Dhanush Divorce:'ಧನುಷ್-ಐಶ್ವರ್ಯಾಗೆ ಡಿವೋರ್ಸ್ ಆಗಿಲ್ಲ, ಗಂಡ-ಹೆಂಡ್ತಿ ಜಗಳ ಅಷ್ಟೆ'
- Dhanush Divroce: ಧನುಷ್ - ಐಶ್ವರ್ಯಾ ವಿಚ್ಚೇದನೆ ಆಗಿಲ್ವಾ ?
- ಇದು ಸಾಮಾನ್ಯ ಕುಟುಂಬ ಜಗಳ, ಅವರು ಡಿವೋರ್ಸ್ ಪಡೆದಿಲ್ಲ ಎಂದ ಧನುಷ್ ತಂದೆ
ಕಾಲಿವುಡ್ ನಟ ಧನುಷ್(Dhanush) ಹಾಗೂ ಸೂಪರ್‌ಸ್ಟಾರ್ ರಜನೀಕಾಂತ್ ಅವರ ಪುತ್ರಿ ಐಶ್ವರ್ಯಾ ರಜನೀಕಾಂತ್ ಅವರ ವಿಚ್ಚೇದನೆ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್. ಸೌತ್ ಜೋಡಿ 18 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಬೇರೆಯಾಗಿದ್ದಾರೆ. ಧನುಷ್ ಅವರು ಸ್ಟೇಟ್‌ಮೆಂಟ್ ಶೇರ್ ಮಾಡಿ ಈ ವಿಚಾರವನ್ನು ಹೇಳಿದ್ದು, ನಟನ ಅಭಿಮಾನಿಗಳು ಈ ದಿಢೀರ್ ಸುದ್ದಿಯಿಂದ ಆಘಾತಗೊಂಡಿದ್ದಾರೆ. ಆದರೆ ಈಗ ಧನುಷ್ ಅವರ ತಂದೆ ಅಚ್ಚರಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಡಿವೋರ್ಸ್ ಪಡೆದಿಲ್ಲ.ಇದು ಒಂದು ಕುಟುಂಬ ಕಲಹ ಅಷ್ಟೆ ಎಂದು ಹೇಳಿದ್ದಾರೆ.
ನಟ ಧನುಷ್ ಮತ್ತು ಪತ್ನಿ ಐಶ್ವರ್ಯ ಮದುವೆಯಾಗಿ 18 ವರ್ಷಗಳ ನಂತರ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದ ಕೆಲವೇ ದಿನಗಳಲ್ಲಿ, ಅವರ ತಂದೆ ಕಸ್ತೂರಿ ರಾಜಾ ಇಬ್ಬರೂ ವಿಚ್ಛೇದನದತ್ತ ಸಾಗುತ್ತಿದ್ದಾರೆ ಎನ್ನುವುದನ್ನು ನಿರಾಕರಿಸಿದ್ದಾರೆ. ಧನುಷ್ ಅವರ ತಂದೆ ಈ ಒಡಕನ್ನು ‘ಕೌಟುಂಬಿಕ ಕಲಹ’ ಎಂದು ಉಲ್ಲೇಖಿಸಿದ್ದಾರೆ. ಐಶ್ವರ್ಯ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು. ಧನುಷ್ ಹಾಗೂ ಐಶ್ವರ್ಯಾ 15 ವರ್ಷದ ಯಾತ್ರಾ ಮತ್ತು 11 ವರ್ಷದ ಲಿಂಗ ಅವರೊಂದಿಗೆ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದಾರೆ.
ವಿಚ್ಚೇದನೆಯಾದ್ರೂ ದ್ವೇಷ, ಕಿತ್ತಾಟವಿಲ್ಲ. ಇದು ನಿಜಕ್ಕೂ ಸಾಧ್ಯವಾ?
ಧನುಷ್ ಮತ್ತು ಐಶ್ವರ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಕಸ್ತೂರಿ ರಾಜಾ ಡೈಲಿಥಂಡಿ ತಿಳಿಸಿದ್ದಾರೆ. 'ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆದಿಲ್ಲ. ಭಿನ್ನಾಭಿಪ್ರಾಯದಿಂದ ಅವರ ನಡುವೆ ಜಗಳವಾಗಿದೆ. ಹಾಗಾಗಿ ಇದು ಮಾಮೂಲಿ ಕುಟುಂಬ ಜಗಳವಾಗಿದೆ. ಪ್ರಸ್ತುತ ಇಬ್ಬರೂ ಊರಿನಿಂದ ಹೊರಗುಳಿದಿದ್ದಾರೆ. ಹೈದರಾಬಾದ್‌ನಲ್ಲಿದ್ದಾರೆ, ನಾನು ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಸಲಹೆ ನೀಡಿದ್ದೇನೆ. ಅವರೂ ಕೂಡ ಮಾತನಾಡಿದ್ದಾರೆ ಎಂದಿದ್ದಾರೆ.
ಧನುಷ್ (Dhanush) ಮತ್ತು ಐಶ್ವರ್ಯಾ (Aishwarya ) ಅಧಿಕೃತವಾಗಿ (Divorce) ದೂರದೂರವಾಗಿದ್ದಾರೆ. ರಜನೀಕಾಂತ್ (Rajinikanth) ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್ ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ (Social Media) ಮೂಲಕ ತಿಳಿಸಿದ್ದಾರೆ.
ದಂಪತಿಗೆ ಇಬ್ಬರಿಗೂ ಎರಡು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷ ದ ದಾಂಪತ್ಯ ಪೂರೈಸಿದ್ದರು. 18 ವರ್ಷದಿಂದ ಇಬ್ಬರು ಅನ್ಯೂನ್ಯವಾಗಿದ್ದೇವು. . ಒಬ್ಬರಿಗೊಬ್ಬ ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ವಿ. ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ವಿ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
2021 ಡಿವೋರ್ಸ್ ವರ್ಷ: ಇಡೀ ದೇಶವೇ ಕೊರೋನಾ ಸೋಂಕಿನ (Covid19) ಬಗ್ಗೆ ಚಿಂತಿಸುತ್ತಿದ್ದರೆ, ಇತ್ತ ಚಿತ್ರರಂಗದ ತಾರೆಯರ ಜೀವನದಲ್ಲಿ ಸಣ್ಣ ಸಣ್ಣ ಬಿರುಕು ದೊಡ್ಡದಾಗಿ ವಿಚ್ಛೇದನ (Divorce) ಹಂತ ತಲುಪಿದೆ. ಈ ವರ್ಷ ಸಮಂತಾ (Samantha)- ನಾಗಚೈತನ್ಯ, ಹನಿ ಸಿಂಗ್ (Honey Singh) ಮತ್ತು ಶಾಲಿನಿ ಸಿಂಗ್, ಆಮೀರ್ ಖಾನ್ (Aamir Khan) ಮತ್ತು ಕಿರಣ್, ಕೀರ್ತಿ ಮತ್ತು ಸಾಹಿಲ್ ಕಳೆದ ವರ್ಷ ದೂರವಾಗಿದ್ದರು. ಸಮಂತಾ ಮತ್ತು ನಾಗಚೈತನ್ಯ ವಿಚಾರ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗಿತ್ತು.
ದಕ್ಷಿಣ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು 2004 ರಲ್ಲಿ ಧನುಷ್ ವಿವಾಹವಾದರು. ಅವರ ಮದುವೆಯ ಸಮಯದಲ್ಲಿ ಧನುಷ್ 21 ಮತ್ತು ಐಶ್ವರ್ಯ 23 ವರ್ಷ ವಯಸ್ಸಿನವರಾಗಿದ್ದರು. ಮಾಧ್ಯಮಗಳಲ್ಲಿ ಹರಡಿದ ವದಂತಿಗಳಿಂದಾಗಿ ಇಬ್ಬರೂ ತರಾತುರಿಯಲ್ಲಿ ಮದುವೆಯಾಗಬೇಕಾಯಿತು.