Asianet Suvarna News Asianet Suvarna News

ಹಿಂದೂ ಮಹಾರಾಜನನ್ನು ಮದುವೆಯಾದ ಬಾಲಿವುಡ್‌ನ ಮುಸ್ಲಿಂ ನಟಿ ದೆವ್ವವಾಗಿ ಅಲೆದಾಡುತ್ತಿದ್ದಾಳಂತೆ!

ಬಾಲಿವುಡ್ ನಟಿ ಜುಬೈದಾ ಬೇಗಂ ಮತ್ತು ಜೋಧ್‌ಪುರದ ಮಹಾರಾಜ ಹನ್ವಂತ್ ಸಿಂಗ್ ಅವರ ದುರಂತ ಪ್ರೇಮಕಥೆ ಮತ್ತು ನಿಗೂಢ ಸಾವಿನ ಕುರಿತಾದ ಒಂದು ವಿಚಿತ್ರ ಕಥೆ. ಉಮೈದ್ ಭವನ ಅರಮನೆಯಲ್ಲಿ ಜುಬೈದಾಳ ಆತ್ಮ ಇನ್ನೂ ಸುಳಿದಾಡುತ್ತಿದೆ ಎಂಬ ನಂಬಿಕೆ ಇದೆ.

This bollywood actress was married a king but tragedy strucked both of them bni
Author
First Published Oct 18, 2024, 8:06 PM IST | Last Updated Oct 18, 2024, 8:06 PM IST

ಇದೊಂದು ವಿಚಿತ್ರ ಕಥೆ. ಬಾಲಿವುಡ್‌ನಲ್ಲಿ ಎಂಥ ಆಕಸ್ಮಿಕಗಳು, ವಿಲಕ್ಷಣ ಸಂಗತಿಗಳು ನಡೆಯುತ್ತವೆ ಎಂಬುದಕ್ಕೆ ಉದಾಹರಣೆ ಕೊಡುವುದಾದರೆ ಇದನ್ನು ಕೊಡಬಹುದು. ಈಕೆಯ ಕಥೆ ದುರಂತ. ಇವಳ ಮಗನ ಮಗನ ಬದುಕನ್ನೂ ದುರಂತ ಹಿಂಬಾಲಿಸಿತು. ಈಕೆಯ ಆತ್ಮ ಈಗಲೂ ಜೋಧ್‌ಪುರದ ಉಮೈದ್ ಭವನ ಅರಮನೆಯಲ್ಲಿ ಸುತ್ತಾಡುತ್ತಿದೆ ಎಂದು ಜನ ನಂಬುತ್ತಾರೆ. ಅಲ್ಲಿ ಉಳಿದಕೊಂಡವರಿಗೆ ವಿಚಿತ್ರ ಅನುಭವಗಳು ಆಗಿವೆಯಂತೆ.

ಇವಳ ಹೆಸರು ಜುಬೈದಾ ಬೇಗಂ. ಈಕೆ ಬೊಹ್ರಾ ಮುಸ್ಲಿಂ ಉದ್ಯಮಿ ಖಾಸೆಭಾಯ್ ಮೆಹ್ತಾ ಅವರ ಪುತ್ರಿ. ತಾಯಿ ಫೈಜಾ ಬಾಯಿ. ನಟಿ  ಮತ್ತು ಬಾಂಬೆಯಲ್ಲಿ ಗಾಯಕಿಯಾಗಿ ಹೆಸರು ಮಾಡಿದವಳು. ಜುಬೈದಾಳ ಖ್ಯಾತಿಯ ಜೊತೆಗೆ ಆಕೆಯ ಪ್ರೇಮ ಪ್ರಕರಣ ಹಾಗೂ ದುರಂತವೂ ಕುಖ್ಯಾತವಾಗಿದೆ. ಪ್ರೇಮ ಆದದ್ದು ಆಗಿನ ಜೋಧ್‌ಪುರ ಮಹಾರಾಜ ಹನ್ವಂತ್ ಸಿಂಗ್ ಜೊತೆಗೆ. ಇಬ್ಬರೂ ಒಟ್ಟಿಗೇ ಅಪಘಾತದಲ್ಲಿ ಸಾವನ್ನಪ್ಪಿದ್ದು ಆಕಸ್ಮಿಕವಲ್ಲ, ಪೂರ್ವಯೋಜಿತ ಕೊಲೆ ಅನ್ನುವವರು ತುಂಬ ಮಂದಿ ಇದ್ದಾರೆ. ಆದರೆ ಅದು ನಿಗೂಢತೆಯ ತೆರೆಯನ್ನು ಸರಿಸಿಲ್ಲ. 2001ರಲ್ಲಿ, ಜುಬೈದಾಳ ಮಗ ಖಾಲಿದ್ ಮೊಹಮ್ಮದ್, ತನ್ನ ತಾಯಿಯ ಬಗ್ಗೆ ಒಂದು ಚಲನಚಿತ್ರ ನಿರ್ಮಿಸಿದ. ಅದರಲ್ಲಿ ತಾಯಿಯ ಸಾವು ಮತ್ತು ಅದರ ವಿವಿಧ ಹಿನ್ನೆಲೆಗಳನ್ನು ತಂದ. 

ಇಂದಿಗೂ ಜುಬೈದಾ ಮತ್ತು ಆಕೆಯ ಗಂಡನ ಸಾವಿನ ರಹಸ್ಯ ಜೋಧ್‌ಪುರದ ಉಮೈದ್ ಭವನದ ಅರಮನೆಯ ಗೋಡೆಗಳ ನಡುವೆ ಹಾಗೇ ಉಳಿದಿದೆ. ಆಕೆಯ ಆತ್ಮ ರಾಜಮನೆತನವನ್ನು ಕಾಡುತ್ತಿದೆ ಎಂದು ಕೆಲವರು ನಂಬುತ್ತಾರೆ. ಇಂದಿಗೂ ಅವಳ ಉಪಸ್ಥಿತಿಯನ್ನು ಗ್ರಹಿಸುವವರಿದ್ದಾರೆ. ಜುಬೈದಾಳ ತಂದೆ ಅವಳು ನಟಿಯಾಗಬೇಕೆಂದು ಬಯಸಿರಲಿಲ್ಲ. ಆತನೇ ಅವಳ ಮೊದಲಿನ ಮದುವೆ ಮತ್ತು ನಂತರ ಅವಳ ವಿಚ್ಛೇದನ ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ಅವಳ ಪರವಾಗಿ ತೆಗೆದುಕೊಂಡ. ಕಟ್ಟುನಿಟ್ಟಾದ ಕುಟುಂಬ ಮತ್ತು ಸಾಂಪ್ರದಾಯಿಕ ಮನಸ್ಥಿತಿಯ ತಂದೆ. ಆದರೆ ಜುಬೈದಾ ಬೇಗಂ ತನ್ನ ಚಿಕ್ಕಮ್ಮನೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಳು.

ಮದುವೆಯಾಗಿ ವಿಚ್ಛೇದನದ ಬಳಿಕ, ಜುಬೈದಾ ರಾಜಮನೆತನದ ವಿವಾಹವೊಂದರಲ್ಲಿ ಭಾಗವಹಿಸಿದ್ದಳು. ಆಗ ಆಕೆಯ ಸೊಬಗು ಮತ್ತು ನಡತೆ ಮಹಾರಾಜ ಹನ್ವಂತ್ ಸಿಂಗ್ ಅವರನ್ನು ಆಳವಾಗಿ ಪ್ರಭಾವಿಸಿತು. ಶೀಘ್ರದಲ್ಲೇ, ಅವರ ನಡುವೆ ಪ್ರಣಯ ಅರಳಲು ಪ್ರಾರಂಭಿಸಿತು. ನಟಿ ಮುಂಬೈಗೆ ಹಿಂದಿರುಗಿದರೂ, ಮಹಾರಾಜನ ಮೇಲಿನ ಅವಳ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚತೊಡಗತು. ಆತ ಅವಳು ಇದ್ದಲ್ಲಿದೆ ಬಂದು ಮಂಡಿಯೂರಿ ಮದುವೆಯ ಪ್ರಸ್ತಾಪ ಮಾಡಿದ. ಆಕೆ ಅದನ್ನು ಸ್ವೀಕರಿಸಿದಳು. ಆಕೆಯ ತಾಯಿ ಆರಂಭದಲ್ಲಿ ವಿರೋಧಿಸಿದರೂ, ಅಂತಿಮವಾಗಿ ಒಪ್ಪಿಕೊಂಡಳು. ಆದರೆ ಜುಬೈದಾಗೆ ಮೊದಲ ಮದುವೆಯಲ್ಲಿ ಜನಿಸಿದ ಮಗ, ಅವರೊಂದಿಗೆ ವಾಸಿಸುವ ಷರತ್ತು ಹಾಕಿದಳು. ಷರತ್ತು ಒಪ್ಪಿಕೊಂಡು, ಜುಬೈದಾ ಜೋಧಪುರಕ್ಕೆ ಸ್ಥಳಾಂತರಗೊಂಡಳು. ಜೊತೆಗೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಳು. ಡಿಸೆಂಬರ್ 1950 ರಲ್ಲಿ ಮಹಾರಾಜನನ್ನು ವಿವಾಹವಾದಳು. ಆದರೂ ಆ ರಾಜಮನೆತನ ಅವಳನ್ನು ಎಂದಿಗೂ ಸಂಪೂರ್ಣವಾಗಿ ಸ್ವೀಕರಿಸಲಿಲ್ಲ.

ನನಗೆ ಯಾವ ನಟರ ಜೊತೆಗೂ ದುಷ್ಮನಿ ಇಲ್ಲ ಅಂದ್ರು ಪವನ್ ಕಲ್ಯಾಣ್; ಇಲ್ಲ ಅಂದ್ಮೇಲೆ ಹೇಳಿದ್ಯಾಕೆ..?

ಮದುವೆಯಾಗಿ ಅವರು ಜೊತೆಗಿದ್ದುದು ಎರಡೇ ವರ್ಷ. ಜನವರಿ 26, 1952 ರಂದು ಅವರಿಬ್ಬರು ಇದ್ದ ವಿಮಾನ ದುರಂತಕ್ಕೀಡಾಯಿತು. ನಟಿ ಮತ್ತು ಮಹಾರಾಜರ ಜೀವಗಳನ್ನು ಬಲಿ ತೆಗೆದುಕೊಂಡಿತು. ಸುದ್ದಿ ಹೊರಬಂದ ನಂತರ, ಇದು ಪೂರ್ವಯೋಜಿತ ಕೃತ್ಯ ಎಂದು ಹಲವರು ತರ್ಕಿಸಿದರು. 2001ರಲ್ಲಿ, ಜುಬೈದಾ ಅವರ ಮಗ ಖಾಲಿದ್ ಮೊಹಮ್ಮದ್ ಅವರು ಜುಬೈದಾ ಅವರ ಜೀವನ ಕಥೆಯನ್ನು ಮತ್ತು ಮಹಾರಾಜರು ಅವಳ ಮೇಲೆ ಹೊಂದಿದ್ದ ಆಳವಾದ ಪ್ರೀತಿಯನ್ನು ಚಿತ್ರಿಸುವ ಚಲನಚಿತ್ರವನ್ನು ನಿರ್ಮಿಸಿದರು. ಜೋಧ್‌ಪುರದ ಕೆಲವು ನಿವಾಸಿಗಳು ಜುಬೈದಾ ಬೇಗಂ ಅವರ ಆತ್ಮವು ಉಮೈದ್ ಭವನ್ ಅರಮನೆಯನ್ನು ಇನ್ನೂ ಕಾಡುತ್ತಿದೆ ಎಂದು ನಂಬುತ್ತಾರೆ.

ದಂಪತಿಗಳ ಮರಣದ ನಂತರ, ಜುಬೈದಾ ಮತ್ತು ಮಹಾರಾಜರ ಮಗ ರಾವ್ ರಾಜಾ ಹುಕುಮ್ ಸಿಂಗ್ ಅಕಾ ಟುಟು, ಜೋಧಪುರದ ರಾಜಮಾತೆಯ ಮಡಿಲಲ್ಲಿ ಬೆಳೆದ. ಅವನ ತಂದೆತಾಯಿಗಳ ಹಾಗೆ ಅವನಿಗೂ ಹೆಚ್ಚು ಕಾಲ ಬದುಕುವ ಯೋಗ ಇರಲಿಲ್ಲ. ಮೂವತ್ತು ವರ್ಷ ತುಂಬುವ ಮೊದಲೇ, ಏಪ್ರಿಲ್ 17, 1981 ರಂದು, ಜೋಧ್‌ಪುರದ ಬೀದಿಯಲ್ಲಿ ಟುಟು ಶಿರಚ್ಛೇದಿತ ಸ್ಥಿತಿಯಲ್ಲಿ ಪತ್ತೆಯಾದ ಯಾರೋ ಅವನನ್ನು ಕೊಲೆ ಮಾಡಿದ್ದರು. ಯಾರು ಎಂಬುದು ಇಂದಿಗೂ ಪತ್ತೆಯಾಗಿಲ್ಲ.

ದೇವದಾಸ್‌ ಚಿತ್ರದ ಬಳಿಕ ಕುಡಿತದ ಚಟಕ್ಕೆ ದಾಸನಾದ್ರಾ ಶಾರುಖ್ ಖಾನ್‌?
 

Latest Videos
Follow Us:
Download App:
  • android
  • ios