ಮಹಾಮಾರಿ ಕೊರೋನಾ ವೈರಸ್‌ ಅಟ್ಟಹಾಸದ ನಡುವೆಯೂ ತೆಲುಗು- ತಮಿಳು ಚಿತ್ರರಂಗದಲ್ಲಿ ಅನೇಕ ಶುಭ ಕಾರ್ಯಗಳು ನಡೆಯುತ್ತಿದೆ.  ಇತ್ತೀಚಿಗೆ ಭೀಷ್ಮ ನಟ ನಿತಿತ್‌ ಮತ್ತು ಗೆಳತಿ ಶಾಲಿನಿ ಹೈದರಾಬಾದ್‌ನ ತಾಜ್‌ ಹೋಟೆಲ್‌ನಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟರು. ಇದಾದ ನಂತರ ಬಾಹುಬಲಿಯ ಬಲ್ಲಾಳ ದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ವಿವಾಹ ನೆರೆವೇರಿದೆ. ಖಾಸಗಿ ಸಮಾರಂಭವಾಗಿದ್ದ ಕಾರಣ ವರ್ಚುಯಲ್ ಕಾಲ್‌ ಮೂಲಕ ಗೆಳೆಯರು ಹಾಗೂ ಕುಟುಂಬಸ್ಥರು ಮದುವೆಯ ಕ್ಷಣಗಳನ್ನು ವೀಕ್ಷಿಸಿದರು. 

ನಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಪ್ರಭಾಸ್,ದೇವರಕೊಂಡ ಇಬ್ಬರೂ ಅಲ್ಲ ;ಮತ್ಯಾರು?

ಇದೇ ಸಮಯದಲ್ಲಿ ನಟಿ ನಿಹಾರಿಕಾ ಕೊನೆಡೆಲಾ ನಿಶ್ಚಿತಾರ್ಥ ಸಮಾರಂಭವೂ ನಡೆದಿದೆ. ಕೆಲವು ತಿಂಗಳ ಹಿಂದೆ ನಿಹಾರಿಕಾ ಹಾಗೂ ಉದ್ಯಮಿ ಚೈತನ್ಯ ಅವರನ್ನು ಮದುವೆಯಾಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಮುಂದಿನ ವರ್ಷ ವೈವಾಹಿಕ ಬದುಕಿಗೆ ಕಾಲಿಡುವುದಾಗಿಯೂ ಕೆಲ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೀಗ ಗೌಪ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಖಾಸಗಿ ಸಮಾರಂಭದಲ್ಲಿ ಕೆಲವೇ ಕೆಲವು ಆಪ್ತ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಮೆಗಾ ಸ್ಟಾರ್ ಚಿರಂಜೀವಿ, ರಾಮ್‌ ಚರಣ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸೇರಿ ಇಡೀ ಕುಟುಂಬದ ಸದಸ್ಯರು ಕಲರ್‌ಪುಲ್‌ ಆಗಿ ಅಲಂಕರಿಸಿಕೊಂಡು, ಮಿಂಚುತ್ತಿದ್ದರು. ನಟ ರಾಮ್‌ ಚರಣ್ ಪತ್ನಿ ಉಪಾಸನಾ ಮುದ್ದಾದ ಜೋಡಿಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ.

ದೇಶವೇ ಚೀನಾ ಪ್ರಾಡಕ್ಟ್ ನೀಷೇಧಿಸ್ತಿದ್ರೆ, ಚಿರು ಮಗಳು ಮಾತ್ರ 1+ ಫೋನ್ ಆ್ಯಡ್‌ನಲ್ಲಿ ಬ್ಯುಸಿ

'ನೀವಿಬ್ಬರು ಪರ್ಫೆಕ್ಟ್‌ ಮ್ಯಾಚ್‌. ನಿಮ್ಮ ಫ್ಯೂಚರ್‌ಗೆ ಆಲ್‌ ದಿ ಬೆಸ್ಟ್‌' ಎಂದು ಇಬ್ಬರನ್ನು ಟ್ಯಾಗ್‌ ಮಾಡಿ ಬರೆದುಕೊಂಡಿದ್ದಾರೆ. ನಿಹಾರಿಕಾ ಸಹೋದರ ವರುಣ್‌ 'ಇಂದು ನಡೆದ ನಿಶ್ಚಿತಾರ್ಥ. ನನ್ನ ಮುದ್ದು ತಂಗಿ ಎಂಗೇಜ್‌ ಆಗಿದ್ದಾಳೆ. ನಮ್ಮ ಕುಟುಂಬಕ್ಕೆ ಸ್ವಾಗತ ಭಾವ...' ಎಂದು ಪೋಸ್ಟ್‌ ಮಾಡಿದ್ದಾರೆ.

 

ಈಗೆ ಕೆಲವು ದಿನಗಳ ಹಿಂದೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರೊಂದಿಗೆ ನಿಹಾರಿಕಾ ಮದುವೆಯಾಗುತ್ತಾರೆಂಬ ಸುದ್ದಿ ಹರಡಿತ್ತು. ನಂತರ ಅದು ಅಲ್ಲಿಯೇ ತಣ್ಣಗೂ ಆಗಿತ್ತು. ಅಲ್ಲದೇ ಭಾರತ ಚೀನಾದ ಹಲವು ಉತ್ಪನ್ನಗಳನ್ನು ನಿಷೇಧಿಸಿದಾಗ,  ನಿಹಾರಿಕ ಚೀನಾ ಮೂಲದ ಒನ್ ಪ್ಲಸ್ ಮೊಬೈಲ್ ಫೋನನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡಿದ್ದರಿಂದ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದರು. ಲಾಕ್‌ಡೌನ್ ಆರಂಭವಾದ ಸಮಯದಲ್ಲಿಯೇ ಇವರ ಮನೆಯಲ್ಲಿ ಸಿಕ್ಕಾಪಟ್ಟೆ ಜನರು ಸೇರಿದ್ದರಿಂದ, ಆಗಲೇ ಏನೋ ಶುಭ ಸಮಾರಂಭವಿದೆ ಎಂದುಕೊಳ್ಳಲಾಗಿತ್ತು. ಆದರೆ, ದೊಡ್ಡ ಫ್ಯಾಮಿಲಿ, ಎಲ್ಲರೂ ಒಂದಾಗಿದ್ದರಿಂದ ವಿಪರೀತ ತರಕಾರಿ, ಸಾಮಾನುಗಳು ಬೇಕಾಗುತ್ತಿವೆ. ಅದಕ್ಕೆ ಇಷ್ಟು ಶಾಪಿಂಗ್ ಎಂದು ಹೇಳುವ ಮೂಲಕ ಹಲವು ಅನುಮಾನಗಳಿಗೆ ತೆರೆ ಎಳೆದಿದ್ದರು.