ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 34 ಸಾವಿರ ಜನ ಕೊರೋನಾ ಸೋಂಕಿಗೊಳಗಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕೊರೋನಾ ಸೋಂಖಿತರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು ದಾಟಿದೆ.

ಉತ್ತರ ಪ್ರದೇಶ, ಆಂರ್ಧರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಜುಲೈ ಆರಂಭದ ನಂತರ ಕೊರೋನಾ ಪ್ರಕರಣ ಸಂಖ್ಯೆ ಬಹುತೇಕ ಎರಡು ಪಟ್ಟಿನಷ್ಟಾಗುತ್ತಿದೆ.

 

ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಸಿನಿಮಾ ಹಾಗೂ ಧಾರವಾಹಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಆದರೂ ಹಿರಿಯ ನಿರ್ಮಾಪಕರೂ, ನಟರೂ ಮನೆಯಲ್ಲಿ ಕುಳಿತಿದ್ದಾರೆ. ಆದರೆ ಸಣ್ಣ ಸಣ್ಣ ಸಣ್ಣ ಜಾಹೀರಾತು ಕಂಪನಿಗಳು ಚಿತ್ರೀಕರಣ ಆರಂಭಿಸಿದ್ದು, ರಿಸ್ಕ್ ತೆಗೆದುಕೊಂಡಿವೆ.

ನಟಿ ಕಾಜಲ್ ಅಗರ್ವಾಲ್ ಅವರೂ ಸಿನಿಮಾ ಸೆಟ್‌ಗೆ ಹೋದಲು ಬಯಸುತ್ತಿದ್ದಾರೆ. ಆದರೆ ಕೊರೋನಾ ಭಯದಿಂದ ಅವರ ತಂದೆ ಮಾತ್ರ ಮಗಳನ್ನು ಶೂಟ್‌ಗೆ ಹೋಗಲು ಬಿಡುತ್ತಿಲ್ಲ.

 

ಕೆಲವು ವಾರದ ಹಿಂದೆ ಶ್ರುತಿ ಹಾಸನ್, ರಾಹುಲ್ ಪ್ರೀತ್, ಪ್ರಿಯಾಮಣಿ ಫೋಟೋ ಶೂಟ್‌ಗಾಗಿ ಹೊರ ಬಂದಿದ್ದರು. ಇನ್ನೂ ಕೆಲವು ಪ್ರಮುಖ ನಟಿಯರು ಶೀಘ್ರದಲ್ಲೇ ಶೂಟ್‌ಗಾಗಿ ಹೊರ ಬರುವ ಪ್ಲಾನ್‌ನಲ್ಲಿದ್ದಾರೆ.

ಕಲೆವು ಜಾಹೀರಾತು ಕಂಪನಿಗಳು ಕಾಜಲ್ ಜೊತೆ ಪ್ರಾಜೆಕ್ಟ್ ಮಾಡಲು ಇಚ್ಛಿಸಿದ್ದು, ಮುಂಬೈನಲ್ಲಿ ಕೊರೋನಾ ಕಾಟ ಹೆಚ್ಚಿರುವುದರಿಂದ ಹೈದರಾಬಾದ್‌ನಲ್ಲಿ ಶೂಟ್‌ ಮಾಡಲು ಬಯಸಿದ್ದಾರೆ. ಆದರೆ ಕಾಜಲ್ ಅಗರ್ವಾಲ್ ಅಪ್ಪ ಮಾತ್ರ ಮಗಖನ್ನು ಹೊರಗೆ ಬಿಡ್ತಿಲ್ಲ.