Asianet Suvarna News Asianet Suvarna News

Tillotama Shome viral post: ಕಂಕುಳಲ್ಲಿ ಕೂದಲಿರ್ಬಾರದು, ಕತ್ತಲ್ಲಿ ಮೊಡವೆ ಇರ್ಬಾರ್ದು, ಏನ್ ಮೈಂಡ್‌ಸೆಟ್‌ ಗುರೂ..

ಹುಡುಗೀರನ್ನು ಗೋಳು ಹೊಯ್ಕೊಳ್ಳೋ, ಕೆಟ್ಟದಾಗಿ ಕಮೆಂಟ್‌ ಮಾಡುವ ನೆಟಿಜನ್ಸ್ ಸಂಖ್ಯೆ ಹೆಚ್ಚಾಗ್ತಿದೆ. 'ಸರ್' ಸಿನಿಮಾದ ಹುಡುಗಿ ತಿಲೋತ್ತಮಾ ಶೋಮ್ಸೂರ್ಯನ ಕಿರಣಕ್ಕೆ ಮುಖವೊಡ್ಡಿರುವ ಫೋಟೋ ಹಾಕಿದ್ರೆ, ಕಂಕುಳಲ್ಲಿ ಕೂದಲಿನ ಬಗ್ಗೆಯೇ ಜನ ಟ್ರೋಲ್ ಮಾಡ್ತಿದ್ದಾರೆ. ಏನ್ ಮೈಂಡ್‌ಸೆಟ್‌ ಗುರೂ ಇದು..

 

Tillotama shome viral post with armpit hair and getting response from netizens
Author
Bengaluru, First Published Jan 21, 2022, 6:09 PM IST

ನೆಟ್ ಫ್ಲಿಕ್ಸ್‌ (Netflix), ಪ್ರೈಮ್‌ (Amazon Prime),  ಹಾಟ್‌ಸ್ಟಾರ್‌ (Hot Star) ಗಳ ನಡುವೆ ಅಡ್ಡಾಡುವಾಗ ಈ ಫೇಸ್‌ಕಟ್‌ ನೋಡಿರಬಹುದು. ಗ್ರಾಚಾರ ಚೆನ್ನಾಗಿದ್ರೆ 'ಸರ್' ನಂಥಾ ಸಿನಿಮಾ ನೋಡಿ, 'ಏನ್ ಆಕ್ಟಿಂಗ್ ಗುರೂ' ಅಂತ ಪಟ ಪಟ ಕಣ್ಣು ಹೊಡ್ಕೊಂಡಿರಬಹುದು. ಬಾಲಿವುಡ್‌ನ (Bollywood) ಈ ನಟಿ ಸರ್ ಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ (Film fare) ಅವಾರ್ಡನ್ನೂ ತನ್ನ ಬಗಲಿಗೆ ಹಾಕಿಕೊಂಡವಳು. ಈ ಹುಡುಗಿಗೆ ಒಂದು ವಿಶಿಷ್ಟ ಅಭ್ಯಾಸ ಇದೆ. ಲೈಫನ್ನು ತನಗೆ ಬೇಕಾದ ಹಾಗೆ ಎನ್‌ಜಾಯ್ ಮಾಡೋದು, ತನಗೆ ಬೇಕಾದ ಹಾಗೆ ಬದುಕೋದು. ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಇಣುಕಿ ಬಂದರೆ ಇವರ ಅಭಿರುಚಿ ಎಂಥಾದ್ದು ಅನ್ನೋದು ಗೊತ್ತಾಗುತ್ತೆ.

ಅಂದಹಾಗೆ ಇದು ತಿಲೋತ್ತಮಾ ಶೋಮ್ (Tillotama shome) ಕಥೆ. ನಿನ್ನೆ ಸೋಷಿಯಲ್ (Social media) ಮೀಡಿಯಾದಲ್ಲೆಲ್ಲ ಈಕೆಯ ಕಂಕುಳಿನದೇ ಸುದ್ದಿ. ಅಲ್ಲಾ ಗುರೂ, ಹುಡುಗಿಯೊಬ್ಬಳು ಭಾರೀ ಖುಷಿಯಲ್ಲಿ ಸೂರ್ಯನಿಗೆ ಮುಖವೊಡ್ಡಿರುವ ಫೋಟೋ ಹಾಕಿದ್ರೆ ಈ ಪರಿ ಟ್ರೋಲ್‌ ಮಾಡೋದಾ. ತಿಲೋತ್ತಮಾ ಸೂರ್ಯನ ಬಿಸಿಲಿಗೆ ಮುಖವೊಡ್ಡುವ ಸಮಯ ತನ್ನೆರಡು ಕೈಗಳನ್ನು ಎತ್ತಿದ್ದಾಳೆ. ಆಗ ಕಂಕುಳ ಕೂದಲು ಕಂಡಿದೆ. ಜನ ಅವಳ ಮುಖ ನೋಡೋದು ಬಿಟ್ಟು ಕಂಕುಳು ನೋಡ್ಕೊಂಡು ಬಾಯಿಗೆ ಬಂದ ಹಾಗೆ ಮಾತಾಡೋಕೆ ಶುರು ಮಾಡಿದ್ದಾರೆ. ಇದಕ್ಕೇ ಕಾಯ್ತಿದ್ದ ನೆಟಿಜನ್ಸ್ ಭರ್ಜರಿಟ ಟ್ರೋಲ್ ಹರಿಯಬಿಟ್ಟು ಮಜಾ ನೋಡಿದ್ದಾರೆ. ತಿಲೋತ್ತಮ ಬಹಳ ಸ್ಟ್ರಾಂಗ್ ಹುಡುಗಿ, ಈ ಫೋಟೋ ಹಾಕುವಾಗಲೇ ನಾನಿರೋದೇ ಹೀಗೆ ಅನ್ನೋ ಸ್ಟೇಟ್‌ಮೆಂಟ್‌ಅನ್ನೂ ಹಾಕಿಬಿಟ್ಟಿದ್ಲು. ಆದರೆ ಅವಳು ಹೇಳಿದ ಉಳಿದೆಲ್ಲ ವಿಚಾರ ಬಿಟ್ಟು ಕಂಕುಳ ಕೂದಲಿನ ವಿಚಾರಕ್ಕೆ ಜನ ಈ ಪರಿ ಮುಗಿದುಬೀಳ್ತಾರೆ ಅಂತ ಪಾಪ ಆಕೆಗೂ ಗೊತ್ತಿರಲಿಲ್ಲ. 

Urfi Javed Pink Saree: ಕಟೌಟ್ ಬ್ಲೌಸ್, ಗುಲಾಬಿ ಬಣ್ಣದ ಸೀರೆಯಲ್ಲಿ ಉರ್ಫಿ

ಅಷ್ಟಕ್ಕೂ ತನ್ನ ಸ್ಟೇಟ್‌ಮೆಂಟ್‌ನಲ್ಲಿ ತಿಲೋತ್ತಮಾ ಹೇಳಿದ್ದು ಹೀಗೆ - 'ನಾನು ಬಹಳ ಸಲ ಸಾರಿ ಕೇಳುತ್ತೇನೆ. ಇನ್ನೊಬ್ಬರು ಸಾರಿ ಕೇಳ್ತಾರೆ ಅನ್ನೋ ನಿರೀಕ್ಷೆಯಲ್ಲಿರುವಾಗ ಅದು ಇನ್ನೂ ಹೆಚ್ಚಾಗಿರುತ್ತೆ. ಹೆಲೋ ಹೇಳುವಾಗ ಇರುವ ಹಾಗೆ ಇನ್ನೊಬ್ಬರೂ ಹೆಲೋ ಹೇಳ್ತಾರೆ ಅನ್ನೋ ನಿರೀಕ್ಷೆ ಇರುತ್ತಲ್ವಾ ಹಾಗೆ. ನಾನು ಏನಾದ್ರೂ ಒಳ್ಳೆಯದು ಮಾಡಿದ್ರೆ ಅದಕ್ಕೂ ಸಾರಿ ಕೇಳ್ತೀನಿ, ಯಾಕೆಂದರೆ ನಾನು ಇನ್ನೂ ಚೆನ್ನಾಗಿ ಆ ಒಳ್ಳೆಯ ಕೆಲಸ ಮಾಡಬಹುದಿತ್ತು ಅಂತ. ಮೌನದಲ್ಲಿ ಕೆಲವೊಮ್ಮೆ ಒಳಮಾತು ಹೊರಹೊಮ್ಮುತ್ತಿರುತ್ತದೆ. ನಾನಿಲ್ಲಿ ತೊಟ್ಟಿರುವ  ಟೀಶರ್ಟ್ ನ ಸಂದೇಶ ಕಡಿಮೆ ಪದಗಳಲ್ಲಿ, ಹೆಚ್ಚು ಅರ್ಥ ಹೊಮ್ಮಿಸೋಥರ ಇದೆ. ಓಹ್ ಮತ್ತು ನನ್ನ ಬಾಡಿ ಹೇರ್ ಬಗ್ಗೆ ಹೇಳಬೇಕಂದ್ರೆ ಅದ್ಕೆಲ್ಲ ನಾನು ಸಾರಿ ಕೇಳೋದಿಲ್ಲ. ನನಗಿಷ್ಟ ಬಂದಾಗ ಬಾಡಿ ಹೇರ್‌ ಹಾಗೇ ಬಿಟ್ಟಿರುತ್ತೇನೆ. ಹಾಗಂತ ಕೆಲವೊಮ್ಮೆ ವ್ಯಾಕ್ಸ್ ಮಾಡಿರ್ತೀನಿ. ಕೆಲವೊಮ್ಮೆ ವ್ಯಾಕ್ಸ್ ಮಾಡೋದಿಲ್ಲ. ಗುಡ್‌ ಡೇ!

 

 

Dhanush Divorce:'ಧನುಷ್-ಐಶ್ವರ್ಯಾಗೆ ಡಿವೋರ್ಸ್ ಆಗಿಲ್ಲ, ಗಂಡ-ಹೆಂಡ್ತಿ ಜಗಳ ಅಷ್ಟೆ'

ಎರಡು ದಿನಗಳ ಕೆಳಗೆ ಈಕೆ ಇಷ್ಟು ಪೋಸ್ಟ್ ಮಾಡಿ ಸುಮ್ಮನಾಗಿ ಬಿಟ್ಟಿದ್ದಾಳೆ. ತನ್ನ ಬಾಡಿ ಹೇರ್‌ ಬಗ್ಗೆ ಓಪನ್‌ ಆಗಿ ಮಾತನಾಡಿಕೊಳ್ಳುವಷ್ಟು, ತನಗನಿಸಿದ್ದನ್ನು ಕಾವ್ಯಾತ್ಮಕವಾಗಿ ಹೇಳುವಷ್ಟು ಜಾಣೆ, ಓಪನ್‌ ಮೈಂಡೆಡ್‌ ಹುಡುಗಿ ಈಕೆ. ಆದರೆ ನೆಟ್‌ ಜಗತ್ತಿನ ಕೆಲವು ಕ್ರಿಮಿ ಕೀಟಗಳಿಗೆ ಈ ಓಪನ್‌ನೆಸ್‌ ಇರಬೇಕಲ್ವಾ. ಅವರು ಕತ್ತಲಲ್ಲಿ, ಅಸಹ್ಯದ ಮೇಲೇ ಸುಳಿದಾಡೋ ನೊಣ, ಸೊಳ್ಳೆಗಳ ಹಾಗೆ ಇರ್ತಾರೆ. ಸದಾ ಅಸಹ್ಯವಾಗಿ ಮಾತಾಡುತ್ತಾ, ಅದನ್ನೇ ಉಸಿರಾಡೋ ಅವರಿಂದ ಒಳ್ಳೆಯ ಮಾತು ನಿರೀಕ್ಷಿಸೋದು ಕಷ್ಟ. ತಿಲೋತ್ತಮಾ ಅವರ ಈ ಘಟನೆ ಅದಕ್ಕೆ ಸಾಕ್ಷಿಯ ಥರ ಇದೆ. ಈ ನೆಟ್‌ ಕೀಟಗಳು ಹಿಂದೆ ಕೆಲವು ಸೆಲೆಬ್ರಿಟಿ ಹುಡುಗಿಯರ ದೇಹ ಮೇಲಿನ ಕೆಂಪು ಕಲೆಗಳ ಬಗ್ಗೆ, ಮೊಡವೆ ಬಗ್ಗೆಯೂ ಝೂಮ್‌ ಮಾಡಿ ಅಸಹ್ಯವಾಗಿ ಕಮೆಂಟ್‌ ಮಾಡಿದ್ರು. ಆದರೆ ತಿಲೋತ್ತಮಾ ಅವರಂಥ ವ್ಯಕ್ತಿಗಳಿಗೆ ಇದನ್ನು ಧೂಳಿನ ಕಣದಷ್ಟೇ ನಿರ್ಲಕ್ಷ್ಯ ಮಾಡೋದೂ ಗೊತ್ತು ಅದನ್ನವರು ಮಾಡಿದ್ದಾರೆ ಕೂಡ. ಎಂಬಲ್ಲಿಗೆ ತಿಲೋತ್ತಮಾ ಶೋಮ್‌ ಕಂಕುಳ ಕೂದಲಿನ ಕಥೆ ಮುಕ್ತಾಯವಾಗುತ್ತೆ.

ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ಡ್ರೀಮ್ ಪಾತ್ರ ಸಿಕ್ಕಿದೆ: Rukmini Vasanth

Follow Us:
Download App:
  • android
  • ios