Asianet Suvarna News Asianet Suvarna News

'ಇಂದಿನ ಹೀರೋಯಿನ್ಸ್ ಹಣ ಗಳಿಸ್ತಾರೆ, ನಾವು ಗೌರವ ಗಳಿಸ್ತಿದ್ವಿ'; ಸುಹಾಸಿನಿ

ಇಂದಿನ ನಟಿಯರಿಗೂ, ತಮ್ಮ ಕಾಲದ ನಟಿಯರಿಗೂ ಇದ್ದ ಬಹು ದೊಡ್ಡ ವ್ಯತ್ಯಾಸವೇನೆಂಬುದನ್ನು ನಟಿ ಸುಹಾಸಿನಿ ಹೇಳಿದ್ದಾರೆ. ಕೇಳಿದರೆ ನೀವೂ ಅಹುದಹುದೆನ್ನುವಿರಿ.

Todays Actresses makes money we were earning respect Suhasini gives bold statement skr
Author
First Published Jan 3, 2024, 12:42 PM IST

'ಇಂದಿನ ತಲೆಮಾರಿನ ನಟಿಯರು ನಮಗಿಂತ ಹೆಚ್ಚು ಹಣ ದುಡಿಯುತ್ತಾರೆ. ಆದರೆ, ನಮಗೆ ಅವರಿಗಿಂತ ಹೆಚ್ಚು ಗೌರವ ಸಿಗುತ್ತಿತ್ತು. ಚಿತ್ರ ಕತೆಗಳಲ್ಲಿ ನಮ್ಮ ಪಾತ್ರಗಳಿಗೆ ಹೆಚ್ಚಿನ ಮೌಲ್ಯ ಮತ್ತು ತೂಕ ಇರುತ್ತಿತ್ತು'- ಹೀಗೊಂದು ಬೋಲ್ಡ್ ಸ್ಟೇಟ್‌ಮೆಂಟ್ ನೀಡಿದ್ದು ಚೆಂದದ ನಗುವಿನ ಚೆಲುವೆ ಸುಹಾಸಿನಿ.

ಹೌದಲ್ಲವೇ? ಸುಹಾಸಿನಿ, ಸರಿತಾ, ಗೀತಾ, ಕಲ್ಪನಾ, ಆರತಿ ಮುಂತಾದ ಅಂದಿನ ನಟಿಯರ ಸಿನಿಮಾಗಳಲ್ಲಿ ಹೀರೋಯಿನ್ ಎಂದರೆ ಕೇವಲ ಪಡ್ಡೆಗಳನ್ನು ಸೆಳೆವ ಮೇನಕೆಯರಲ್ಲ, ಹಾಟ್‌ನೆಸ್ ಅವರ ಮಾನದಂಡವಾಗಿರಲಿಲ್ಲ, ಹೀರೋ ಜೊತೆ ಕುಣಿಯೋದಷ್ಟೇ ಕೆಲಸವೂ ಅಲ್ಲ.. ಅವರ ಪಾತ್ರದಲ್ಲಿ ಹೆಣ್ಣಿನ ಮನಸ್ಸನ್ನು ಬಹಳ ಅರ್ಥಗರ್ಭಿತವಾಗಿ, ಆಳವಾಗಿ ಚಿತ್ರಿಸಲಾಗುತ್ತಿತ್ತು. ಹೀರೋಯಿನ್ ಎಂದರೆ ಆಕೆಯಲ್ಲಿ ಒಬ್ಬ ತಾಯಿಯಿರುತ್ತಿದ್ದಳು, ತಾಳ್ಮೆಯ ಪ್ರತಿರೂಪವಾಗಿರುತ್ತಿದ್ದಳು, ಮತ್ತೊಬ್ಬರನ್ನು ನೋಯಿಸದ ಸ್ವಭಾವ ತೋರಿಸಲಾಗುತ್ತಿತ್ತು, ಅವಳ ಮನೋಭಾವ ನೋಡುಗರನ್ನು ಬಹುವಾಗಿ ಪ್ರಭಾವಿಸುವಂತಿರುತ್ತಿತ್ತು, ಅವಳ ಸಹೃದಯಕ್ಕೆ ಸರಿಸಾಟಿ ಇರಲಿಲ್ಲ. ನೋಡಿದ ಹೆಣ್ಣುಮಕ್ಕಳು ತಾವೂ ಹೀಗಿರಬೇಕೆಂದುಕೊಳ್ಳುವಂಥ ಆದರ್ಶ ಮಹಿಳೆ ಅವರಾಗಿರುತ್ತಿದ್ದರು, ಪುರುಷರು ತಮಗಿಂತ ಪತ್ನಿ ದೊರೆಯಲೆಂದು ಪ್ರಾರ್ಥಿಸುವಂತೆ ಹೀರೋಯಿನ್‌ಗಳನ್ನು ಚಿತ್ರಿಸಲಾಗುತ್ತಿತ್ತು. 

ಮೂಗು ಸರಿಯಾಗಿಲ್ಲ, ಹಲ್ಲಿನ ಮೇಲೆ ಹಲ್ಲಿತ್ತು; ಆಗ ಮಾಲಾಶ್ರೀ ಎದುರಿಸಿದ ಟೀಕೆಗೆ ನೆಟ್ಟಿಗರು ಶಾಕ್!

ಆದರೆ, ಈಗ ಬಹುತೇಕ ಸಿನಿಮಾಗಳಲ್ಲಿ ಹೀರೋಯಿನ್‌ಗೆ ಇಂಥ ಯಾವ ಗುಣವೂ ಬೇಕಿಲ್ಲ. ಆಕೆ ಚೆನ್ನಾಗಿ ಕಾಣಿಸಿಕೊಂಡು, ಕುಣಿದು, ಒಂದೆರಡು ಡೈಲಾಗ್ ಹೇಳಿದರೆ ಸಾಕು. ಕ್ರೈಮೇ ಸಿನಿಮಾ ಜೀವಾಳ ಆಗಿರುವ ಕತೆಗಳಲ್ಲಂತೂ ಹೆಸರಿಗಷ್ಟೇ ಹೀರೋಯಿನ್. ಅದರಲ್ಲಿ ಏನಿದ್ದರೂ ಹೀರೋದೇ(ರೌಡಿ ಪಾತ್ರವಾದರೂ) ಆರ್ಭಟ.

ಇದನ್ನೆಲ್ಲ ಗಮನಿಸಿದ ಯಾರಾದರೂ ಸುಹಾಸಿನಿ ಮಾತನ್ನು ಅಲ್ಲಗಳೆಯಲಾರರು. ಬಹುತೇಕ ಹಿರಿಯ ನಟಿಯರು ಇಂಥ ವಿಷಯವನ್ನು ಬಾಯ್ಬಿಟ್ಟು ಹೇಳದಿರಬಹುದು. ಆದರೆ, ಇದು ಪ್ರತಿಯೊಬ್ಬರ ಮನದಾಳದ ಮಾತೂ ಹೌದು. 

ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ತಿಲ್ವಾ?: ವಿನಯ್​ ಜೊತೆ ಜಗಳಕ್ಕಿಳಿದ ಸಂಗೀತಾ

ಈ ಬಗ್ಗೆ ಸಿನಿಮಾ ಕಥೆ ಬರಹಗಾರರು, ನಿರ್ಮಾಪಕರು, ನಿರ್ದೇಶಕರು ಹೆಚ್ಚು ಯೋಚಿಸಬೇಕಿದೆ. ಹಳೆಯ ಚಿತ್ರಗಳ ಎಳೆಗಳನ್ನು ಮನಸ್ಸಿಗೆಳೆದುಕೊಂಡು ನಟಿಯರ ಪಾತ್ರ ಪೋಷಣೆ ಮಾಡಬೇಕಿದೆ. ನಟಿಯರು ಕೂಡಾ ತಮಗೆ ಅತ್ಯುತ್ತಮ ಪಾತ್ರ ಬೇಕೆಂದು ಡಿಮ್ಯಾಂಡ್ ಮಾಡಬೇಕಿದೆ. ಏಕೆಂದರೆ, ಸಿನಿಮಾ ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುವ ಶಕ್ತಿ ಹೊಂದಿದೆ. ಹಾಗಿರುವಾಗ ಎಲ್ಲ ಕೆಲಸದಂತೆಯೇ ಮಾಡಿದ ಕೆಲಸಕ್ಕೆ ಹಣ ಎಣಿಸಿಕೊಂಡು ಹೋಗುತ್ತೇನೆ ಎಂಬ ಮನೋಭಾವ ನಟಿಮಣಿಯರಲ್ಲಿ ಬರಕೂಡದು. ನಮಗೆ ಹಣ, ಹೆಸರು ಅಷ್ಟೇ ಅಲ್ಲ ಗೌರವವೂ ಬೇಕಿದೆ ಎಂಬ ಹಟಕ್ಕೆ ಅವರು ಬೀಳಬೇಕು. ಆಗ ಅಂಥದೇ ಪಾತ್ರಗಳ ಸೃಷ್ಟಿ ಸಾಧ್ಯವಾಗುತ್ತದೆ. 

ಗೌರವ ಹುಟ್ಟಿಸುವಂಥ ಪಾತ್ರಗಳಲ್ಲಿ ನಟಿಯರು ಕಂಡುಕೊಂಡಷ್ಟೂ ಅವರ ಗೌರವ ಹೆಚ್ಚಾಗುವುದಷ್ಟೇ ಅಲ್ಲ, ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವುದೂ ಹೆಚ್ಚುತ್ತದೆ. 


 

Follow Us:
Download App:
  • android
  • ios