Asianet Suvarna News

ಗೂಬೆ, ಕೋತಿ, ಬಾವಲಿಗಳನ್ನೆಲ್ಲ ಮನೇಲಿಟ್ಟು ಸಾಕ್ತಾರೆ ಈ ಕೆಜಿಎಫ್‌ 2 ನಟಿ!

ಸೆಲೆಬ್ರಿಟಿಗಳೆಂದರೆ ಬರೀ ಐಷಾರಾಮಿ ಲೈಪು, ಅವರು ಬರೀ ಲಕ್ಸುರಿಯಲ್ಲೇ ಮುಳುಗಿರ್ತಾರೆ ಅನ್ನೋದಕ್ಕೆ ಈ ನಟಿ ಅಪವಾದ. ಮನೇಲಿ ಗೂಬೆ, ಬಾವಲಿಗಳನ್ನೆಲ್ಲ ರಕ್ಷಿಸಿ ಸಾಕ್ತಾರೆ. ಕೆಜಿಎಫ್‌ 2ನ ಈ ಪ್ರಸಿದ್ಧ ನಟಿ ಯಾರು ಗೊತ್ತಾ?

 

This KGF actress pets ow, monkey bats in her home
Author
Bengaluru, First Published Jul 19, 2021, 2:02 PM IST
  • Facebook
  • Twitter
  • Whatsapp

ಈ ನಟಿ ಬೇರೆ ಸೆಲೆಬ್ರೆಟಿಗಳಿಗಿಂತ ಕೊಂಚ ಭಿನ್ನ. ಬೇರೆ ಸೆಲೆಬ್ರಿಟಿಗಳು, ರೆಸಾರ್ಟ್, ಶಾಪಿಂಗ್‌ ಅಂತೆಲ್ಲ ಸುತ್ತಾಡುತ್ತಿದ್ದರೆ ಈಕೆ ಸದಾ ಕಾಡು, ಕಾಡುಪ್ರಾಣಿಗಳ ನಡುವೆ ಇರುತ್ತಾರೆ. ಸಾವು ಬದುಕಿನ ನಡುವೆ ಹೋರಾಡುವ ಪ್ರಾಣಿಗಳನ್ನು ರಕ್ಷಿಸಿ ತಂದು ಮನೆಯಲ್ಲೇ ಇಟ್ಟು ಸಾಕ್ತಾರೆ. ಇದು ಈ ಕ್ಷಣಕ್ಕೆ ಹುಟ್ಟಿದ ಸಿಂಪಥಿ ಅಲ್ಲ, ಮೊದಲಿಂದಲೂ ಅವರ "ನೀಲಯ' ಮನೆ ಅನೇಕ ಸಂಕಷ್ಟದಲ್ಲಿರುವ ಕಾಡುಪ್ರಾಣಿಗಳಿಗೆ ಮನೆಯಾಗಿದೆ. ಈಗ ಆ ಸೆಲೆಬ್ರಿಟಿ ಯಾರು, ಅವರಿಗ್ಯಾಕೆ ಇಂಥಾ ಅಭ್ಯಾಸ ಅಂತ ತಿಳ್ಕೊಳ್ಳೋಣ.
ನೀವು ಕೆಜಿಎಫ್ ಚಾಪ್ಟರ್‌ 2 ಸಿನಿಮಾದ ಟೀಸರ್‌ ನೋಡಿದರೆ ಅದರಲ್ಲೊಬ್ಬ ದಿಟ್ಟ ನಾಯಕಿ ಕಾಣಿಸುತ್ತಾರೆ. 'ದ ಲೇಡಿ ಹು ಇಶ್ಯೂಸ್‌ ದ ಡೆತ್‌ ವಾರೆಂಟ್‌ ಹ್ಯಾಸ್‌ ಅರೈವ್ಡ್‌' ಅಂತ ಆಕೆಯನ್ನು ಸ್ವಾಗತಿಸಿದ್ದು ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌. ಆಕೆ ಮತ್ಯಾರೂ ಅಲ್ಲ, ಕೆಜಿಎಫ್‌ 2ನ ರಶ್ಮಿಕಾ ಸೆನ್, ಒಂದು ಕಾಲದಲ್ಲಿ ಮಸ್ತ್‌ ಮಸ್ತ್ ಹುಡುಗಿಯಾಗಿ ಹುಡುಗರ ಎದೆಯಲ್ಲಿ ಧೂಳೆಬ್ಬಿಸಿದ ನಟಿ ರವೀನಾ ಟಂಡನ್‌. 

 ಅವರೀಗ ನಟಿಯೂ, ಪ್ರಾಣಿ ಸಂರಕ್ಷಕಿಯೂ ಆಗಿದ್ದಾರೆ. ಅವರ ಮನೆ ಹೆಸರು "ನೀಲಯ'. ನಮ್ಮನೆಯೀಗ ಪ್ರಾಣಿ ಸಂರಕ್ಷಣಾ ಕೇಂದ್ರವೂ ಆಗಿದೆ ಎಂದು ಜೋಕ್‌ ಮಾಡಿದ್ದಾರೆ ರವೀನಾ. ಮೂರು ಗೂಬೆಗಳು ರವೀನಾ ಟಂಡನ್‌ ಮನೆಯಲ್ಲಿವೆ. ಇವೆಲ್ಲ ಗಾಯಗೊಂಡು ಬಿದ್ದವು. ಅವನ್ನು ಮನೆಗೆ ತಂದು ಕಾಳಜಿಯಿಂದ ಆರೈಕೆ ಮಾಡಿದ್ದರ ಫಲ ಅವೀಗ ಹುಷಾರಾಗಿವೆ. ಕೋತಿಮರಿಯನ್ನೂ ಮನೆಗೆ ತಂದು ಆರೈಕೆ ಮಾಡಿದ್ದಾರೆ. ಅಷ್ಟೇ ಅಲ್ಲ, ಒಂದು ಬಾವಲಿ ಮರಿಯೂ ಗಾಯಗೊಂಡದ್ದನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. ಹಲವಾರು ಪಾರಿವಾಳಗಳಿವೆ. ಬೆಕ್ಕಿನ ಮರಿಗಳಿವೆ. 'ನಮ್ಮಲ್ಲಿರುವ ಗೂಬೆ ಮರಿಗಳು ಈಗ ಹಾರಾಡುವಷ್ಟು ಶಕ್ತಿ ತುಂಬಿಕೊಂಡಿವೆ.

ಸಮಂತಾ ಅಕ್ಕಿನೇನಿ ಸೋಲಿಸಿದ ಫ್ಯಾನ್ಸ್‌ ಫೇವರೇಟ್‌ ರಶ್ಮಿಕಾ ಮಂದಣ್ಣ!
 

ಕೋತಿ ಮರಿ ಕಾಂಪಾಂಡ್‌ನಲ್ಲಿರುವ ಮರದಲ್ಲಿ ಜೀಕುವಷ್ಟು ಆರಾಮಾಗಿದೆ. ಈ ಕೋತಿಮರಿಯನ್ನು ಯಾರೋ ಅಕ್ರಮವಾಗಿ ಸಾಕಲು ಮುಂದಾಗಿದ್ದರು. ಅದನ್ನು ಸಣ್ಣ ಗೂಡೊಳಗೆ ಬಹಳ ಕಾಲ ಇಟ್ಟ ಪರಿಣಾಮ ಬೆನ್ನುಮೂಳೆಗೆ ಘಾಸಿಯಾಗಿದೆ. ಆದರೂ ಅದು ಸೆರೆಯಿಂದ ತಪ್ಪಿಸಿಕೊಂಡು ಬಂದು ಅದು ಆ ಬಂಧನದಿಂದ ತಪ್ಪಿಸಿಕೊಂಡು ನಮ್ಮನೆ ಬಾಗಿಲ ಮುಂದೆ ಬಿದ್ದಿತ್ತು. ಅದಕ್ಕೆ ಟ್ರೀಟ್‌ಮೆಂಟ್ ಕೊಡಿಸಿದ್ದೇವೆ. ಇನ್ನು ಈ ಬಾವಲಿ ಮರಿ ಗಾಯಗೊಂಡು ಟೆರೇಸ್ ಮೇಲೆ ಬಿದ್ದಿತ್ತು. ಅದರ ರಕ್ಷಣೆ ಮಾಡಲಾಗಿದೆ. ಇದಕ್ಕೆ ಪೇಟಾ ಇಂಡಿಯಾದಿಂದ ಸಹಕಾರ ಸಿಕ್ಕಿದೆ' ಅಂತ ರವೀನಾ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 
 


ಇಷ್ಟೇ ಅಲ್ಲ, ರವೀನಾ ಟಂಡನ್‌ ಮನೆ ಒಂದು ಸಣ್ಣ ಪ್ರಾಣಿ ಸಂಗ್ರಹಾಲಯದ ಹಾಗೇ ಇದೆ. ಅವರ ಮಕ್ಕಳಿಗೂ ಪ್ರಾಣಿಪ್ರೀತಿ. ಇಲ್ಲಿರುವ ಪ್ರಾಣಿಗಳ ಜೊತೆಗೆ ಮಕ್ಕಳೂ ಆಟವಾಡುತ್ತಾರೆ. ಮುದ್ದು ಮಾಡುತ್ತಾರೆ. 

ಸೆಕ್ಸ್‌ಗಾಗಿ ಆಹಾರ ಬಿಡ್ತೀನಿ ಎಂದ ಅರ್ಜುನ್ ಕಪೂರ್


ಇದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. "ಇದೇ ನಿಜವಾದ ಬ್ಯೂಟಿ. ಹೊರಗಿನ ಕೃತಕ ಸೌಂದರ್ಯವರ್ಧಕಗಳಲ್ಲಿಲ್ಲ ಸೌಂದರ್ಯ ಇಂಥಾ ಮಾನವೀಯ ಕಾರ್ಯಗಳಿಂದ ಬರುತ್ತದೆ' ಎಂದು ಜನ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ, ಭಗವಂತ ನಿಮಗೆ ಒಳಿತನ್ನು ಮಾಡಲಿ ಅಂತ ಕೆಲವರು ಹಾರೈಸಿದರೆ, ಇನ್ನೂ ಕೆಲವರು ಪ್ರಾಣಿ ಹಿಂಸೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ನಿಮ್ಮಂಥಾ ಪ್ರಾಣಿಪ್ರಿಯರ ಸಂಖ್ಯೆ ಹೆಚ್ಚಬೇಕು ಎಂದಿದ್ದಾರೆ. 
ರವೀನಾ ಟಂಡನ್‌ ಅವರದು ಕೆಜಿಎಫ್‌ 2ನಲ್ಲಿ ಕೊಂಚ ನೆಗೆಟಿವ್‌ ಶೇಡ್‌ ಇರುವ ಪಾತ್ರ. ಆದರೆ ರಿಯಲ್‌ ಲೈಫ್‌ನಲ್ಲಿ ಅವರು ಮಾನವೀಯತೆಯ ಮೂಲಕ ನಿಜ ನಾಯಕಿಯಾಗಿದ್ದಾರೆ. ಅವರ ಇಂಥಾ ಮಾನವೀಯ ಕಾರ್ಯಗಳನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ದಿದೆ. 

ಶೀಘ್ರದಲ್ಲೇ ಕತ್ರೀನಾ-ವಿಕ್ಕಿ ಮದುವೆ: ಹಿಂಟ್ ಕೊಟ್ಟಿದ್ದು ಸಲ್ಮಾನ್ ಡಿಸೈನರ್

Follow Us:
Download App:
  • android
  • ios