ಸೆನ್ಸಾರ್​ ಬೋರ್ಡ್​ ಕಿತ್ತು ಹಾಕಿದ್ದ 'ಶೋಲೆ'ಯ ಈ ದೃಶ್ಯ 50 ವರ್ಷಗಳ ಬಳಿಕ ಈಗ ವೈರಲ್​! ಏನಿದು ಸೀನ್​ ನೋಡಿ

ಸೆನ್ಸಾರ್​ ಬೋರ್ಡ್​ ಕಿತ್ತು ಹಾಕಿದ್ದ 'ಶೋಲೆ' ಸಿನಿಮಾದ ಈ ದೃಶ್ಯ 50 ವರ್ಷಗಳ ಬಳಿಕ ಈಗ ವೈರಲ್​ ಆಗಿದೆ. ಏನಿದು ಸೀನ್​ ನೋಡಿ...
 

This Deleted Scene From Sholay Cut By The Censor Board Has Resurfaced After 50 Years suc

1975ರ ಆಗಸ್ಟ್​ 15ರಂದು ಬಿಡುಗಡೆಯಾದ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಟೈಮ್‌ಲೆಸ್ ಬ್ಲಾಕ್‌ಬಸ್ಟರ್ ಶೋಲೆ ಬಿಡುಗಡೆಯಾಗಿ 50 ವರ್ಷಗಳಾಗುತ್ತಾ ಬಂದಿದೆ. ಆದರೆ ಈ ಚಿತ್ರ ಇಂದಿಗೂ ಹಚ್ಚ ಹಸಿರಾಗಿಯೇ ಉಳಿದಿದೆ.ಈ ಚಿತ್ರವು ಹಲವು ಅಳಿಸಲಾಗದ ದಾಖಲೆಗಳನ್ನು ಬರೆದಿದೆ. ಈ ಚಿತ್ರಕ್ಕೂ ಕರ್ನಾಟಕಕ್ಕೂ ನಂಟಿದೆ. ಅದೇನೆಂದರೆ, ಈ ಚಿತ್ರದಲ್ಲಿನ ಕಾಲ್ಪನಿಕ ಗ್ರಾಮ ರಾಮಘಡ್​ನ ನಿರ್ಮಾಣ ಸಿನಿಮಾದ ಚಿತ್ರೀಕರಣ ನಡೆದಿದ್ದು  ರಾಮನಗರದಲ್ಲಿ. ಗಬ್ಬರ್ ಸಿಂಗ್​ನ ದೃಶ್ಯಗಳ ಚಿತ್ರೀಕರಣ ನಡೆದ ಈ ಬೆಟ್ಟ ಇವತ್ತಿಗೂ ಶೋಲೆ ಬೆಟ್ಟ ಎಂದೇ ಫೇಮಸ್​ ಆಗಿದೆ.  

ಈ ಚಿತ್ರ ಬಿಡುಗಡೆಯಾಗಿ 50 ವರ್ಷಗಳ ಬಳಿಕ, ಅಂದು ಸೆನ್ಸಾರ್​ ಬೋರ್ಡ್​ನಿಂದ ಕಿತ್ತು ಹಾಕಲಾಗಿದ್ದ ಒಂದು ದೃಶ್ಯ ಇದೀಗ ವೈರಲ್​ ಆಗಿದೆ. ಆ ದೃಶ್ಯ  ಠಾಕೂರ್ ಗಬ್ಬರ್ ಸಿಂಗ್ ಅನ್ನು ಕೊಲ್ಲುವಂತೆ ಚಿತ್ರೀಕರಿಸಲಾಗಿತ್ತು, ಆದರೆ ಸೆನ್ಸಾರ್ ಬೋರ್ಡ್​ನವರ ಸಲಹೆ ಮೇರೆಗೆ ಮತ್ತೊಮ್ಮೆ ಕ್ಲೈಮ್ಯಾಕ್ಸ್ ಚಿತ್ರೀಕರಿಸಿ ಗಬ್ಬರ್ ಸಿಂಗ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ದೃಶ್ಯ ಬದಲಾಯಿಸಲಾಗಿಯ್ತು. ಇದು ಅತ್ಯಂತ ಕ್ರೂರತ್ವವನ್ನು ಬಿಂಬಿಸುತ್ತದೆ ಎನ್ನುವ ಕಾರಣಕ್ಕೆ ಆಗ ಇದನ್ನು ಡಿಲೀಟ್​ ಮಾಡಲು ಸೆನ್ಸಾರ್​ ಮಂಡಳಿ ಸಲಹೆ ಇತ್ತಿತ್ತು. ಆದರೆ ಇಂದು ಕೆಲವು ಸಿನಿಮಾಗಳು ಮೊದಲಿನಿಂದ ಕೊನೆಯವರೆಗೂ ಇಂಥ ಕ್ರೂರತ್ವವನ್ನೇ ಬಿಂಬಿಸಿ ಬ್ಲಾಕ್​ ಬಸ್ಟರ್​ ಆಗುತ್ತಿರುವುದು ಮಾತ್ರ ಸೋಜಿಗ. ಅದೇನೇ ಇರಲಿ. ಇದೀಗ ಶೋಲೆಯ ಈ ಚಿತ್ರಗಳು ವೈರಲ್​ ಆಗಿವೆ. 

ಮದ್ಯ, ಹೆಣ್ಣಿನ ವಿಷ್ಯದಲ್ಲಿ ರಾಮಗೋಪಾಲ್ ವರ್ಮಾ ಹೊಸ ವರ್ಷದ ರೆಸಲ್ಯೂಷನ್​ ಕೇಳಿ ಸಿನಿ ಇಂಡಸ್ಟ್ರಿ ಶಾಕ್!
 
ಬಿಡುಗಡೆಯಾದ 50 ವರ್ಷಗಳ ನಂತರವೂ ಹೆಚ್ಚು ಪ್ರೀತಿಸಲ್ಪಟ್ಟಿರುವ ಶೋಲೆ  ಥಿಯೇಟರ್‌ಗಳಲ್ಲಿ  ಮರು-ಬಿಡುಗಡೆಯಾಗಿದ್ದು,  ಜನರನ್ನು ಸೆಳೆಯುತ್ತಲೇ ಇದೆ.  ಅದರ ಆಕರ್ಷಕ ಕಥೆಯು ಹೃದಯಗಳನ್ನು ಗೆದ್ದಿದೆ. ಪ್ರೇಕ್ಷಕರನ್ನು ಜೀವಮಾನದ ಅಭಿಮಾನಿಗಳಾಗಿ ಪರಿವರ್ತಿಸಿತು.  'ಓಲ್ಡ್ ಈಸ್ ಗೋಲ್ಡ್' ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯು ಇತ್ತೀಚೆಗೆ ಅಂತಹ ಅಳಿಸಲಾದ ದೃಶ್ಯದ ಫೋಟೋವನ್ನು ಹಂಚಿಕೊಂಡಿದೆ. ಈ ದೃಶ್ಯದಲ್ಲಿ ಅಮ್ಜದ್ ಖಾನ್ ನಿರ್ವಹಿಸಿದ ಗಬ್ಬರ್ ಸಿಂಗ್​ ಪಾತ್ರವು, ಸಚಿನ್ ಪಿಲ್ಗಾಂವ್ಕರ್ ಪಾತ್ರದ ಅಹ್ಮದ್ ಅವರನ್ನು ಕೂದಲಿನಿಂದ ಎಳೆಯುವ ದೃಶ್ಯ ಇದಾಗಿದೆ. ಆ ಸಂದರ್ಭದಲ್ಲಿ ಅವರನ್ನು ಡಕಾಯಿತರ ದಂಡು ಸುತ್ತುವರೆದಿರುವುದನ್ನು ನೋಡಬಹುದು. ಅತಿಯಾದ ಹಿಂಸೆ ಮತ್ತು ಗಬ್ಬರ್‌ನ ಕ್ರೂರ ಚಿತ್ರಣದಿಂದಾಗಿ ಸೆನ್ಸಾರ್ ಮಂಡಳಿಯು ಈ ದೃಶ್ಯವನ್ನು ತೆಗೆದುಹಾಕಿದ್ದು, ನಂತರ ದೃಶ್ಯವನ್ನು ಬದಲಾಯಿಸಲಾಗಿತ್ತು. 

ಇನ್ನು ಈ ಚಿತ್ರ ಹಲವು ದಾಖಲೆಗಳನ್ನು ಬರೆದಿದೆ.  2 ವರ್ಷ ಚಿತ್ರೀಕರಣ ನಡೆದ ಈ ಸಿನಿಮಾ 70 ಎಂಎಂನಲ್ಲಿ ಚಿತ್ರೀಕರಣ ಮಾಡಿದ ಭಾರತದ ಮೊದಲ ಸಿನಿಮಾ ಎನಿಸಿಕೊಂಡಿದೆ.  25 ವಾರಗಳ ಸತತ ಪ್ರದರ್ಶನ ಕಂಡ ಭಾರತದ ಮೊದಲ ಸಿನಿಮಾ ಎಂಬ ಖ್ಯಾತಿಯೂ ಇದಕ್ಕಿದೆ. ರಾಷ್ಟ್ರಮಟ್ಟದ ಮಾತ್ರವಲ್ಲದೇ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಮುಡಿಲಿಗೇರಿಸಿಕೊಂಡಿರುವ  ‘ಶೋಲೆ’, ಮಿಲೇನಿಯಮ್​ನ ಅತ್ಯುತ್ತಮ ಸಿನಿಮಾಗಳು ಎಂಬ ಬಿಬಿಸಿ ತಯಾರಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಮಾತ್ರವಲ್ಲದೇ, ಸಿನಿ ರಂಗದ ಹಲವು ದಾಖಲೆಗಳನ್ನು ಮುರಿದಿದೆ.  

ರಿಷಬ್​ ಶೆಟ್ಟಿ ಟ್ವೀಟ್​ಗೆ ರಶ್ಮಿಕಾ ಮಂದಣ್ಣ ಫ್ಯಾನ್ಸ್​ ಕಿಡಿಕಿಡಿ: ಜಾಲತಾಣದಲ್ಲಿ ಪರ-ವಿರೋಧಗಳ ಬಿಸಿಬಿಸಿ ಚರ್ಚೆ!

 

This Deleted Scene From Sholay Cut By The Censor Board Has Resurfaced After 50 Years suc

Latest Videos
Follow Us:
Download App:
  • android
  • ios