ಬೆಂಗಳೂರು (ಫೆ. 05): ಸೌತ್ ಇಂಡಿಯನ್ ಮೋಸ್ಟ್ ಹ್ಯಾಪನಿಂಗ್ ನಟಿ ಕಾಜಲ್ ಅಗರ್‌ವಾಲ್ ಮೇಣದ ಪ್ರತಿಮೆ ಇಂದು ಸಿಂಗಾಪುರ್‌ನ ಮೇಡಂ ಟುಸಾಡ್ಸ್ ನಲ್ಲಿ ಅನಾವರಣಗೊಂಡಿದೆ. 

ಅಣ್ಣಾವ್ರ ಮೇಣದ ಪ್ರತಿಮೆಗೆ ಆಗ್ರಹಿಸಿದ ಹರಿಪ್ರಿಯಾ..!

ಸಿಂಗಾಪೂರ್‌ನಲ್ಲಿ ತನ್ನ ಪ್ರತಿಮೆಯನ್ನು ಅನಾವರಣಗೊಳಿಸಿ, ಲಂಡನ್‌ನ ಮೇಡಂ ಟುಸಾಡ್ಸ್  ಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡರು. 'ನನಗೆ 10-12 ವರ್ಷವಿದ್ದಾಗ ಲಂಡನ್‌ನ ಮೇಡಂ ಟುಸಾಡ್ಸ್ ಗೆ ಭೇಟಿ ನೀಡಿದ್ದೆ.  ಆಗ ಗಾಂಧಿ ಪ್ರತಿಮೆ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುತ್ತಿದ್ದೆ. ಆಗ ಇಲ್ಲಿರುವವರ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ನಾನು ಒಂದು ದಿನ ಇದೇ ರೀತಿ ಮೇಣದ ಪ್ರತಿಮೆಯಲ್ಲಿ ಕಂಗೊಳಿಸಬೇಕು ಎಂದು ಕನಸು ಕಾಣುತ್ತಿದ್ದೆ' ಎಂದು ಹೇಳಿದರು. 

 

ಮೇಣದ ಪ್ರತಿಮೆ ತಯಾರಿಯಲ್ಲಿ ಭಾಗಿಯಾದ ಪ್ರತಿಯೊಬ್ಬ ಟೆಕ್ನಿಷಿಯನ್ಸ್‌ಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಟೆಕ್ನಿಷಿಯನ್‌ಗಳು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಂಗ್!

ಕಾಜಲ್ ಅಗರ್‌ವಾಲ್ ತೆಲುಗು, ತಮಿಳು ಸಿನಿಮಾರಂಗದಲ್ಲಿ ಕೇಳಿ ಬರುವ ಮೊದಲ ಹೆಸರು. ' ಕ್ಯೂ ಹೋ ಗಯಾ ನಾ' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಮಗಧೀರ, ಆರ್ಯ 2, ಬೃಂದಾವನಂ, ಮಿಸ್ಟರ್ ಪರ್ಫೆಕ್ಟ್, ಸಿಂಗಂ, ದಢಾ ಹೆಸರನ್ನು ತಂದು ಕೊಟ್ಟಿತು. 

ಈ ಹಿಂದೆ ತೆಲುಗು ಸೂಪರ್ ಸ್ಟಾರ್‌ಗಳಾದ ಪ್ರಭಾಸ್, ಮಹೇಶ್‌ ಬಾಬು ಪ್ರತಿಮೆಗಳನ್ನು ಸಿಂಗಾಪೂರ್‌ನಲ್ಲಿ ಸ್ಥಾಪಿಸಲಾಗಿದೆ. 

"