲ ಸಿನಿಮಾ, 'ಸೀತಾ' ಸಿನಿಮಾ ಬಾಕ್ಸ್ ಆಫೀಸ್ ಕೆಲೆಕ್ಷನ್ ಮುಟ್ಟುವುದರಲ್ಲಿ ವಿಫಲವಾಯ್ತು. ಸದ್ಯಕ್ಕೆ ಕಮಲ್ ಹಾಸನ್ ನಿರ್ದೇಶನದ 'ಇಂಡಿಯಾ-2' ಸಿನಿಮಾದಲ್ಲಿ ರಕುಲ್ ಪ್ರೀತ್ ಜೊತೆ ಅಭಿನಯಿಸಲಿದ್ದಾರೆ. ಇಬರಿಬ್ಬರು ಮೊದಲ ಬಾರಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಖುತ್ತಿರುವ ಕಾರಣ ಅಭಿಮಾನಿಗಳು ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
